ಬೆಳಗಾವಿ: ಮತಾಂತರ ನಿಷೇಧ ಕಾಯ್ದೆಯ ಕುರಿತಾಗಿ ಮಾಜಿ ಸಿಎಂ ಯಡಿಯೂರಪ್ಪನವರು ಇಂದು ಬೆಳಗಾವಿ ಸುವರ್ಣಸೌಧದಲ್ಲಿ ಮಾತಾಡಿದರು. ಈ ಸಂಬಂಧ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ ನಿನ್ನೆ ಡಿ.ಕೆ ಶಿವಕುಮಾರ್ ಮತಾಂತರ ನಿಷೇಧ ಕಾಯ್ದೆ ಮಸೂದೆ ಪ್ರತಿ ಹರಿದು ಹಾಕಿದ್ದರು. ಈ ಮೂಲಕ ರೋಷಾವೇಶ ಪ್ರದರ್ಶಿಸಿದ್ದ ಡಿ.ಕೆ ಶಿವಕುಮಾರ್ ಇಂದು ನಾಪತ್ತೆಯಾಗಿದ್ದರು ಎಂದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಹುತೇಕ ಈ ಬಿಲ್ ತರೋಕೆ ಹೊರಟಿದ್ದರು. ಹಾಗೇ ನೋಡೋದಾದ್ರೆ ಎಲ್ಲರೂ ಈ ಬಿಲ್ ಒಪ್ಪಿದ್ದಾರೆ. ನಾವು ಮಾತ್ರ ಅದರಲ್ಲಿ ಸ್ವಲ್ಪ ಮಾರ್ಪಾಡು ಮಾಡಿದ್ದೇವೆ ಎಂದರು.
ಕಾಂಗ್ರೆಸ್ ಒಣ ಪ್ರತಿಷ್ಠೆಗೆ ಬಿದ್ದು ವಿರೋಧ ಮಾಡುತ್ತಿದೆ. ಸಿದ್ದರಾಮಯ್ಯ ಗಂಟೆಗಟ್ಟಲೇ ಮಾತಾಡೋದು ಬಿಟ್ಟು ಬಿಲ್ ಪಾಸ್ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.