ಚಿಕ್ಕಮಗಳೂರು: ನಾಯಕತ್ವ ಬದಲಾವಣೆ ವೇಳೆಯಲ್ಲಿಯೇ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸುಮಾರು 45 ನಿಮಿಷಗಳ ಕಾಲ ಗೌಪ್ಯ ಸಭೆ ನಡೆಸಿದ್ದಾರೆ.

ಚಿಕ್ಕಮಗಳೂರಿನ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಜೊತೆ ಸುಮಾರು 45 ನಿಮಿಷಕ್ಕೂ ಹೆಚ್ಚು ಹೊತ್ತು ರಹಸ್ಯ ಮಾತುಕತೆ ನಡೆಸಿದ ಬಳಿಕ ಸಿ.ಟಿ.ರವಿ ಮಾತನಾಡಿದರು. ನಮ್ಮ ಪಕ್ಷಕ್ಕೆ ಸಾವಿರಾರು ಜನರ ತಪಸ್ಸು, ಪರಿಶ್ರಮವಿದೆ. ಎಲ್ಲರ ಪರಿಶ್ರಮದ ಫಲವಾಗಿ ಇಂದು ಅಧಿಕಾರದಲ್ಲಿದ್ದೇವೆ. ನಮ್ಮ ಆದ್ಯತೆ ಜನರ ಹಿತ ಕಾಯೋದು. ಆದರೆ ಇತ್ತೀಚಿನ ಕೆಲವು ಬೆಳವಣಿಗೆ ನಮಗೆ ಕಳವಳ ಉಂಟು ಮಾಡಿದೆ ಎಂದರು.

ಯಾರದ್ದೋ ಪರಿಶ್ರಮದಿಂದ ಕಷ್ಟಪಟ್ಟು ಕಟ್ಟಿರುವ ಪಕ್ಷ ನಮ್ಮ ಆಶಯಗಳಿಗೆ ವಿರುದ್ಧವಾಗಿ ಹೋಗಬಾರದು. ಇತ್ತೀಚಿನ ಕೆಲವು ಬೆಳವಣಿಗೆಗಳು ನಮ್ಮಿಬ್ಬರಿಗೂ ಕಳವಳ ತಂದಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇಬ್ಬರಿಗೂ ಆತಂಕವಿದೆ:
ಏಕೆ ಹೀಗೆ ಆಗುತ್ತಿದೆ ಎಂಬ ಬಗ್ಗೆ ಇಬ್ಬರಿಗೂ ಆತಂಕವಿದೆ. ಯಾರದ್ದೋ ಪರಿಶ್ರಮದಿಂದ ಕಷ್ಟಪಟ್ಟು ಕಟ್ಟಿರುವ ಪಕ್ಷ ನಮ್ಮ ಆಶಯಗಳಿಗೆ ವಿರುದ್ಧ ಹೋಗಬಾರದು, ಆ ನಿಟ್ಟಿನಲ್ಲಿ ಇಬ್ಬರೂ ಚರ್ಚೆ ನಡೆಸಿದ್ದೇವೆ ಎಂದರು. ನಾವಿಬ್ಬರೇ ನಿರ್ಣಯ ಕೈಗೊಳ್ಳಲು ಅಗುವುದಿಲ್ಲ. ಪಕ್ಷದ ಹಿರಿಯರಿದ್ದಾರೆ, ಕೋರ್ ಕಮಿಟಿ ಇದೆ. ಅವರ ಜೊತೆ ಸಮಾಲೋಚನೆ ನಡೆಸಿ ಏನೂ ಮಾಡಬೇಕು ಅದನ್ನ ಮಾಡುತ್ತೇವೆ ಎಂದರು.

ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ:
ಇದಕ್ಕೂ ಮುನ್ನ ಮಾಧ್ಯಮದವರ ಜೊತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ನಾಯಕತ್ವದ ಗೊಂದಲ, ಚರ್ಚೆ ಏನೂ ಇಲ್ಲ. ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದರು. ನಮ್ಮ ಶಾಸಕರು, ಸಚಿವರು, ಕಾರ್ಯಕರ್ತರಿಗೆ ಕೊಟ್ಟಿರೋ ಕರೆ ಒಂದೇ. ಕೋವಿಡ್ ನಿರ್ವಹಣೆಗೆ ಪರಿಶ್ರಮ ಹಾಕಬೇಕು ಎಂದು ಎಂದರು. ಇದನ್ನೂ ಓದಿ: 65 ಶಾಸಕರ ಸಹಿ ಪತ್ರ ನನ್ನಲ್ಲಿದೆ, ಅಖಾಡಕ್ಕೆ ಬಾ: ಸಿಪಿವೈಗೆ ರೇಣುಕಾಚಾರ್ಯ ಪಂಥಾಹ್ವಾನ

ದೇಶದಲ್ಲಿ ಸೇವಾ ಇ ಸಂಘಟನೆ:
ಯೋಗೇಶ್ವರ್ ಏಕೆ ಆ ರೀತಿ ಮಾತನಾಡಿದ್ದಾರೋ ನನಗೆ ಗೊತ್ತಿಲ್ಲ. ಅವರನ್ನ ಕರೆಸಿ ಕೇಳುತ್ತೇನೆ ಎಂದರು. 30ನೇ ತಾರೀಖು ಕೇಂದ್ರ ಸರ್ಕಾರದ ಎರಡನೇ ಅವಧಿಯ ಎರಡನೇ ವರ್ಷ ಪೂರ್ಣಗೊಳ್ಳುತ್ತೆ. ಆ ಸಂದರ್ಭದಲ್ಲಿ ಇಡೀ ದೇಶದಲ್ಲಿ ಸೇವಾ ಇ ಸಂಘಟನೆ ಮಾಡಬೇಕೆಂದು ರಾಷ್ಟ್ರೀಯ ಅಧ್ಯಕ್ಷರು ಕರೆ ಕೊಟ್ಟಿದ್ದಾರೆ. ನಮ್ಮ ರಾಜ್ಯದಲ್ಲೂ ಒಂದಷ್ಟು ಯೋಜನೆಗಳನ್ನ ನಾವು ಮಾಡಿಕೊಂಡಿದ್ದೇವೆ. ಲಾಕ್‍ಡೌನ್ ಇರೋದ್ರಿಂದ ಗ್ರಾಮಗಳಲ್ಲಿ ಹೇಗೆ ಎಂದು ಚರ್ಚೆ ಮಾಡಲು ಬಂದಿದ್ದು ಜೊತೆಗೆ ಸಂಘಟನಾತ್ಮಕವಾಗಿ ಚರ್ಚೆ ಮಾಡಬೇಕೆಂದು ಬಂದಿದ್ದೇನೆ ಎಂದರು. ಇದನ್ನೂ ಓದಿ: ನಾಯಕತ್ವ ಬದಲಾವಣೆಯನ್ನು ಪರೋಕ್ಷವಾಗಿ ಒಪ್ಪಿಕೊಂಡ ಸಚಿವ ಯೋಗೇಶ್ವರ್ 

ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಬಳಿಕ ನಡೆದ ಹಿಂಸಾಚಾರಗಳ ಕುರಿತು ಸಂವಾದವಾಗಬೇಕೆಂದು ರಾಷ್ಟ್ರೀಯ ಸಲಹೆಗಳಿವೆ. ಈ ಎಲ್ಲಾ ವಿಷಯಗಳ ಕುರಿತು ಚರ್ಚೆ ಮಾಡಲು ಬಂದಿದ್ದೇನೆ ಎಂದ ನಳೀನ್ ಕುಮಾರ್ ಕಟೀಲ್ ಸಿ.ಟಿ.ರವಿ ಜೊತೆ ಸುಮಾರು 45 ನಿಮಿಷ ಗೌಪ್ಯವಾಗಿ ಮಾತನಾಡಿದ ಬಳಿಕ ಮಂಗಳೂರಿಗೆ ಹೋಗಿದ್ದಾರೆ. ಇದನ್ನೂ ಓದಿ: ನಿಮ್ಮ ಸ್ವಾರ್ಥದ ಬಣ ಕಿತ್ತಾಟಕ್ಕೆ ಕಾಂಗ್ರೆಸ್ ಹೆಸ್ರು ಬಳಸಬೇಡಿ: ಸಿಪಿವೈ ಹೇಳಿಕೆಗೆ ತಿರುಗೇಟು

The post ಸಿ.ಟಿ.ರವಿ-ನಳಿನ್ ಕುಮಾರ್ ಕಟೀಲ್ 45 ನಿಮಿಷ ಗೌಪ್ಯ ಮಾತುಕತೆ appeared first on Public TV.

Source: publictv.in

Source link