ಜೀವನದಲ್ಲಿ ಸಾವು ಖಚಿತ ನೋವು ಉಚಿತ.. ಆದ್ರೆ ಇರೋತನಕ ನಮ್ಮ ನಮ್ಮ ಕರ್ತವ್ಯವನ್ನ ಮಾಡ್ಲೇ ಬೇಕು.. ಆದ್ರಲ್ಲು ಪರರಿಗೆ ಒಳಿತಾಗುವಂತ ಕೆಲಸವನ್ನ ಮಾಡಿದ್ರೇ ಮನುಷ್ಯ ಜೀವನ ಸಾರ್ಥಕ ಸಾಕ್ಷಾತ್ಕಾರವಾಗೋದು.. ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಮುದ್ದು ಸಹೋದರ ನೋವಿನ ನಡುವೆಯೂ ತನ್ನ ಕರ್ತವ್ಯವನ್ನ ತೊರೆಯದೆ ಸಿನಿಮಾ ಅಖಾಡಕ್ಕೆ ಇಳಿದೇ ಬಿಟ್ಟಿದ್ದಾರೆ..
ನಮಗೆ ಗೊತ್ತಿರೋದು ಸಿನಿಮಾ ಮಾತ್ರ.. ಸಿನಿಮಾ ಬಿಟ್ರೇ ನಾವು ಏನ್ ಮಾಡೋಕೆ ಆಗುತ್ತೆ.. ಸಿನಿಮಾ ಇಲ್ಲದಿದ್ರೆ ನಾನು ರೈತನಾಗಿ ಬಿಡ್ತಿದೆ.. ಇದು ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅವರ ಮಾತುಗಳು.. ಆಗಾಗ ತನ್ನ ಸಿನಿಮಾ ಕರ್ತವ್ಯವನ್ನ ಮಾತನಾಡೋ ಶಿವಣ್ಣ ಸಿನಿಮಾ ರಂಗವನ್ನ ತನ್ನ ಕರ್ಮ ಭೂಮಿ ಸಿನಿಮಾ ತನ್ನ ಧರ್ಮ ಎಂದು ಭಾವಿಸಿದ್ದಾರೆ ಕಲೆಯನ್ನೆ ನಂಬಿ ಜೀವಿಸುತ್ತಿದ್ದಾರೆ..
ಮುದ್ದು ತಮ್ಮನನ್ನ ಕಳೆದುಕೊಂಡಿರುವ ನೋವಿನಲ್ಲಿರುವ ಶಿವಣ್ಣ ತನ್ನ ಕರ್ತವ್ಯಕ್ಕೆ ಮತ್ತೆ ಹಾಜರಾಗಿದ್ದಾರೆ.. ಲೈಫ್ ಮಸ್ಟ್ ಬಿ ಗೋ ಆನ್ ಅನ್ನೋ ಶಿವಣ್ಣ ಹೊಸ ಸಿನಿಮಾದ ಶೂಟಿಂಗ್ ಅಂಗಳಕ್ಕೆ ಬಲಗಾಲಿಟ್ಟಿದ್ದಾರೆ.. ತನಗಾಗಿ ಹೊಸ ಹೊಸ ನಿರ್ದೇಶಕರು ಹತ್ತಾರು ನಿರ್ಮಾಪಕರು ಕನಸಿನಿಂದ ಸಿನಿಮಾ ಮಾಡಲು ಮುಂದೆ ಬರುತ್ತಾರೆ ಅನ್ನೋ ವಿಚಾರವನ್ನ ಅರಿತಿರುವ ಕರುನಾಡ ಚಕ್ರವರ್ತಿ ಯಾರಿಗೂ ಬೆಸರ ಮಾಡದೇ ಎಷ್ಟೆ ಬೇಸರ ಎದೆಯೊಳಗೆ ಇದ್ದರು ಶೂಟಿಂಗ್ ಅಂಗಳಕ್ಕೆ ಇಳಿಸಿದ್ದಾರೆ.. ಹಾಗಾದ್ರೆ ಶಿವಣ್ಣ ಶೂಟಿಂಗ್ ಅಡ್ಡಕ್ಕೆ ಇಳಿದಿರುವ ಸಿನಿಮಾ ಯಾವುದು ಅನ್ನೋ ಪ್ರಶ್ನೆಗೆ ಉತ್ತರ ವೇದ..
ಬೇರೆ ಯಾರೇ ಇದಿದ್ದರು ಒಂದೋ ಎರಡೋ ವರ್ಷ ಸಿನಿಮಾ ರಂಗದಿಂದ ಸಾರ್ವಜನಿಕ ರಂಗದಿಂದ ದೂರ ಇರ್ತಿದ್ರೇನೋ ಆದ್ರೆ ಸಿನಿಮಾ ರಂಗವೇ ನನ್ನ ಕುಟುಂಬ ಅಭಿಮಾನಿಗಳೇ ನಮ್ಮನೆ ದೇವರು ನಿರ್ಮಾಪಕರೇ ನನ್ನ ಅನ್ನದಾತರು ಎಂದು ನಂಬಿರುವ ಶಿವಣ್ಣ ಸಿನಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.. ಭಜರಂಗಿ ಭಕ್ತ ಎ.ಹರ್ಷ ನಿರ್ದೇಶನದಲ್ಲಿ ಮೂಡಿಬರಲಿರುವ ನಾಲ್ಕನೆ ಸಿನಿಮಾ ವೇದ ಚಿತ್ರಕ್ಕೆ ಶಿವಣ್ಣ ಸಜ್ಜಾಗಿದ್ದಾರೆ..
ಇಂದು ಬೆಳಂ ಬೆಳಗ್ಗೆ 4ಗಂಟೆಗೆ ಸುಮಾರಿಗೆ ಬೆಂಗಳೂರಿನ ಯಡಿಯೂರು ಲೇಕ್ ಬಳಿರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸದ್ದಿಲ್ಲದೆ ವೇದ ಚಿತ್ರದ ಮುಹೂರ್ತವಾಗಿದೆ..
ವೇದ ಸಿನಿಮಾದ ಮುಹೂರ್ತ ಮುಗಿಸಿ ಶಿವಣ್ಣ ಹಾಜರಾಗಿದ್ದು ಸೈಕಲ್ ಜಾಥಕ್ಕೆ..
ಅಗಲಿದೆ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರಿಗೆ ವಿಶೇಷ ಗೌರವ ಸಮರ್ಪಣೆಗಾಗಿ ಕೆಎಸ್ ಆರ್ ಪಿ ಹಾಗೂ ಸಂಚಾರಿ ಪೊಲೀಸರು ಸೈಕಲ್ ಜಾಥವನ್ನ ಹಮ್ಮಿಕೊಂಡಿದ್ರು.. ಕಂಠೀರವ ಸ್ಟೇಡಿಯಂನಿಂದ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿ ತನಕ ಸೈಕಲ್ ಜಾಥವನ್ನ ಏರ್ಪಡಿಸಲಾಗಿತ್ತು.. ಅಪ್ಪು ಸಮಾಧಿಗೆ ಪುಷ್ಪಾರ್ಚನೆ ಮಾಡಿ ಪೊಲೀಸ್ ಬ್ಯಾಂಡ್ ಮೂಲಕ ಗೌರವ ಸಮರ್ಪಣೆ ಮಾಡಿದ್ರು.. ಪುನೀತ್ ಅಭಿನಯದ ಗೀತೆಗಳನ್ನ ಬ್ಯಾಂಡ್ ಮೂಲಕ ಬಾರಿಸಿದ್ರೆ ನೆರೆದಿದ್ದ ಸಿಬ್ಬಂದಿ ಹಾಗೂ ಜನರನ್ನು ಭಾವುಕರನ್ನಾಗಿ ಮಾಡಿತು.
ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಪುಣ್ಯ ನೆನಪಿಗಾಗಿ ಕೆಎಸ್ ಆರ್ ಪಿ ಎಡಿಜಿ ಅಲೋಕ್ ಕುಮಾರ್ ಸಂಚಾರಿ ವಿಭಾಗ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ನೇತೃತ್ವದಲ್ಲಿ ೬೬ ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಸೈಕಲ್ ಜಾಥ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮವನ್ನು ಕಂಠೀರವ ಸ್ಟುಡಿಯೋದಲ್ಲಿ ಉದ್ಘಾಟಿಸಿದ ಡಾ.ಶಿವರಾಜ್ ಕುಮಾರ್ ತಮ್ಮನ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ರು.. ನಂತರ ಜಾಥಗೆ ಶಿವಣ್ಣ ಚಾಲನೆ ನೀಡಿದ್ರೆ ಪುನೀತ್ ಸಮಾಧಿ ತಲುಪಿದ ಸಿಬ್ಬಂದಿಗಳು ನಮನ ಸಲ್ಲಿಸಿದ್ರು.
ಒಟ್ಟು 50 ಕಿಲೋಮೀಟರ್ ಸಾಗಿದ ಈ ಜಾಥ ಮೊದಲಿಗೆ ಪುನೀತ್ ರಾಜ್ ಕುಮಾರ್ ಸಮಾಧಿ ತಲುಪಿತು.ಅಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ರಾಘವೇಂದ್ರ ರಾಜ್ ಕುಮಾರ್ ಸಮ್ಮುಖದಲ್ಲಿ ಪುಷ್ಪಾರ್ಚನೆ ಮಾಡಿದ್ರು.ನಂತರ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್.ಪುನೀತ್ ಗೆ ಎಲ್ಲಾ ಕ್ಷೇತ್ರಗಳಲ್ಲೂ ಅಭಿಮಾನಿಗಳಿದ್ದಾರೆ ನನ್ನ ತಮ್ಮ ಮೃತ್ಯುಂಜಯ .ಅಭಿಮಾನಿಗಳಿಗೆ ಸಾಷ್ಟಾಂಗ ನಮಸ್ಕಾರ ಎಂದು ಭಾವುಕರಾದ್ರು
ಒಟ್ಟಿನಲ್ಲಿ ಶಿವಣ್ಣ ಎಷ್ಟೇ ನೋವಿನಲ್ಲಿದ್ದರು ತನ್ನ ಕರ್ತವ್ಯವನ್ನ ಮರೆಯದ ತನ್ನ ನಂಬಿದವರಿಗೆ ಬೇಸರ ಮಾಡದೆ ತನ್ನ ಕೆಲಸವನ್ನ ಮಾಡ್ತಿರೋದು ನಿಜಕ್ಕೂ ಮೆಚ್ಚುವಂಥ ವಿಚಾ