ಬೆಂಗಳೂರು: ನಗರದಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಶಬ್ದ ಮಾಲಿನ್ಯ ಕುರಿತು ಸಲ್ಲಿಕೆಯಾಗಿರುವ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಶಬ್ದ ಮಾಲಿನ್ಯ ನಿಯಂತ್ರಣ ಕಾಯ್ದೆ ಸಮರ್ಥ ಜಾರಿ ಕೋರಿ ಗಿರೀಶ್ ಭಾರಧ್ವಾಜ್ ಮತ್ತು ಮಸೀದಿ ಶಬ್ದಮಾಲಿನ್ಯ ಆಕ್ಷೇಪಿಸಿ ಸ್ಥಳಿಯರು ಸಲ್ಲಿಸಿದ್ದ ಪಿಐಎಲ್ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸಿಜೆ ರಿತುರಾಜ್ ಅವಸ್ಥಿ ಮತ್ತು ನ್ಯಾ. ಸಚಿನ್ ಶಂಕರ್ ಮಗದಮ್ ಪೀಠ ಸರ್ಕಾರ ಮತ್ತು ಮಂಡಳಿ ವಿರುದ್ಧ ಗರಂ ಆಗಿದೆ.
ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ಗರಂ..
ಸರ್ಕಾರ, ಮತ್ತು ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್ ಕರ್ಕಶ ಶಬ್ದ ಹೊರಡಿಸುವ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸಿ ಆಲ್ಟರ್ ಸೈಲೆನ್ಸರ್ & ಹಾರ್ನ್ಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದೆ. ಮತ್ತು ಮಂಡಳಿಗೆ ನಗರದಲ್ಲಿ ಹೆಚ್ಚುತ್ತಿರುವ ಶಬ್ದ ಮಾಲಿನ್ಯದ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಾ ಎಂದು ಪ್ರಶ್ನಿಸಿದೆ.
ವಾದ-ಪ್ರತಿವಾದ
ದಿನದಿಂದ ದಿನಕ್ಕೆ ನಗರದಲ್ಲಿ ಹೆಚ್ಚುತ್ತಿರುವ ಶಬ್ದ ಮಾಲಿನ್ಯದಿಂದ ಕಿವುಡುತನ, ನಿದ್ರಾಹೀನತೆಯಂತ ರೋಗಗಳು ಬಾಧಿಸುತ್ತಿವೆ. ಇದರಿಂದ ಅನೇಕ ಜನರ ಮಾನಸಿಕ & ದೈಹಿಕ ಆರೋಗ್ಯ ಹಾಳಾಗ್ತಿದೆ. ‘ಮಾಲಿನ್ಯ ನಿಯಂತ್ರಣ ಮಂಡಳಿ, ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ವಕ್ಫ್ ಮಂಡಳಿಗೆ ಅಧಿಕಾರವಿಲ್ಲದಿದ್ದರೂ, ಕಡಿಮೆ ಡೆಸಿಮಲ್ಗೆ ಆದೇಶಿಸಿದೆ. ನಿಯಮದ ಪ್ರಕಾರ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿ ವರ್ಧಕಗಳನ್ನು ಬಳಸುವಂತಿಲ್ಲ ಆದರೆ ಈ ನಿಯಮಗಳನ್ನು ರಾಜ್ಯದಲ್ಲಿ ಪಾಲಿಸುತ್ತಿಲ್ಲವೆಂದು ಅರ್ಜಿದಾರರ ಪರ ವಕೀಲರಾದ ಶ್ರೀಧರ್ ಪ್ರಭು ವಾದ ಮಂಡಿಸಿದ್ದಾರೆ.
ಇನ್ನು ವಾದ-ಪ್ರತಿವಾದ ಆಲಿಸಿದ ಪೀಠ ನಗರದಲ್ಲಿ ಆಲ್ಟ್ರೇಷನ್ ಸೈಲೆನ್ಸರ್ & ಹಾರ್ನ್ ವಾಹನದಿಂದ ಮಾಲಿನ್ಯ ಜಾಸ್ತಿಯಾಗ್ತಿದೆ. ಪ್ರತಿದಿನ ಯಾವುದೇ ಮುಖ್ಯ ರಸ್ತೆಗೆ ಹೋದ್ರೂ ಶಬ್ದ ಮಾಲಿನ್ಯ ಮಿತಿ ಮೀರಿದೆ. ಇಂತಹ ವಾಹನಗಳ ವಿರುದ್ಧ ಸರ್ಕಾರ ಇಲ್ಲಿತನಕ ಕೈಕೊಂಡ ಕ್ರಮಗಳೇನು.? ಈ ಪರಿಸ್ಥಿತಿ ನೋಡಿದ್ರೆ ತಿಳಿಯುತ್ತೆ ಸರ್ಕಾರ ಯಾವುದೇ ಕ್ರಮ ತಗೊಂಡಿಲ್ಲ ಅಂತ ಗೊತ್ತಾಗುತ್ತದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅಭಿಪ್ರಾಯ ತಿಳಿಸಿದ್ದಾರೆ.
ಇನ್ನು ತಕ್ಷಣ ಇಂತಹ ವಾಹನಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸಂಬಂಧಿಸಿದ ಪ್ರಾಧಿಕಾರಿಗಳು ಕಾರ್ಯಾಚರಣೆ ನಡೆಸಿ ವರದಿ ಸಲ್ಲಿಸಬೇಕು. ಮಸೀದಿಗಳು ವಕ್ಫ್ ಬೋರ್ಡ್ ಸುತ್ತೋಲೆಯಂತೆ ಕಡಿಮೆ ಡೆಸಿಮಲ್ ಧ್ವನಿವರ್ಧಕ ಬಳಕೆ ಮಾಡುತ್ತಿರುವುದಾಗಿ ಹೇಳಿವೆ. ಈ ಬಗ್ಗೆ ರಾಜ್ಯ ವಕ್ಫ್ ಬೋರ್ಡ್ ಸ್ಪಷ್ಟನೆಯನ್ನು ನೀಡಬೇಕು ಎಂದ ಪೀಠ ಸೂಚಿಸಿದೆ.