ಗ್ರಾಮದ ಪಂಚಾಯತ್ ಸದಸ್ಯರಾಗಿರುವ ಹನುಮಂತಪ್ಪ ಲಕ್ಷ್ಮೇಶ್ವರದಿಂದ ಬುಧವಾರ ತಮ್ಮ ನೆಚ್ಚಿನ ನಾಯಕ ಸಿದ್ದರಾಮಯ್ಯಮನವರ ಹುಟ್ಟುಹಬ್ಬ ಆಚರಣೆ ನಡೆಯಲಿರುವ ದಾವಣಗೆರೆಗೆ ಕಾಲ್ನಡಿಗೆ ಅದೂ ಬರಿಗಾಲಲ್ಲಿ ಹೋಗುತ್ತಿದ್ದಾರೆ.
ಇದು ಅಭಿಮಾನವೋ, ಪ್ರೀತಿಯೋ ಅಥವಾ ಮತ್ತೇನೋ ಅಂತ ನೀವೇ ನಿರ್ಧರಿಸಬೇಕು ಮಾರಾಯ್ರೇ. ಇಲ್ಲಿ ನಡೆದು ಬರುತ್ತಿರುವರಲ್ಲ, ಇವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ದೊಡ್ಡ ಅಭಿಮಾನಿ. ಸಂಶಿ ಗ್ರಾಮದ ಪಂಚಾಯತ್ ಸದಸ್ಯರಾಗಿರುವ ಹನುಮಂತಪ್ಪ (Hanumanthappa) ಲಕ್ಷ್ಮೇಶ್ವರದಿಂದ ಬುಧವಾರ ತಮ್ಮ ನೆಚ್ಚಿನ ನಾಯಕ ಸಿದ್ದರಾಮಯ್ಯಮನವರ ಹುಟ್ಟುಹಬ್ಬ ಆಚರಣೆ ನಡೆಯಲಿರುವ ದಾವಣಗೆರೆಗೆ ಕಾಲ್ನಡಿಗೆ ಅದೂ ಬರಿಗಾಲಲ್ಲಿ ಹೋಗುತ್ತಿದ್ದಾರೆ. ಅಂದಹಾಗೆ ಇವರು ಕ್ರಮಿಸಲಿರುವ ದೂರ 120 ಕಿಮೀ!