ಸಿನಿಮಾ ವಿತರಣೆಗೂ ಕಾಲಿಟ್ಟ ‘ಡಿ ಬೀಟ್ಸ್’

ಸ್ಯಾಂಡಲ್​ವುಡ್​ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಮತ್ತು ಶೈಲಜಾ ನಾಗ್ ಒಡೆತನದ ಆಡಿಯೋ ಕಂಪನಿ ‘ಡಿ ಬೀಟ್ಸ್’ ಇನ್ನು ಮುಂದೆ ಸಿನಿಮಾಗಳ ವಿತರಣೆಗೂ ಮುಂದಾಗಿದೆ.

ಈ ಕುರಿತು ಮಾತನಾಡಿರುವ ನಿರ್ದೇಶಕ ಹರಿಕೃಷ್ಣ, ಇತ್ತೀಚಿನ ದಿನಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚಾಗುತ್ತಿದ್ದು, ನಾವು ಕೂಡ ಅದಕ್ಕೆ ಹೊಂದಿಕೊಳ್ಳುವುದು ಮುಖ್ಯವಾಗಿದೆ. ಹೀಗಾಗಿ ‘ಡಿ ಬೀಟ್ಸ್’ ಆಡಿಯೋ ಬಿಡುಗಡೆ ಜೊತೆಗೆ ಸಿನಿಮಾ ವಿತರಣೆಗೆ ನಾವು ಮುಂದಾಗಿದ್ದೇವೆ ಎಂದು ಸಂಗೀತ ಸಂಯೋಜಕ-ನಿರ್ದೇಶಕ ವಿ.ಹರಿಕೃಷ್ಣ ಹೇಳಿದ್ದಾರೆ.

ಶೈಲಜಾ ನಾಗ್ ಅವರು ಮಾತನಾಡಿ, ಸಿನಿಮಾ ವಿತರಣೆಯು ನಮ್ಮ ಮುಂದಿನ ಹಂತವಾಗಿದೆ. ವಿಚಾರಗಳು ಹಾಗೂ ವ್ಯವಹಾರಗಳು ಪರಸ್ಪರ ಅವಲಂಬಿತವಾಗಿವೆ. ಯಜಮಾನ ಬೆಳ್ಳಿತೆರೆಗೆ ನಮ್ಮ ಮೊದಲ ಸಂಯೋಜಿತ ಚಿತ್ರವಾಗಿತ್ತು. ಅಲ್ಲಿ ಸಿನಿಮಾ ವಿತರಣೆಯ ಮೊದಲ ಅನುಭವವನ್ನು ಪಡೆದಿದ್ದೆವು. ಬ್ಯಾಲೆನ್ಸ್ ಶೀಟ್ ಉತ್ತಮರೀತಿಯಲ್ಲಿ ಕಂಡು ಬಂದಿದ್ದೇ ಆದರೆ, ಕಂಪನಿ ಉತ್ತಮ ರೀತಿಯಲ್ಲಿ ಮುನ್ನಡೆಯಲಿದೆ ಎಂದಿದ್ದಾರೆ.

News First Live Kannada

Leave a comment

Your email address will not be published. Required fields are marked *