ಸಿದ್ದರಾಮಯ್ಯ ಬೇಕಾದಷ್ಟು ಅಧಿಕಾರ ಅನುಭವಿಸಿದ್ದಾರೆ, ಇನ್ನೂ ಯಾಕೆ ಅದರ ಲಾಲಸೆಯೋ? ಸಚಿವ ವಿ ಸೋಮಣ್ಣ | Unable to fathom Siddaramaiah’s greed for power despite enjoying it in many years: V Somanna, Minister ARB


ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮಂತ್ರಿಯಾಗಿ, ಉಪ ಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಮತ್ತು ವಿರೋಧ ಪಕ್ಷದ ನಾಯಕನಾಗಿ ಬೇಕಾದಷ್ಟು ಅಧಿಕಾರ ಅನುಭವಿಸಿದ್ದಾರೆ, ಇನ್ನು ಸಾಕು ಮಾಡುವುದೊಳಿತು ಅಂತ ಸಚಿವ ವಿ ಸೋಮಣ್ಣ (V Somanna) ಅವರಿಗೆ ಸಲಹೆ ನೀಡಿದರು. ಶನಿವಾರ ಮೈಸೂರಿನಲ್ಲಿ (Mysuru) ಮಾಧ್ಯಮದವರೊಂದಿಗೆ ಮಾತಾಡಿದ ಸೋಮಣ್ಣ, ಮಾಜಿ ಮುಖ್ಯಮಂತ್ರಿಗಳ ಬಗ್ಗೆ ಎಂಥ ಭಾವನೆ ಇಟ್ಟುಕೊಂಡಿದ್ದಾರೆ ಅಂತ ಅರ್ಥವಾಗುಗೋದಿಲ್ಲ್ಲ ಮಾರಾಯ್ರೇ. ಯಾಕೆ ಗೊತ್ತಾ? ಒಂದು ಕಡೆ ಅವರು, ತಾನು ಸಿದ್ದರಾಮಯ್ಯನವರ ಗರಡಿಯಲ್ಲಿ ಪಳಗಿದವನು ಅಂತ ಹೇಳುತ್ತಾರೆ, ಮತ್ತೊಂದೆಡೆ ಮೂದಲಿಸುವ ಹಾಗೆ ಸಲಹೆ ನೀಡುತ್ತಾರೆ. ಈ ವಿಡಿಯೋನಲ್ಲಿ ಸೋಮಣ್ಣ ಆಡಿರುವ ಮಾತನಲ್ಲಿ ಗಮನಿಸಬೇಕಿರುವ ಮತ್ತೊಂದು ಅಂಶವೇನೆಂದರೆ ಅವರಿಗೆ ಡಿಕೆ ಶಿವಕುಮಾರ್ (DK Shivakumar) ಬಗ್ಗೆ ಸಾಫ್ಟ್ ಕಾರ್ನರ್ ಇದೆ. ಕೆಪಿಸಿಸಿ ಅಧ್ಯಕ್ಷ ಬಹಳ ಸೂಕ್ಷ್ಮತೆಯಿಂದ ಮಾತಾಡುತ್ತಾರೆ, ಅವರು ಅಸಂಭದ್ಧ ಹೇಳಿಕೆಗಳನ್ನು ನೀಡಲ್ಲ ಎಂದು ಹೇಳುವ ಅವರು ಸಿದ್ದರಾಮಯ್ಯ ಮಾತ್ರ ಮೈಮೇಲೆ ಪರಿವೆ ಇಲ್ಲದವರಂತೆ ಮಾತಾಡುತ್ತಾರೆ, ಈ ಹಿಂದೆ ಅವರ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಅವರ ಬಗ್ಗೆ ತಾನು ಹೇಳಿದ್ದು ಮಾಧ್ಯಮಗಳಲ್ಲಿ ವರದಿಯಾಗಿದೆ ಅಂತ ಹೇಳಿದರು.

ರಾಜ್ಯದ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡಲು ಪ್ರಯತ್ನಸುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳ ಪ್ರಯತ್ನವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರಾಜ್ಯಕ್ಕಿಂತ ದೇಶ ದೊಡ್ಡದು. ಎರಡರ ಏಳ್ಗೆಗೆ ಅಡ್ಡಿಯಾಗುವವರನ್ನು ಸುಮ್ಮನೆ ಬಿಡಲಾಗದು ಎಂದು ಸಚಿವ ಸೋಮಣ್ಣ ಹೇಳಿದರು.

ಭಾರತ ಭವ್ಯವಾದ ಇತಿಹಾಸವನ್ನು ಹೊಂದಿದೆ. ನಮ್ಮ ದೇಶದ ಮೇಲೆ ಘಜನಿ ಮೊಹಮ್ಮದ್ 17 ಸಾರಿ ದಂಡೆತ್ತಿ ಬಂದಿದ್ದ. ಅವನಲ್ಲದೆ ಇನ್ನೂ ಆನೇಕರು ನಮ್ಮ ದೇಶದಲ್ಲಿ ಆಡಳಿತ ನಡೆಸಿದ್ದಾರೆ. ಆದರೆ ನಮ್ಮ ದೇಶವನ್ನು ಬದಲಿಸುವುದು ಯಾರಿಂದಲೂ ಸಾಧ್ಯವಾಗಿಲ್ಲ. ಭಾರತ ಭಾರತವಾಗೇ ಉಳಿದಿದೆ. ಹಿಜಾಬ್ ವಿವಾದ ಬಗ್ಗೆ ಮಾತಾಡುದಾದರೆ ನಾವೆಲ್ಲ್ ಹೈಕೋರ್ಟ್ ಪೀಠ ಏನು ಹೇಳುತ್ತದೆ ಅದರಂತೆ ನಡೆಯೋಣ, ನ್ಯಾಯಾಲಯದ ಅದೇಶವನ್ನು ಪಾಲಿಸೋಣ ಎಂದು ಸೋಮಣ್ಣ ಹೇಳಿದರು.

TV9 Kannada


Leave a Reply

Your email address will not be published.