ಸಿಪಿಐ ವಿರುದ್ಧ ಪ್ರತಿಭಟನೆ: ಕುಣಿಗಲ್ ಶಾಸಕ ಡಾ.ರಂಗನಾಥ್ ವಿರುದ್ದ ಸುಮೋಟೊ ಕೇಸ್

ಸಿಪಿಐ ವಿರುದ್ಧ ಪ್ರತಿಭಟನೆ: ಕುಣಿಗಲ್ ಶಾಸಕ ಡಾ.ರಂಗನಾಥ್ ವಿರುದ್ದ ಸುಮೋಟೊ ಕೇಸ್

ತುಮಕೂರು: ಕಳೆದ ಶನಿವಾರ ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಅಪಘಾತಕ್ಕೆ ಸಂಬಂಧಿಸಿದಂತೆ ಇನ್ಸ್ಪೆಕ್ಟರ್ ಗುರುಪ್ರಸಾದ್‌ ವಿರುದ್ದ ಧರಣಿ ನಡೆಸಿದ್ದ ಕುಣಿಗಲ್ ಶಾಸಕ ಡಾ.ರಂಗನಾಥ್ ವಿರುದ್ದ ದೂರು ದಾಖಲಾಗಿದೆ. ಕೋವಿಡ್ ನಿಯಮ ಉಲ್ಲಂಘಿಸಿ ಪ್ರತಿಭಟನೆ ಮಾಡಿದ್ದಕ್ಕೆ ಕುಣಿಗಲ್ ಠಾಣೆಯಲ್ಲಿ ಪೊಲೀಸರು ಸುಮೋಟೋ ಕೇಸ್ ದಾಖಲಿಸಿದ್ದಾರೆ ಎನ್ನಲಾಗಿದೆ.

ಕಳೆದ ಶನಿವಾರ ಅಮೃತ್ತೂರು ಸರ್ಕಲ್ ಇನ್ಸ್​​ಪೆಕ್ಟರ್ ಗುರುಪ್ರಸಾದ ವಿರುದ್ದ ಜನರನ್ನು ಸೇರಿಸಿ ಶಾಸಕ ರಂಗನಾಥ್ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕೋವಿಡ್ ನಿಯಮ ಉಲ್ಲಂಘನೆ ಮಾಡಿದಕ್ಕೆ ಕುಣಿಗಲ್ ಠಾಣೆ ಪೊಲೀಸರು ಎನ್.ಸಿ.ಆರ್ ದಾಖಲು ಮಾಡಿದ್ದಾರೆ.

ಹುಲಿಯೂರು ದುರ್ಗದ ಬಳಿ ನಡೆದ ಅಪಘಾತದಲ್ಲಿ ರಮೇಶ್ ಎಂಬವ ವ್ಯಕ್ತಿ ಮೃತಪಟ್ಟಿದ್ದರು. ಅವರ  ಮರಣೋತ್ತರ ಪರೀಕ್ಷೆ ಮಾಡಿ ಮೃತದೇಹ ಹಸ್ತಾಂತರಿಸುವ ಕುರಿತು ಸರ್ಕಲ್ ಇನ್ಸ್​ಪೆಕ್ಟರ್ ಗುರುಪ್ರಸಾದ್​​ಗೆ ಕೊಡವತ್ತಿ ಗ್ರಾಮ ಪಂಚಾಯ್ತಿ ಸದಸ್ಯ ಬಾ.ನಾ ರವಿ ಕರೆ ಮಾಡಿದ್ದರು. ಇಬ್ಬರ ನಡುವಿನ ಪೋನ್ ಸಂಭಾಷಣೆಯಲ್ಲಿ ಗುರುಪ್ರಸಾದ್ ಗ್ರಾಮ ಪಂಚಾಯ್ತಿ ಸದಸ್ಯನಿಗೆ ಅವಾಜ್ ಹಾಕಿದ್ದ ಆಡಿಯೋ ವೈರಲ್ ಆಗಿತ್ತು. ರೀ ಮಿಸ್ಟರ್ ಕೆಲಸ ಹೇಗೆ ಮಾಡಬೇಕು ಎಂದು ನಮಗೆ ಗೊತ್ತು, ಹೆಚ್ಚಿಗೆ ಮಾತಾಡಬೇಡ..ಫೋನ್ ಇಡು ಎಂದು ಏಕವಚನದಲ್ಲಿ ಆವಾಜ್ ಹಾಕಿದ್ರು ಅಮೃತೂರು ಸಿಪಿಐ ಗುರುಪ್ರಸಾದ್.

ಗುರುಪ್ರಸಾದ್ ವರ್ತನೆ ಖಂಡಿಸಿ ಅಂದು ಶಾಸಕ ರಂಗನಾಥ್, ಕುಣಿಗಲ್ ಸರ್ಕಲ್ ಇನ್ಸ್​​ಪೆಕ್ಟರ್​ ಕಚೇರಿ ಎದುರು ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದರು. ಕೂಡಲೆ ಇನ್ಸೆಪೆಕ್ಟರ್ ಗುರುಪ್ರಸಾದ್ ರನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿ ಕುಣಿಗಲ್ ಠಾಣೆ ಎದುರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡಿದ್ದರು. ಈ ವೇಳೆ ಕೋವಿಡ್ ನಿಯಮ ಉಲ್ಲಂಘನೆ ಮಾಡಿದಕ್ಕೆ ಕುಣಿಗಲ್ ಠಾಣೆ ಪೊಲೀಸರು ಎನ್.ಸಿ.ಆರ್ ದಾಖಲು ಮಾಡಿದ್ದಾರೆ.

The post ಸಿಪಿಐ ವಿರುದ್ಧ ಪ್ರತಿಭಟನೆ: ಕುಣಿಗಲ್ ಶಾಸಕ ಡಾ.ರಂಗನಾಥ್ ವಿರುದ್ದ ಸುಮೋಟೊ ಕೇಸ್ appeared first on News First Kannada.

Source: newsfirstlive.com

Source link