ಬೆಂಗಳೂರು: ಮಾಜಿ ಸಚಿವರ ವಿರುದ್ಧದ ಸಿ.ಡಿ ಪ್ರಕರಣದಲ್ಲಿ ಬ್ಲಾಕ್ ಮೇಲ್ ಮಾಡಿದ ಆರೋಪ ಹೊತ್ತಿರುವ ಆರೋಪಿ ನರೇಶ್​​ಗೆ ಎಸ್​​ಐಟಿ ಮೂರನೇ ನೋಟಿಸ್ ನೀಡಿದೆ. ಈ ಹಿನ್ನೆಲೆ ಇಂದು ಮೂರನೇ ಬಾರಿ ನರೇಶ್​​ ಎಸ್​​ಐಟಿ ಮುಂದೆ ಹಾಜರಾಗಬೇಕಿದೆ.

ಈಗಾಗಲೇ ಎರಡು ಬಾರಿ ನರೇಶ್ ಹಾಗೂ ಶ್ರವಣ್​ನನ್ನು ಎಸ್​​ಐಟಿ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ. ಒಮ್ಮೆ ಇಬ್ಬರನ್ನು ಒಟ್ಟಿಗೆ ಹಾಗೂ ಮತ್ತೊಮ್ಮೆ ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ದಾರೆ. ಬ್ಲಾಕ್ ಮೇಲ್ ಕೇಸ್​ನಲ್ಲಿ ಅರೋಪಿಗಳ ವಿರುದ್ಧ ಕಂಡು ಬಂದ ಅಂಶಗಳ ಅನ್ವಯ ವಿಚಾರಣೆ ನಡೆಸಲಾಗ್ತಿದೆ. ತಾಂತ್ರಿಕ ಸಾಕ್ಷಿ ಹಾಗೂ ಇತರೆ ಸಾಕ್ಷಿಗಳ ಹೇಳಿಕೆ ಆಧಾರದಲ್ಲಿ ಎರಡು ದಿನ ವಿಚಾರಣೆ ನಡೆಸಿದ್ದ ವೇಳೆ ಆರೋಪಿಗಳ ಹೇಳಿಕೆ ಸಮಂಜಸವಾಗಿ ಕಂಡುಬಾರದ ಹಿನ್ನೆಲೆ ಮತ್ತೆ ನೋಟಿಸ್ ನೀಡಲಾಗಿದೆ.

ನಿನ್ನೆ ಶ್ರವಣ್​​ಗೆ ಹ್ಯಾಕಿಂಗ್ ಸೇರಿ ಇನ್ನಿತರ ಸೈಬರ್ ಎಕ್ಸ್​ಪರ್ಟಿಂಗ್ ಕುರಿತು ಪ್ರಶ್ನೆಗಳನ್ನ ಕೇಳಲಾಗಿತ್ತು. ಇಂದು ಶ್ರವಣ್ ಹೇಳಿಕೆ ಆಧರಿಸಿಯ ಎಸ್ಐಟಿ ಪ್ರಶ್ನಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

The post ಸಿ.ಡಿ ಕೇಸ್​: ಇಂದು 3ನೇ ಬಾರಿ ನರೇಶ್​ಗೆ SITಯಿಂದ ವಿಚಾರಣೆ appeared first on News First Kannada.

Source: newsfirstlive.com

Source link