ಸಿನಿಮೀಯ ಶೈಲಿಯಲ್ಲಿ ಮನೆಗೆ ಕನ್ನ ಹಾಕಿ, ಲಕ್ಷಾಂತರ ದೋಚಿ ಪರಾರಿಯಾದ ನೇಪಾಳಿ ಸೆಕ್ಯುರಿಟಿ ಗಾರ್ಡ್! | Security guard from nepal steal valuables from a house he was working as security guard in banaswadi


ಸಿನಿಮೀಯ ಶೈಲಿಯಲ್ಲಿ ಮನೆಗೆ ಕನ್ನ ಹಾಕಿ, ಲಕ್ಷಾಂತರ ದೋಚಿ ಪರಾರಿಯಾದ ನೇಪಾಳಿ ಸೆಕ್ಯುರಿಟಿ ಗಾರ್ಡ್!

ಸಿನಿಮೀಯ ಶೈಲಿಯಲ್ಲಿ ಮನೆಗೆ ಕನ್ನ ಹಾಕಿ, ಲಕ್ಷಾಂತರ ದೋಚಿ ಪರಾರಿಯಾದ ನೇಪಾಳಿ ಸೆಕ್ಯುರಿಟಿ ಗಾರ್ಡ್!

ಬೆಂಗಳೂರು: ಮನೆ ಭದ್ರತೆ ನೋಡಿಕೊಳ್ಳಲು ನೇಮಿಸಿದ್ದ ನೇಪಾಳ ಮೂಲದ ಸೆಕ್ಯುರಿಟಿ ಗಾರ್ಡ್ ಒಬ್ಬ ಸಿನಿಮೀಯ ಶೈಲಿಯಲ್ಲಿ ಮನೆಗೆ ಕನ್ನ ಹಾಕಿ, ಲಕ್ಷಾಂತರ ರೂ ಮೌಲ್ಯ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾನೆ. ಸಿನಿಮೀಯ ಶೈಲಿಯಲ್ಲಿ ಮನೆಗೆ ಕನ್ನ ಹಾಕಿ, ಉಂಡ ಮನೆಗೆ ದ್ರೋಹ ಬಗೆದ ಖತರ್ನಾಕ್ ಆಸಾಮಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶ್ರೀಧರ್ ಎಂಬ ಉದ್ಯಮಿ ಮನೆಯಲ್ಲಿ ಕಳ್ಳತನ ನಡೆದಿದೆ.

ಸುಮಾರು ವರ್ಷಗಳಿಂದ ನಂಬಿಕಸ್ಥನಾಗಿದ್ದ ಸೆಕ್ಯುರಿಟಿ ಗಾರ್ಡ್ ಕಾರ್ಯಕ್ರಮದ ನಿಮಿತ್ತ ಶ್ರೀಧರ್ ದಂಪತಿ ಹೊರಗಡೆ ಹೋಗಿದ್ದ ವೇಳೆ ಕಳ್ಳತನ ಮಾಡಿ, ಪರಾರಿಯಾಗಿದ್ದಾನೆ. ಸಿಸಿ ಕ್ಯಾಮೆರಾ ಆಫ್ ಮಾಡಿ, ಹಳೇ ದೃಶ್ಯಗಳನ್ನು ಡಿಲಿಟ್ ಮಾಡಿ ಕಳ್ಳತನ ಮಾಡಿರುವುದು ಎದ್ದುಕಾಣುತ್ತಿದೆ. 47 ಲಕ್ಷ ನಗದು ಹಾಗೂ 150 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾನೆ. ಬಾಣಸವಾಡಿ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Also Read:

ನಿಶ್ಚಿತಾರ್ಥದ ನಂತರ ಚಿನ್ನಾಭರಣಗಳೊಂದಿಗೆ ಯುವತಿ ಪರಾರಿ; ಮೂಗಿನ ಮೇಲೆ ಬೆರಳಿಡುವಂತಹ ಸಿನಿಮೀಯ ಕೌಟುಂಬಿಕ ಕಥೆ!

(security guard from nepal steal valuables from a house he was working as security guard in banaswadi)

TV9 Kannada


Leave a Reply

Your email address will not be published. Required fields are marked *