ಸೂರತ್​​: ಕೋವಿಡ್​ ಕೇರ್​ ಸೆಂಟರ್​​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತ ವ್ಯಕ್ತಿಯ ಡ್ರಿಪ್​​ ಬಾಟೆಲ್​​ಗೆ ಬಿಜೆಪಿ ಶಾಸಕ ​ರೆಮ್ಡಿಸಿವರ್​ ತುಂಬಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದ್ದು, ಶಾಸಕರ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಸೂರತ್​​​ನ ಕಮ್ರೆಜ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ವಿ.ಡಿ.ಜಲವಾಡಿಯಾ ಅವರು ರೆಮ್ಡಿಸಿವರ್​ ಅನ್ನು ಸಿರಿಂಜ್​​ಗೆ ತುಂಬಿ ಬಳಿಕ ಅದನ್ನು ರೋಗಿಗೆ ಹಾಕಿದ್ದ ಡ್ರಿಪ್​ ಬಾಟೆಲ್​​ಗೆ ಇಂಜೆಕ್ಟ್​​ ಮಾಡಿದ್ದಾರೆ. ಘಟನೆ ಕುರಿತಂತೆ ತೀವ್ರ ಅಸಮಾಧಾನ ಹೊರಹಾಕಿರುವ ಕಾಂಗ್ರೆಸ್​ ನಾಯಕ ಜಯರಾಜ್‌ಸಿನ್ಹ್ ಪರ್ಮಾರ್, ಬಿಜೆಪಿ ಶಾಸಕರಿಂದ ಪ್ರೇರಣೆ ಪಡೆದು ಕೋವಿಡ್​ ಕೇರ್​ ಒಂದನ್ನು ಸ್ಥಾಪಿಸಿ ಬಿಜೆಪಿ ಕಾರ್ಯಕರ್ತರಿಗೆ ಇಂಜೆಕ್ಷನ್​ ಕೊಡುವುದು ಹೇಗೆ? ಗಾಯಕ್ಕೆ ಡ್ರೆಸ್ಸಿಂಗ್ ಮಾಡೋದು ಹೇಗೆ ಎಂದು ಜಲವಾಡಿಯಾ ಅವರಿಂದಲೇ ತರಬೇತಿ ನೀಡಬೇಕೆಂದು ಆರೋಗ್ಯ ಸಚಿವ ನಿತಿನ್​ ಪಾಟೀಲ್​​ಗೆ ಸಲಹೆ ನೀಡಿದ್ದಾರೆ.

ಇತ್ತ ಕಾಂಗ್ರೆಸ್ ನಾಯಕರ ಟೀಕೆಗಳ ಬಳಿಕವೂ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿರುವ ಶಾಸಕ ಜಲವಾಡಿಯಾ, ನಾನು ಯಾವುದೇ ರೋಗಿಗೆ ಡೋಸ್​​ ನೀಡಲಿಲ್ಲ. ಕೇವಲ ಬಾಟೆಲ್​ಗೆ ಇಂಜೆಕ್ಟ್​ ಮಾಡಿದ್ದೇನೆ ಅಷ್ಟೇ. ಆದರೆ ಇದನ್ನೂ ಟೀಕೆ ಮಾಡುವುದಾದರೆ ನಾವು ಕ್ಷಮೆ ಕೇಳುತ್ತೇವೆ. ಕಳೆದ 40 ದಿನಗಳಿಂದ ಕೊರೊನಾ ರೋಗಿಗಳಿಗೆ ಸೇವೆ ಮಾಡುತ್ತಿದ್ದೇನೆ. ಇದುವರೆಗೂ 200 ಸೋಂಕಿತರು ಕೋವಿಡ್​ ಕೇರ್​ನಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್​ ಆಗಿದ್ದಾರೆ. ಈಗ 10-12 ರೋಗಿಗಳು ಸೆಂಟರ್​​ನಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

The post ಸಿರಿಂಜ್​ನಿಂದ ಡ್ರಿಪ್​ ಬಾಟಲ್​ಗೆ ಸ್ವತಃ ರೆಮ್ಡಿಸಿವರ್​ ತುಂಬಿ ಟೀಕೆಗೆ ಗುರಿಯಾದ ಬಿಜೆಪಿ ಶಾಸಕ appeared first on News First Kannada.

Source: newsfirstlive.com

Source link