ಸಿನಿಮೀಯ ಸ್ಟೈಲ್​ನಲ್ಲಿ ಬೈಕ್​ನಲ್ಲಿದ್ದ ಹಣ ಎಗರಿಸಿ ಕೈಚಳಕ ತೋರಿದ ಖದೀಮರು..!


ಚಿತ್ರದುರ್ಗ: ಬೈಕ್​ ನಿಲ್ಲಿಸಿ ಅಂಗಡಿಗೆ ಹೋಗಿ ಬರೋದ್ರಲ್ಲಿ ಖತರ್ನಾಕ್​ ಕಳ್ಳರು ಬೈಕ್​ನಲ್ಲಿದ್ದ 2 ಲಕ್ಷ ರೂಪಾಯಿ ಹಣವನ್ನ ಎಗರಸಿ, ಪರಾರಿಯಾದ ಘಟನೆ ಹಿರಿಯೂರಿನ ಕೆಎಸ್​ಆರ್​ಟಿಸಿ ಬಸ್​​ ನಿಲ್ದಾಣದ ಬಳಿ ನಡೆದಿದೆ.

ಹಿರಿಯೂರು ನಗರದ ಅಶ್ವತ್ ನಾರಾಯಣ್ ಎಂಬುವವರು ಪೋಸ್ಟ್​ ಆಫೀಸ್​ನಲ್ಲಿ ಹಣ ವಿತ್​ಡ್ರಾ ಮಾಡಿಕೊಂಡು ಬಂದಿದ್ದರು. ಈ ವೇಳೆ ಹಣವನ್ನು ಕ್ಯಾರಿಬ್ಯಾಗ್​ನಲ್ಲಿ ಇರಿಸಿ ಬೈಕ್​ಗೆ ಹಾಕಿದ್ದರು. ಮಾರ್ಗ ಮಧ್ಯದಲ್ಲಿ ಬೈಕ್​ ನಿಲ್ಲಿಸಿ ಬೇಕರಿಗೆ ಬ್ರೇಡ್​ ತರಲು ಹೋಗಿದ್ದಾರೆ. ಅವರನ್ನು ಗಮನಿಸಿದ ಕಳ್ಳರು ಕ್ಷಣಾರ್ಧದಲ್ಲಿ ತಮ್ಮ ಕೈಚಳಕ ತೋರಿಸಿ ಹಣ ಸಮೇತ ಎಸ್ಕೇಪ್​ ಆಗಿದ್ದಾರೆ.

ಹೊಂಚು ಹಾಕಿಕೊಂಡು ಬಂದ ಖದೀಮರು ತಲೆಗೆ ಟೋಪಿ, ಮಾಸ್ಕ್​ ಧರಿಸಿ ಈ ಕೃತ್ಯವನ್ನು ಎಸಗಿದ್ದಾರೆ. ಇನ್ನು ಚಾಲಾಕಿಗಳ ಸಿನಿಮೀಯ ಸ್ಟೈಲ್​ನ ಕಳ್ಳತನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಿರಿಯೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

News First Live Kannada


Leave a Reply

Your email address will not be published.