ಸಿದ್ದರಾಮೋತ್ಸವ: ಸಿದ್ದರಾಮಯ್ಯ ಬರ್ತ್​ಡೇಗೆ ಅಭಿಮಾನಿಗಳಿಂದ 3 ಕಿ.ಮೀ ಉದ್ದದ ಬ್ಯಾನರ್ ಗಿಫ್ಟ್ | Siddaramaiah Birthday 3 km long banner getting ready for Siddaramothsavaಸಿದ್ದರಾಮೋತ್ಸವಕ್ಕೆ ಸಿದ್ಧವಾಗುತ್ತಿದೆ 3 ಕಿ.ಮೀ ಉದ್ದದ ಸಿದ್ದರಾಮಯ್ಯ ಅವರ ಜೀವನ ಚರಿತ್ರೆ ಸಾರುವ ಬ್ಯಾನರ್. ಸೂರತ್​ನಲ್ಲಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿದ್ಧವಾಗುತ್ತಿರುವ ಈ ಬ್ಯಾನರ್ ಮಂಗಳವಾರದಂದು ದಾವಣಗೆರೆಗೆ ತಲುಪಲಿದೆ.

TV9kannada Web Team


| Edited By: Rakesh Nayak

Aug 01, 2022 | 6:27 PM
ದಾವಣಗೆರೆ: ಮಾಜಿ ಮುಖ್ಯಮಂತ್ರಿಯೂ ಆಗಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರಿಗೆ ಆಗಸ್ಟ್ 3ರಂದು 75 ವರ್ಷ ತುಂಬಲಿದೆ. ಇದರ ಪ್ರಯುಕ್ತ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ಸಿದ್ದರಾಮೋತ್ಸವವನ್ನು ಆಯೋಜಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಅತ್ಯಂತ ವಿಶೇಷವಾಗಿರುವುದು 3 ಕಿ.ಮೀ ಉದ್ದದ ಬ್ಯಾನರ್. ಸಿದ್ದರಾಮಯ್ಯ ಅವರು 75 ವರ್ಷಗಳಲ್ಲಿ ನಡೆದುಕೊಂಡು ಬಂದ ಸಾಧನೆಯ ಹಾದಿಗಳು, ಜೀವನ ಚರಿತ್ರೆ ಸಾರುವ ವಿಶೇಷ ಫೋಟೋಗಳು ಇರುವ ಬೃಹತ್ ಬ್ಯಾನರ್ ಸಿದ್ಧವಾಗುತ್ತಿದೆ. ಈ ಬ್ಯಾನರ್ ಅನ್ನು ಒಟ್ಟು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಸೂರತ್​ನಲ್ಲಿ ತಯಾರಿಸಲಾಗುತ್ತಿದೆ. ಈ ಬ್ಯಾನರ್ ನಾಳೆ ದಾವಣಗೆರೆಗೆ ತಲುಪಲಿದೆ.

TV9 Kannada


Leave a Reply

Your email address will not be published. Required fields are marked *