ಸಿನಿಮಾ ಸ್ಟೈಲ್​ನಲ್ಲೇ ಮಗನ ಪ್ರಿಯತಮೆಗೆ ರಾಜಕಾರಣಿಯಿಂದ ಧಮ್ಕಿ -ರೌಡಿಶೀಟರ್ ಅಂದರ್


ಬೆಂಗಳೂರು: ಥೇಟ್​ ‘ಆ ದಿನಗಳು ಸಿನಿಮಾ’ ಶೈಲಿಯಲ್ಲಿ ಬೆಂಗಳೂರಿನ ಪ್ರಭಾವಿ ರಾಜಕಾರಣಿಯೊಬ್ಬರು ಮಗನ ಪ್ರಿಯತಮೆಗೆ ಧಮ್ಕಿ ಹಾಕಿಸಿರೋ ಪ್ರಕರಣ ಬೆಳಕಿಗೆ ಬಂದಿದ್ದು, ಕೇಸ್​ ಸಂಬಂಧ ನಗರದ ರೌಡಿ ಶೀಟರ್​ ಒಬ್ಬನನ್ನು ಪೊಲೀಸ್ ಅರೆಸ್ಟ್​ ಮಾಡಿದ್ದಾರೆ.

ನಗರದ ಪ್ರಭಾವಿ ರಾಜಕಾರಣಿ ಆಗಿರೋ ವ್ಯಕ್ತಿ ಮಗನ ಪ್ರೀತಿಯನ್ನು ಒಪ್ಪದೇ, ಪುತ್ರನ ಗರ್ಲ್​ಫ್ರೆಂಡ್​ಗೆ ರೌಡಿಶೀಟರ್​ನಿಂದ ಧಮ್ಕಿ ಹಾಕಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಗನ ಗರ್ಲ್​ಫ್ರೆಂಡ್​ಗೆ ಧಮ್ಕಿ ನೀಡುವಂತೆ ರಾಜಕಾರಣಿ ನೀಡಿದ ಆದೇಶದ ಮೇರೆಗೆ, ಹುಳಿಮಾವು ರೌಡಿಶೀಟರ್​ ನಂದೀಶ ಎಂಬಾತ ಯುವತಿಗೆ ಧಮ್ಕಿ ಹಾಕಿದ್ದನಂತೆ.

ಅಷ್ಟೇ ಅಲ್ಲದೇ ಯುವತಿಯ ಖಾಸಗಿ ಪೊಟೋ ಹಾಗೂ ವೀಡಿಯೋಗಳನ್ನು ಇಟ್ಟುಕೊಂಡು ಬೆದರಿಕೆ ಹಾಕಿದ್ದು, ಬೆಂಗಳೂರು ಬಿಟ್ಟು ಹೋಗಿ ಇಲ್ಲವಾದಲ್ಲಿ ಪೊಟೋ ಮತ್ತು ವೀಡಿಯೋಗಳನ್ನು ವೈರಲ್​ ಮಾಡೋದಾಗಿ ಎಚ್ಚರಿಕೆ ನೀಡಿದ್ದನಂತೆ. ಬೆದರಿಕೆ ಹಿನ್ನೆಲೆಯಲ್ಲಿ ​ ಉತ್ತರ ಭಾರತದ ಮೂಲದ 25 ವರ್ಷದ ಯುವತಿ ಪ್ರಕರಣದ ಸಂಬಂಧ ಆಗ್ನೇಯ ವಿಭಾಗದ ಸೈಬರ್​ ಪೊಲೀಸರಿಗೆ ದೂರು ನೀಡಿದ್ದಾರೆ.

ಯುವತಿ ನೀಡಿದ ದೂರಿನ ಅನ್ವಯ ಪ್ರಬಲ ರಾಜಕಾರಣಿಯ ಬಲಗೈ ಬಂಟನಾಗಿರೋ ರೌಡಿಶೀಟರ್​ ನಂದೀಶ್​ನನ್ನ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ನೀಡಿರೋ ಹೇಳಿಕೆ ಅನ್ವಯ ರಾಜಕಾರನಿಯ ಮಗ ಸ್ವ ಇಚ್ಛೆಯಿಂದಲೇ ಯುವತಿಯೊಂದಿಗೆ ವಾಸಿಸುತ್ತಿದ್ದಾನೆ ಎನ್ನಲಾಗಿದೆ.

News First Live Kannada


Leave a Reply

Your email address will not be published. Required fields are marked *