ಸಿದ್ದರಾಮಯ್ಯ ರೀಡೂ, ಬೇಡವಾದವರು ಪೋಸ್ಟರ್ ಅಂಟಿಸಿದವರನ್ನೂ ಪೊಲೀಸರು ಬಂಧಿಸಲಿ: ಸಿದ್ದರಾಮಯ್ಯ | Siddaramaiah dares police to arrest people who pasted posters showing him in bad light‘ಸಿದ್ದರಾಮಯ್ಯ ರೀಡೂ, ಬೇಡವಾದವರು’ ಅಂತ ಪೋಸ್ಟರ್ ಗಳನ್ನು ಅಂಟಿಸಿದ ಬಿಜೆಪಿ ಕಾರ್ಯಕರ್ತರನ್ನೂ ಪೊಲೀಸರು ಬಂಧಿಸಲಿ ಅಂತ ಅವರು ಸವಾಲೆಸೆದರು

TV9kannada Web Team


| Edited By: Arun Belly

Sep 22, 2022 | 12:27 PM
ಬೆಂಗಳೂರು:  ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವಿನ ಕಿತ್ತಾಟ ಮುಂದುವರಿದಿದೆ ಮಾರಾಯ್ರೇ. ಬುಧವಾರದಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ಧ ‘ಪೇಸಿಮ್’ (PayCM) ಪೋಸ್ಟರ್ ಗಳನ್ನು ಗೋಡೆಗಳಿಗೆ ಅಂಟಿಸಿದ್ದರು. ಪೋಸ್ಟರ್ ಅಂಟಿಸಿದವರ ಪೈಕಿ ಪಿಅರ್ ನಾಯ್ಡು (PR Naidu) ಹಾಗೂ ಮತ್ತೊಬ್ಬರನ್ನು ಪೊಲೀಸರು ಬಂಧಿಸಿದ್ದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಪೊಲೀಸರ ಕ್ರಮವನ್ನು ತೀವ್ರವಾಗಿ ಖಂಡಿಸಿ ಅವರೇನು ಕಳ್ಳರೆ, ಕೊಲೆಡುಕರೇ ಅಂತ ಕೇಳಿದರು. ‘ಸಿದ್ದರಾಮಯ್ಯ ರೀಡೂ, ಬೇಡವಾದವರು’ ಅಂತ ಪೋಸ್ಟರ್ ಗಳನ್ನು ಅಂಟಿಸಿದ ಬಿಜೆಪಿ ಕಾರ್ಯಕರ್ತರನ್ನೂ ಪೊಲೀಸರು ಬಂಧಿಸಲಿ ಅಂತ ಸವಾಲೆಸೆದ ಅವರು ನಾವು ಸುಮ್ಮನೆ ಕೂರೋದಿಲ್ಲ, ಬಿಜೆಪಿ ಭ್ರಷ್ಟಾಚಾರದ ಹೋರಾಟ ಪಕ್ಷದ ಕಾರ್ಯಕ್ರಮವಾಗಿದೆ, ಇದನ್ನು ಅಧಿಕೃತವನ್ನಾಗಿ ಮಾಡುತ್ತೇವೆ ಎಂದು ಹೇಳಿದರು.

TV9 Kannada


Leave a Reply

Your email address will not be published.