ಚಿತ್ರರಂಗಕ್ಕೆ ನಿತ್ಯ ಹೊಸಹೊಸ ಕಲಾವಿದರ ಸೇರ್ಪಡೆ ಆಗುತ್ತಲೇ ಇರುತ್ತದೆ. ಟ್ಯಾಲೆಂಟ್ ಇದ್ದವರಿಗೆ ಮಣೆ ಹಾಕಲಾಗುತ್ತದೆ. ಇದರ ಜತೆಗೆ ಹೊಸಹೊಸ ಕಲಾವಿದರಿಗೆ ಹೆಚ್ಚು ಅವಕಾಶ ನೀಡಲಾಗುತ್ತಿದೆ. ಈ ಮಧ್ಯೆ ಸ್ಯಾಂಡಲ್ವುಡ್ನಲ್ಲಿ (Sandalwood) ಹಿರಿಯ ನಟರಿಗೆ ಅವಕಾಶವಿಲ್ಲ ಎನ್ನುವ ಆರೋಪವನ್ನು ಒಂದಷ್ಟು ಮಂದಿ ಮಾಡುತ್ತಿದ್ದಾರೆ. ಇದಕ್ಕೆ ಹಿರಿಯ ನಟ ಬೆಂಗಳೂರು ನಾಗೇಶ್ (Bengaluru Nagesh) ಧ್ವನಿಗೂಡಿಸಿದ್ದಾರೆ. ‘ಸಿನಿಮಾ ರಂಗದಲ್ಲಿ ನಮಗೆ ಅವಕಾಶ ಸಿಗುತ್ತಿಲ್ಲ. ಆದರೆ, ಕಿರುತೆರೆಗಳು (Serial Industry) ನಮ್ಮ ಕೈ ಹಿಡಿದಿವೆ’ ಎಂದಿದ್ದಾರೆ ಅವರು. ‘ಗಂಧದ ಗುಡಿ’, ‘ಮಯೂರ’ ಮೊದಲಾದ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ನಾಗೇಶ್ ಅವರು ಕೆಲಸ ಮಾಡಿದ್ದರು. ‘ಗುರು ಶಿಷ್ಯರು’, ‘ಬಂಗಾರದ ಮನುಷ್ಯ’, ‘ಶರಪಂಜರ’ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಅವರು ನಟಿಸಿದರು. ಚಿತ್ರರಂಗಕ್ಕೆ ಸಾಕಷ್ಟು ಸೇವೆಯನ್ನ ಸಲ್ಲಿಸಿರುವ ಬೆಂಗಳೂರು ನಾಗೇಶ್ ತಮ್ಮ ಸಿನಿ ಜೀವನವನ್ನು ಮೆಲುಕು ಹಾಕಿದ್ದಾರೆ.