ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಂಜೆಯಾಗುತ್ತಿದ್ದಂತೆ ಧೋ ಅಂತಾ ಸುರಿದ ಮಳೆ ಅವಾಂತರಗಳನ್ನೇ ಸೃಷ್ಟಿಸಿದೆ.
ನಗರದ K.R.ಮಾರ್ಕೆಟ್, ಕಾರ್ಪೊರೇಷನ್, ಶಾಂತಿನಗರ, ಲಾಲ್ಬಾಗ್, ಸುಧಾಮನಗರ, ಟೌನ್ಹಾಲ್, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದ್ದು, ರಸ್ತೆಗಳಲ್ಲೆಲ್ಲಾ ನೀರು ತುಂಬಿ ಅಸ್ತವ್ಯಸ್ತ ಉಂಟಾಗಿದೆ.
ಸಂಜೆಯಾಗುತ್ತಿದ್ದಂತೆ ಮನೆ ಸೇರೋಕೆ ಹೊರಟಿದ್ದ ವಾಹನ ಸವಾರರು ಭಾರೀ ಮಳೆಯಲ್ಲಿ ಸಿಲುಕಿ ಪರದಾಡುವಂತಾಗಿತ್ತು. ಕೆ.ಜಿ ನಗರದ ತಗ್ಗು ಪ್ರದೇಶಗಳ ಮನೆಗೆ ನೀರು ನುಗ್ಗಿದ್ದು, ದೀಪಾವಳಿ ಹಬ್ಬದ ಖುಷಿಲ್ಲಿದ್ದ ನಾಗರೀಕರು ಸಂಕಷ್ಟ ಎದುರಿಸಿದ್ದಾರೆ. ಇನ್ನು ನಗರದ ಪ್ರಮುಖ ರಸ್ತೆಗಳ ಮೇಲೆ ಮಳೆ ನೀರು ನಿಂತು ಕೆರೆಗಳಂತೆ ಕಂಡು ಬಂದಿದ್ದವು.