ಸಿಸಿಬಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ, ಐದು ಡ್ರಗ್ ಪೆಡ್ಲರ್​ಗಳನ್ನ ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 30ಲಕ್ಷ ಮೌಲ್ಯದ ಎಂಡಿಎಂಎ, ಎಕ್ಸ್​​ಟೆಸಿ ಮಾತ್ರೆಗಳು, ಎಲ್​ಸಿಡಿ ಸ್ಟಿಪ್ಸ್, ಗಾಂಜಾ, ಮೊಬೈಲ್ ಫೋನ್ ಮತ್ತು ಬೈಕ್ ವಶಪಡಿಸಿಕೊಂಡಿದ್ದಾರೆ.

300 ಎಂಡಿಎಂಎ ಎಕ್ಸ್​​ಟೆಸಿ ಮಾತ್ರೆ, 150 ಎಲ್​ಸಿಡಿ ಸ್ಟಿಪ್​​ಗಳು, 250 ಗ್ರಾಂ ಹ್ಯಾಶಿಶ್ ಹಾಗೂ 1 ಕೆ.ಜಿ ಗಾಂಜಾ ಸಿಕ್ಕಿದೆ. ಆರೋಪಿಗಳು ಇವನ್ನ ಅಮೆಜಾನ್ ಪ್ಯಾಕ್​ಗಳಲ್ಲಿ ಹಾಕಿ, ವ್ಯಾಕ್ಯೂಮ್ ಫುಡ್ ಸೀಲ್‌ ಮಾಡಿ dunzo ಮುಖಾಂತರ ಗಿರಾಕಿಗಳಿಗೆ ತಲುಪಿಸುತ್ತಿದ್ದರು. ನಂತರ ಗೂಗಲ್ ಪೇ ಮೂಲಕ ಅವರಿಂದ ಹಣ ಪಡೆಯುತ್ತಿದ್ದರು ಎನ್ನಲಾಗಿದೆ.

ಸದ್ಯ ಐವರು ಡ್ರಗ್ ಪೆಡ್ಲರ್​ಗಳನ್ನ ಬಂಧಿಸಿರೋ ಪೊಲೀಸರು ಉಳಿದವರಿಗಾಗಿ ಶೋಧಕಾರ್ಯ ನಡೆಸ್ತಿದ್ದಾರೆ.

The post ಸಿಸಿಬಿ ಕಾರ್ಯಾಚರಣೆ: ಐವರು ಡ್ರಗ್​ ಪೆಡ್ಲರ್​ಗಳು ಅಂದರ್ appeared first on News First Kannada.

Source: newsfirstlive.com

Source link