ಬೆಂಗಳೂರು: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ಇಂದು ಕಾಂಗ್ರೆಸ್ ಪ್ರತಿಭಟನೆ ನಡೆಸಿತು.

‘ಲಸಿಕೆ‌ ಉತ್ಪಾದನೆ ಆಗದಿದ್ದರೆ ನೇಣು ಹಾಕ್ಕೋಬೇಕಾ..?’ ಎಂಬ ಡಿವಿಎಸ್​ ಹೇಳಿಕೆಯನ್ನ ಖಂಡಿಸಿ ನಗರದ ಕಾಂಗ್ರೆಸ್ ಭವನದ ಮುಂಭಾಗದಲ್ಲಿ, ಬೆಂಗಳೂರು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮನೋಹರ್ ನೇತೃತ್ವದಲ್ಲಿ ಮೌನ ಪ್ರತಿಭಟನೆ ನಡೆಸಲಾಯ್ತು.

ಈ ವೇಳೆ ಪ್ರತಿಭಟನಾಕಾರರು ಸಿ.ಟಿ.ರವಿ ಹಾಗೂ ಡಿ.ವಿ.ಎಸ್ ಮುಖವಾಡ ಧರಿಸಿ ನೇಣು ಹಗ್ಗ ಹಿಡಿದು, ಚಿಲ್ಲರೆ ಹಣ ಭಿಕ್ಷೆ ಬೇಡುವ ಮೂಲಕ ಆಕ್ರೋಶ ಹೊರಹಾಕಿದ್ರು.

The post ಸಿ.ಟಿ ರವಿ- ಡಿವಿಎಸ್​ ವಿರುದ್ಧ ಕಾಂಗ್ರೆಸ್​ ಪ್ರತಿಭಟನೆ appeared first on News First Kannada.

Source: newsfirstlive.com

Source link