ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಖಾಸಗಿ ವಿಡಿಯೋ ಸಿ.ಡಿ ಬಹಿರಂಗ ಪ್ರಕರಣ ಸಂಬಂಧ ಇಂದು ಮಹತ್ವದ ಬೆಳವಣಿಗೆ ನಡೆಯಲಿದೆ.

ಹೈಕೋರ್ಟ್ ಹಾಗೂ ಸಿವಿಲ್ ಕೋರ್ಟ್​​​ನಲ್ಲಿ ಕೇಸ್ ವಿಚಾರಣೆ ನಡೆಯುತ್ತಿದ್ದು, ಇಂದು ಎಸ್ಐಟಿ ತಂಡ ಹೈಕೋರ್ಟ್​ಗೆ ಪ್ರಕರಣದ ಸ್ಟೇಟಸ್ ರಿಪೋರ್ಟ್ ನೀಡಲಿದೆ. ಎಸ್ಐಟಿ ಯಾವ ಅಂಶಗಳನ್ನ ಕೋರ್ಟ್ ಮುಂದೆ ಹೇಳುತ್ತೆ ಅನ್ನೋ ಕೂತೂಹಲ ಮೂಡಿದೆ. ಒಟ್ಟು 3 ಎಫ್ಐಆರ್ ಸಂಬಂಧ ಯಾವ ಕೇಸ್​​ ಏನಾಗುತ್ತೆ? ಯಾವುದಕ್ಕೆ ಬಿ ರಿಪೋರ್ಟ್, ಯಾವ ಕೇಸ್ಗೆ ಚಾರ್ಜ್ ಶೀಟ್ ಅಂತಾ ಇಂದು ತಿಳಿಯಲಿದೆ.

ನರೇಶ್-ಶ್ರವಣ್ ಬೇಲ್ ಭವಿಷ್ಯ ಇಂದು ನಿರ್ಧಾರ
ಇನ್ನೊಂದು ಕಡೆ ಪ್ರಕರಣದ ಕಿಂಗ್ ಪಿನ್​ಗಳು ಎನ್ನಲಾದ ನರೇಶ್ ಹಾಗೂ ಶ್ರವಣ್ ಜಾಮೀನು ಅರ್ಜಿ ಭವಿಷ್ಯ ಇಂದು ನಿರ್ಧಾರವಾಗಲಿದೆ. ನಗರದ ಸಿಟಿ ಸಿವಿಲ್ ಕೋರ್ಟ್ ಸಿಸಿಹೆಚ್ 91ರಲ್ಲಿ ಬೇಲ್ ಸಂಬಂಧ ವಿಚಾರಣೆ ನಡೆಯಲಿದೆ. ಆರೋಪಿಗಳು ನಿರೀಕ್ಷಣಾ ಜಾಮೀನು ಅರ್ಜಿ‌ ಸಲ್ಲಿಕೆ ಮಾಡಿದ್ದಾರೆ. ಇದಕ್ಕೆ ಇಂದು ಎಸ್ಐಟಿ ಆಕ್ಷೇಪಣೆ ಸಲ್ಲಿಕೆ ಮಾಡಲಿದೆ. ಎಸ್​ಐಟಿ ಯಾವ ಕಾರಣ ಹೇಳಿ ಬೇಲ್ ನೀಡದಂತೆ ಕೇಳಬಹುದು ಎಂಬ ವಿಚಾರ ಹಾಗೂ ಆಕ್ಷೇಪಣೆಯಲ್ಲಿ ಆರೋಪಿಗಳ ಪಾತ್ರ ರಿವಿಲ್ ಮಾಡುವ ಸಾಧ್ಯತೆ ಹಿನ್ನೆಲೆ ವಿಚಾರಣೆ ಮಹತ್ವ ಪಡೆದುಕೊಂಡಿದೆ.

The post ಸಿ.ಡಿ ಪ್ರಕರಣದಲ್ಲಿ ಇಂದು ನಡೆಯಲಿದೆ ಎರಡು ಮಹತ್ವದ ಬೆಳವಣಿಗೆ appeared first on News First Kannada.

Source: newsfirstlive.com

Source link