ಸಚಿವ ಕೆ.ಎಸ್.ಈಶ್ವರಪ್ಪ (ಸಂಗ್ರಹ ಚಿತ್ರ)
ಕೊಪ್ಪಳ: ಈ ಪುಣ್ಯ ಕ್ಷೇತ್ರದಲ್ಲಿ ನಾನು ಸಿದ್ದರಾಮಯ್ಯ ಹೆಸರನ್ನು ನನ್ನ ಬಾಯಿಂದ ಹೇಳಲ್ಲ. ನಾನು ನನ್ನ ನಾಲಿಗೆಯನ್ನು ಪವಿತ್ರವಾಗಿ ಇಟ್ಟುಕೊಂಡಿದ್ದೇನೆ. ಆ ಪುಣ್ಯಾತ್ಮನ ಹೆಸರು ಹೇಳಿ ನಾಲಿಗೆ ಹೊಲಸು ಮಾಡಿಕೊಳ್ಳಲ್ಲ. ಸಿದ್ದರಾಮಯ್ಯ ತಾನು ದಲಿತ ಅಂತಾರೆ. ಸಿದ್ದರಾಮಯ್ಯ ದಲಿತರೂ ಹೌದು, ಮುಸ್ಲಿಮರೂ ಹೌದು ಎಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಸಿದ್ದರಾಮಯ್ಯ ಕುರಿತು ಪ್ರಶ್ನೆ ಕೇಳಿದ್ದಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಬಿಟ್ ಕಾಯಿನ್ ದಂಧೆಯಲ್ಲಿ ಯಾರೇ ಇದ್ದರು ಕಿತ್ತೆಸೆಯುತ್ತೇವೆ: ಸಚಿವ ಈಶ್ವರಪ್ಪ
ಬಿಟ್ ಕಾಯಿನ್ ದಂಧೆಯಲ್ಲಿ ಯಾರೇ ಮಂತ್ರಿಗಳು ಅಥವಾ ಯಾರೇ ಇದ್ದರೂ ಒಂದು ಕ್ಷಣವೂ ಇಟ್ಟುಕೊಳ್ಳಲ್ಲ. ಕಾಂಗ್ರೆಸ್‌ನವರು ಬದುಕಿದ್ದೇವೆಂದು ತೋರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಬಿಟ್ ಕಾಯಿನ್ ದಂಧೆ ಬಗ್ಗೆ ಮಾತಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಸ್ಪರ್ಧಾತ್ಮಕವಾಗಿ ಮಾತನಾಡುತ್ತಿದ್ದಾರೆ. ನಾ ಮುಂದು ತಾ ಮುಂದು ಎಂದು ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ಬಳಿಕ ಪ್ರಿಯಾಂಕ್ ಖರ್ಗೆ ಮಾತಾಡುತ್ತಿದ್ದಾರೆ ಎಂದು ಕೊಪ್ಪಳದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ತಿಳಿಸಿದ್ದಾರೆ.
Siddaramaiah: ಜಿಟಿ ದೇವೇಗೌಡ ನನ್ನನ್ನೇ ಚುನಾವಣೆಯಲ್ಲಿ ಸೋಲಿಸಿದ್ದ ಗಿರಾಕಿ; ಜಿಟಿಡಿ ಬಗ್ಗೆ ಸಿದ್ದರಾಮಯ್ಯ ಗುಣಗಾನ