ಕೊರೊನದಿಂದ ಚಿತ್ರರಂಗ ಸಂಪೂರ್ಣವಾಗಿ ಸ್ತಬ್ಧ ಆಗಿದೆ. ಈ‌ ಸಂದರ್ಭದಲ್ಲಿ ಕೆಲ ಸ್ಟಾರ್​​​​ಗಳು ಫ್ಯಾಮಿಲಿ ಜೊತೆ ಟೈಂ ಸ್ಪೆಂಡ್ ಮಾಡ್ಕೊಂಡ್‌ ಕಾಲ ಕಳೆಯುತ್ತಿದ್ದಾರೆ. ಇನ್ನು ಕೆಲ ನಟ-ನಟಿಯರು ತಮ್ಮ ತಮ್ಮ ತೋಟ ಹಾಗೂ ಜಮೀನಿನಲ್ಲಿ ಕೃಷಿ ಕೆಲಸದಲ್ಲಿ ನಿರತರಾಗಿ, ಕೈ ಕೆಸರಾದ್ರೆ ಬಾಯಿ ಮೊಸರು ಅಂತಿದ್ದಾರೆ. ಅದೇ ರೀತಿ ಇದೀಗ ಕಲಿವೀರ ಸಿನಿಮಾ ಖ್ಯಾತಿಯ ನವ ನಟ  ಏಕಲವ್ಯ ಕೂಡ, ಈ ಕೊರೊನಾ ಟೈಂ ನಲ್ಲಿ ಅಪ್ಪಟ ರೈತನಾಗಿದ್ದಾರೆ.

ಸ್ವಂತ ಪರಿಶ್ರಮದಿಂದ ಸಮರ ಕಲೆ, ಯೋಗಾಸನ ಕಲಿತಿರುವ ಏಕಲವ್ಯ, ಕಲಿವೀರ ಸಿನಿಮಾದಲ್ಲಿ ಸಾಹಸ ದೃಶ್ಯಗಳಿಂದಲ್ಲೇ ಗಾಂಧಿನಗರದ ಮಂದಿ ಹುಬ್ಬೇರಿಸಿದ್ದರು. ಈಗ ಕೈಯಲ್ಲಿ ಸನಿಕೆ ಹಿಡಿದು ಹೊಲಕ್ಕೆ ನೀರಾಯಿಸಿ ರೇಷ್ಮೇ ಬೆಳೆದು ಸೈ ಅನಿಸಿಕೊಂಡಿದ್ದಾರೆ.

ಅಪ್ಪಟ್ಟ ಗ್ರಾಮೀಣ ಪ್ರತಿಭೆಯಾದ ಏಕಲವ್ಯ ಕಲಿವೀರ ಚಿತ್ರದ ಮೂಲಕ ಚಿತ್ರರಂಗದಲ್ಲಿ ಮಿಂಚೋದಿಕ್ಕೆ ರೆಡಿಯಾಗಿದ್ದಾರೆ. ಇನ್ನೇನು ಕಲಿವೀರ ಸಿನಿಮಾ ತೆರೆಗೆ ಬರಬೇಕು ಅಂದುಕೊಳ್ಳುವಷ್ಟರಲ್ಲಿ ಕೊರೊನ ಕರಿ ನೆರಳಿನಲ್ಲಿ ಚಿತ್ರರಂಗದ ಬಣ್ಣ ಮಾಸಿದೆ. ಇದರಿಂದ ಸುಮ್ಮನೆ ಕೂರದೆ  ಏಕಲವ್ಯ  ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ಗೆಳೆಯ ತೋಟದಲ್ಲಿ ಕಳೆದ ಇಪ್ಪತ್ತು ದಿನಗಳಿಂದ, ತೋಟದಲ್ಲಿ ರೈತನಾಗಿ ಕೆಲಸ ಮಾಡುತ್ತಿದ್ದಾರೆ.

 

The post ಸಿನಿಮಾದಲ್ಲಿ ಸಾಹಸ ಮಾಡೋಕು ಸೈ, ರೇಷ್ಮೆ ಬೆಳೆಯೋಕು ಸೈ ಈ ಸಾಹಸಿ ವೀರ appeared first on News First Kannada.

Source: newsfirstlive.com

Source link