ತುಮಕೂರು: ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಮುನ್ನವೆ ಕಾಂಗ್ರೆಸ್ ಪಾಳಯದಲ್ಲಿ ಸಿಎಂ ಯಾರಾಗ್ತಾರೆ ಎಂಬ ಚರ್ಚೆಗಳು ಶುರವಾಗಿದೆ. ಇದಕ್ಕೆ ತುಮಕೂರಿನಲ್ಲಿ ಮಾಜಿ ಡಿಸಿಎಂ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಸಿದ್ದರಾಮಯ್ಯ ಮುಂದಿನ ಸಿಎಂ ಅನ್ನೋದು ಜಮೀರ್ ವ್ಯಯಕ್ತಿಕ ಅಭಿಪ್ರಾಯ ಎಂದು ಹೇಳಿದ್ದಾರೆ.

ಮುಂದಿನ ಸಿಎಂ ಸಿದ್ದರಾಮಯ್ಯರೇ ಎಂಬ ಜಮೀರ್ ಅಹ್ಮದ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅದು ಜಮೀರ್ ಅವರ ವೈಯಕ್ತಿಕ ಅಭಿಪ್ರಾಯ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯನವರೇ ಹೇಳಿದ್ದಾರೆ. ಹಾಗಾಗಿ ನಮ್ಮ ಜೊತೆ ಯಾರು ಫಾಲೊವರ್ಸ್ ಇರುತ್ತಾರೆ ಅಂತವರಿಗೆ ಕೆಲವು ಆಸೆಗಳಿರುತ್ತವೆ. ಅವರು ನಮ್ಮ ನಾಯಕರು ಹೀಗೆ ಆಗಬೇಕು, ಹಾಗೆ ಆಗಬೇಕು ಎಂಬ ಆಸೆ ಇರುತ್ತೆ. ಅದಕ್ಕೆ ಯಾವಾಗಲು ಸಿದ್ದರಾಮಯ್ಯನವರ ಜೊತೆ ಇರುವ ಜಮೀರ್‍ಗೆ ಅವರು ಸಿಎಂ ಆಗಬೇಕು ಎಂಬ ಆಸೆ ಇದೆ. ಕೆಲವೊಮ್ಮೆ ನಾನೂ ಸಿಎಂ ಆಗಬೇಕು ಎಂಬ ಆಸೆ ನಮ್ಮ ಬೆಂಬಲಿಗರದ್ದಾಗಿರುತ್ತದೆ.

ಅದೆಲ್ಲದಕ್ಕೂ ಮುಖ್ಯವಾಗಿ ರಾಜ್ಯದಲ್ಲಿ ಈ ಬಾರಿ ಪಕ್ಷವನ್ನ ಅಧಿಕಾರಕ್ಕೆ ತರುವಂತದ್ದನ್ನು ಪ್ರತಿಯೊಬ್ಬರೂ ಮಾಡಬೇಕು. ಅದು ನಮ್ಮ ಜವಾಬ್ದಾರಿಯಾಗಿದೆ. ಇನ್ನು ರಾಜ್ಯದಲ್ಲಿ ಬಿಜೆಪಿಯವರು ಜನರಿಗೆ ಕೆಟ್ಟ ಆಡಳಿತವನ್ನ ಕೊಟ್ಟಿದ್ದಾರೆ ಹಾಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಎಂದು ಕೊರಟಗೆರೆ ಶಾಸಕರಾಗಿರುವ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ನಮ್ಮಲ್ಲಿ ಪಕ್ಷದ ವ್ಯವಹಾರ ಅಂತಾ ಬಂದಾಗ ಕಾಂಗ್ರೆಸ್ ನ ರಾಜ್ಯಾಧ್ಯಕ್ಷರೇ ಇಲ್ಲಿ ಸುಪ್ರೀಂ ಆಗಿರುತ್ತಾರೆ. ಯಾರೇ ಅಧ್ಯಕ್ಷರಾಗಿದ್ದರೂ ಕಾಂಗ್ರೆಸ್ ಪಕ್ಷದ ಎಲ್ಲಾ ವ್ಯವಹಾರಗಳಿಗೆ ಅವರೇ ಸುಪ್ರೀಂ ಎನ್ನುವುದು ಸ್ಪಷ್ಟ. ನಮ್ಮಲ್ಲೀಗ ಡಿ.ಕೆ ಶಿವಕುಮಾರ್ ಗೆ ಹೈಕಮಾಂಡ್ ಅಧಿಕಾರ ಕೊಟ್ಟಿದೆ. ಅವರೇ ನಮ್ಮ ಕೆಪಿಸಿಸಿ ಅಧ್ಯಕ್ಷರು, ಅವರು ಹೇಗೆ ಹೇಳುತ್ತಾರೋ ಹಾಗೇ ನಮ್ಮ ಪಕ್ಷದ ಸದಸ್ಯರು ಕೇಳಲೇಬೇಕು. ಆದರೆ ಜಮೀರ್ ಮೇಲೆ ಶಿಸ್ತು ಕ್ರಮಕೂಗೊಳ್ಳುವವರೆಗೂ ಏನು ಬಂದಿಲ್ಲ. ಎಲ್ಲ ಸರಿಹೋಗುತ್ತೆ. ನಮ್ಮ ರಾಜ್ಯ ಕಾಂಗ್ರೆಸ್‍ನಲ್ಲಿ ಯಾವುದೇ ಬಣ ರಾಜಕೀಯ ಇಲ್ಲ, ನಾವೆಲ್ಲ ಒಟ್ಟಾಗಿದ್ದೇವೆ. ಆ ರೀತಿ ಏನಾದರೂ ಇದ್ದರೆ ಹೈಕಮಾಂಡ್ ಇದೆ. ಕಾಂಗ್ರೆಸ್ ಜನರಲ್ ಸೆಕ್ರೆಟರಿ ಸುರ್ಜೆವಾಲ ಇದ್ದಾರೆ. ಅವರೆಲ್ಲ ಸರಿಪಡಿಸುತ್ತಾರೆ ಎಂದು ಡಾ.ಜಿ.ಪರಮೇಶ್ವರ್ ಬಣ ರಾಜಕೀಯಕ್ಕೆ ತೆರೆ ಎಳೆದರು. ಇದನ್ನೂ ಓದಿ: ಸಿದ್ದರಾಮಯ್ಯ ಮುಂದಿನ ಸಿಎಂ ಅನ್ನೋದು ಜಮೀರ್ ವ್ಯಯಕ್ತಿಕ ಅಭಿಪ್ರಾಯ: ಜಿ.ಪರಮೇಶ್ವರ್

The post ಸಿದ್ದರಾಮಯ್ಯ ಮುಂದಿನ ಸಿಎಂ ಅನ್ನೋದು ಜಮೀರ್ ವ್ಯಯಕ್ತಿಕ ಅಭಿಪ್ರಾಯ: ಜಿ.ಪರಮೇಶ್ವರ್ appeared first on Public TV.

Source: publictv.in

Source link