ಬಿಜೆಪಿ ಸೇರಲಿಲ್ಲ ಎಂದು ನನ್ನ ಜೈಲಿಗೆ ಹಾಕಿಸಿದ್ದರು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆಗೆ ಭಾರತೀಯ ಜನತಾ ಪಾರ್ಟಿ ತಿರುಗೇಟು ನೀಡಿದೆ. ಈ ಸಂಬಂಧ ಕರ್ನಾಟಕ ಬಿಜೆಪಿ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ತಿಹಾರ್ ಯಾತ್ರೆ ನಡೆಸಿ ಹಲವು ವರ್ಷ ಕಳೆದ ಮೇಲೆ ಡಿ.ಕೆ ಶಿವಕುಮಾರ್ ನೀಡಿರುವ ಈ ಹೇಳಿಕೆ ನಂಬಲು ಸಾಧ್ಯವೇ? ಬಹುಶಃ ಸಿದ್ದರಾಮಯ್ಯ ಬಣ ನೀಡುತ್ತಿರುವ ಹಿಂಸೆ, ಮುಖ್ಯಮಂತ್ರಿ ಸ್ಥಾನಕ್ಕಾಗಿ ಹುಟ್ಟಿಕೊಂಡಿರುವ ಆಕಾಂಕ್ಷಿಗಳು ಹಾಗೂ ನಕಲಿ ಗಾಂಧಿ ಕುಟುಂಬದ ಆಶೀರ್ವಾದ ಕೊರತೆಯಿಂದ ಡಿಕೆಶಿ ಅವರು ಈ ಮಾತು ಆಡಿರಬಹುದು ಎಂದು ಬರೆದುಕೊಂಡಿದೆ.
ನಾನು ಬಿಜೆಪಿ ಜೊತೆ ಸಹಕರಿಸದೇ ಇರುವುದಕ್ಕಾಗಿ ನನ್ನನ್ನು ತಿಹಾರ್ ಜೈಲಿಗೆ ಕಳುಹಿಸಲಾಯ್ತು ಎಂದು ಭ್ರಷ್ಟಾಧ್ಯಕ್ಷ ಸಮರ್ಥನೆ ಕೊಟ್ಟುಕೊಂಡಿದ್ದಾರೆ. ಆದರೆ ಸತ್ಯ ಅದಲ್ಲ, ತೆರಿಗೆ ವಂಚನೆ ಹಾಗೂ ಅಕ್ರಮ ಸಂಪತ್ತಿನ ಮೂಲದ ತನಿಖೆಗೆ ಸಹಕರಿಸಿಲ್ಲ ಎಂಬ ಕಾರಣಕ್ಕೆ ಇಡಿ ಅಧಿಕಾರಿಗಳು ನಿಮ್ಮನ್ನು ತಿಹಾರಕ್ಕೆ ಕಳುಹಿಸಿದ್ದು ಎಂದು ಮತ್ತೊಂದು ಟ್ವೀಟ್ ಮಾಡಲಾಗಿದೆ.
ತಿಹಾರ್ ಯಾತ್ರೆ ನಡೆಸಿ ಹಲವು ವರ್ಷ ಕಳೆದ ಮೇಲೆ @DKShivakumar ನೀಡಿರುವ ಈ ಹೇಳಿಕೆ ನಂಬಲು ಸಾಧ್ಯವೇ?
ಬಹುಶಃ @siddaramaiah ಬಣ ನೀಡುತ್ತಿರುವ ಹಿಂಸೆ, ಮುಖ್ಯಮಂತ್ರಿ ಸ್ಥಾನಕ್ಕಾಗಿ ಹುಟ್ಟಿಕೊಂಡಿರುವ ಆಕಾಂಕ್ಷಿಗಳು ಹಾಗೂ ನಕಲಿ ಗಾಂಧಿ ಕುಟುಂಬದ ಆಶೀರ್ವಾದ ಕೊರತೆಯಿಂದ ಡಿಕೆಶಿ ಅವರು ಈ ಮಾತು ಆಡಿರಬಹುದು.
— BJP Karnataka (@BJP4Karnataka) December 6, 2021