ನವದೆಹಲಿ: ನಿನ್ನೆ ಪಕ್ಷದ ಸಭೆ ನಾನು ಹೋಗಬೇಕಾಗಿತ್ತು. ಆದರೆ ದೆಹಲಿಗೆ ಬಂದ ಕಾರಣ ಕಾರ್ಯಕ್ರಮದಲ್ಲಿ ಹಾಜರಾಗಲು ಆಗಲಿಲ್ಲ. ಆದ್ದರಿಂದ ಕಾರ್ಯಕ್ರಮಕ್ಕೆ ಬಂದಿರಲಿಲ್ಲ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಸ್ಪಷ್ಟನೆ ನೀಡಿದ್ದಾರೆ.
ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರ ಅಧಿಕಾರ ಸ್ವೀಕಾರದಲ್ಲಿ ಜಮೀರ್ ಬೆಂಬಲಿಗರು ಗಲಾಟೆ ಮಾಡಿದ್ರಾ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ಜಮೀರ್ ಅವರು, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರ ಆಯ್ಕೆ ಬಗ್ಗೆ ನನ್ನ ತಕಾರಿರಲ್ಲ. ಅಬ್ದುಲ್ ಜಬ್ಬಾರ್ ಹೆಸರು ನಾನೇ ಶಿಫಾರಸ್ಸು ಮಾಡಿದೆ. ಅವರ ಆಯ್ಕೆಗೆ ಸಹಮತ ಇದೆ. ಬೇರೆ ಹೆಸರು ಸೂಚಿಸಿದ್ದೆ ಅಷ್ಟರೊಳಗೆ ಅಬ್ದುಲ್ ಜಬ್ಬಾರ್ ಹೆಸರಿಗೆ ಹೈಕಮಾಂಡ್ ಒಪ್ಪಿಗೆ ಸೂಚಿಸಿದ್ದರು ಅಷ್ಟೇ.
ಸಿದ್ದರಾಮಯ್ಯ ಭಾಷಣಕ್ಕೆ ನಿನ್ನೆಯ ಕಾರ್ಯಕ್ರಮದಲ್ಲಿ ಅಡ್ಡಿಪಡಿಸಿಲ್ಲ. ಆದರೆ ಜೋರಾಗಿ ಜೈಕಾರ ಹಾಕಿದ್ದಾರೆ ಅಷ್ಟೇ. ಇದಕ್ಕೆಲ್ಲ ಬೇಜಾರಾಗೋ ವ್ಯಕ್ತಿ ಸಿದ್ದರಾಮಯ್ಯ ಅಲ್ಲ. ಇಂತಹದನ್ನೆಲ್ಲ ಕಂಡರೇ ಅವರು ಖುಷಿ ಪಡುತ್ತಾರೆ. ನಾನು ನಿನ್ನೆ ಸಿದ್ದರಾಮಯ್ಯ ಜೊತೆ ಮಾತನಾಡಿದ್ದೇನೆ. ನಾನು ಅನುಪಸ್ಥಿತಿಯಲ್ಲಿ ಇರೋ ಕಾರಣ ನಮ್ಮ ಜನ ಎಲ್ಲಿ ಅಂತ ಕೇಳಿದ್ದಾರೆ ಅಷ್ಟೇ ಎಂದರು.
ದೆಹಲಿಗೆ ಭೇಟಿ ನೀಡಿದ್ದ ಕಾರಣ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿದ್ದೇನೆ. ಹುಬ್ಬಳ್ಳಿ ಧಾರವಾಡದಲ್ಲಿ ಅಲ್ಪ ಅಂಖ್ಯಾತರಿಗೆ ಟಿಕೆಟ್ ಕೇಳಿದ್ದೇನೆ. ಕ್ಷೇತ್ರದಲ್ಲಿ ನಾಲ್ಕೈದು ಜನರು ಆಕಾಂಕ್ಷಿಗಳಿದ್ದಾರೆ. ಯಾರಿಗಾದ್ರು ನೀಡಲಿ ಆದರೆ ಅಲ್ಪ ಸಂಖ್ಯಾತರಿಗೆ ನೀಡಿ ಎಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಬೆಂಬಲಿಗ ಜಮೀರ್ ರನ್ನ ಕಾಂಗ್ರೆಸ್ನಲ್ಲಿ ತುಳಿಯುತ್ತಿದ್ದಾರೆ ಎಂಬ ರೇಣುಕಾಚಾರ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರೇಣುಕಾಚಾರ್ಯ ಅವರಿಗೆ ಬಿಜೆಪಿಯಲ್ಲಿ ಅನುಭವ ಇಂತಹ ಆಗಿದೆ. ಯಡಿಯೂರಪ್ಪ ಜೊತೆಗಿದ್ದ ಕಾರಣ ಅವರನ್ನು ತುಳಿದಿದ್ದಾರೆ. ಆದ್ದರಿಂದಲೇ ಅವರನ್ನು ಮಂತ್ರಿ ಕೂಡ ಮಾಡಿಲ್ಲ. ತುಳಿಯುವ ಸಂಸ್ಕೃತಿ ಬಿಜೆಪಿಯಲ್ಲಿದೆಯಷ್ಟೇ ಎಂದರು.