ಸಿ.ಪಿ.ವೈ ಯಾವ ಭಾವನೆಯಲ್ಲಿ ಮಾತಾಡಿದ್ದಾರೆ ಗೊತ್ತಿಲ್ಲ, ಅದರ ವಿವರಣೆ ಕೇಳ್ತೇನೆ: ಕಟೀಲ್

– ಯತ್ನಾಳ್ ಹೇಳಿಕೆಗಳಿಗೆ ಗೌರವ ಕೊಡಲ್ಲ

ಹಾವೇರಿ: ಪಕ್ಷ ಬಿಟ್ಟು ಹೋದವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಹ್ವಾನ ವಿಚಾರಕ್ಕೆ ಕಾಂಗ್ರೆಸ್ ಮುಳುಗುವ ಹಡಗು, ಉಳಿಸಿಕೊಳ್ಳೋ ಎಲ್ಲ ಪ್ರಯತ್ನ ಮಾಡ್ತಿದ್ದಾರೆ. ಅದರಲ್ಲಿ ತೂತು ಬಿದ್ದಿದೆ, ನೀರು ಒಳಗಡೆ ಸೇರುತ್ತಾ ಇದೆ. ಯಾವಾಗ ಮುಳುಗುತ್ತೆ ಅಂತಾ ಗೊತ್ತಿಲ್ಲ. ಹಾಗಾಗಿ ಯಾರಾದ್ರೂ ರಕ್ಷಿಸಿ ಎಂದು ಕೈಚಾಚಿ ಕೇಳ್ತಾ ಇದ್ದಾರೆ ಅಂತ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟಾಂಗ್ ನೀಡಿದ್ದಾರೆ.

ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಇಂದು ಮುಳುಗುವ ಹಡಗು ಹತ್ತೋ ಜನರು ಇಲ್ಲ. ಹಾಗಾಗಿ ಯಾವ ಪಾರ್ಟಿಯಲ್ಲಿದ್ರೂ ಒಂದು ಬಾರಿ ಬಂದು ನಮ್ಮನ್ನ ರಕ್ಷಣೆ ಮಾಡಿ ಅಂತಾ ಬೇಡ್ತಾ ಇದ್ದಾರೆ ಎಂದರು.

ಯೋಗೇಶ್ವರ್ ಯಾವ ರೀತಿಯ ಭಾವನೆಯಲ್ಲಿ ಮಾತನಾಡಿದ್ದಾರೆ ಗೊತ್ತಿಲ್ಲ. ಅದರ ವಿವರಣೆಯನ್ನು ಕೇಳ್ತೇನೆ. ನಮ್ಮ ಸರ್ಕಾರ, ನಮ್ಮ ಮಂತ್ರಿಗಳು, ಶಾಸಕರು ಮಾಧ್ಯಮಗಳ ಮುಂದೆ ಮಾತನಾಡಬಾರದು. ಅನಗತ್ಯವಾಗಿರೋ ವಿಚಾರಗಳನ್ನು ಮಾತನಾಡಬಾರದು. ಜನರ ರಕ್ಷಣೆ, ಪ್ರಾಣ ರಕ್ಷಣೆ ಕೆಲಸ ಮಾಡಲು ಸರಕಾರಕ್ಕೆ ಆಶೀರ್ವಾದ ಮಾಡಿದ್ದಾರೆ. ಅವರು ಏನು ಹೇಳಿದ್ದಾರೆ. ಅದರ ವಿವರಣೆ ಪಡೆದುಕೊಳ್ಳುವೆ ಎಂದರು.

ಸದ್ಯ ನಾಯಕತ್ವ ಬದಲಾವಣೆ, ಮುಖ್ಯಮಂತ್ರಿ ಬದಲಾವಣೆ ಚರ್ಚೆ ಬಿಜೆಪಿಯಲ್ಲಿ ಇಲ್ಲ. ನಾಯಕತ್ವದ ಚರ್ಚೆಯನ್ನ ಹಾದಿ ಬೀದಿಯಲ್ಲಿ ಮಾಡುವಂಥದ್ದಲ್ಲ. ಶಾಸಕಾಂಗ ಸಭೆಗಳನ್ನ ಕರೆಯುತ್ತದೆ. ಶಾಸಕಾಂಗ ಸಭೆಗಳಲ್ಲಿ ಮಾತನಾಡಬೇಕು. ದಾರಿಯಲ್ಲಿ ಮಾತನಾಡಿದರೆ ನಾಯಕತ್ವ ಬದಲಾವಣೆ ಆಗೋದಿಲ್ಲ. ಯಾವುದೇ ಗೊಂದಲಗಳು ಬೇಡ, ಯಾವುದೇ ರೀತಿಯ ನಾಯಕತ್ವ ಬದಲಾವಣೆ ನಮ್ಮ ಪಕ್ಷದಲ್ಲಿ ಇಲ್ಲ. ನರೇಂದ್ರ ಮೋದಿಯವರ ಕಾರ್ಯ, ಕೆಲಸ ಕಾರ್ಯಗಳಿಗೆ ಜನರು ಆಶೀರ್ವಾದ ಮಾಡಿದ್ದಾರೆ. ಇವರ ದುರಹಂಕಾರದಿಂದ ಲೋಕಸಭೆಯಲ್ಲಿ ವಿರೋಧ ಪಕ್ಷದ ಯೋಗ್ಯತೆಯನ್ನೂ ಕೊಟ್ಟಿಲ್ಲ. ಅದನ್ನ ಅರಿತು ಮಾತನಾಡಲಿ ಕಿಡಿ ಕಾರಿದರು. ಇದನ್ನೂ ಓದಿ: ಹೆಣ್ಣಿನ ಬಗ್ಗೆ ಹೇಗೆ ಮಾತಾಡ್ಬೇಕು ಅಂತ ಮಾಜಿ ಸಿಎಂ ಅರ್ಥ ಮಾಡಿಕೊಳ್ಳಬೇಕು: ಸುಮಲತಾ ಕಿಡಿ

ಇದೇ ವೇಳೆ ಸಿಎಂ ನಿವಾಸದ ಹಿಂದೆ ನೂರಾರು ಕೋಟಿ ರುಪಾಯಿ ವ್ಯವಹಾರ ನಡೆಯುತ್ತೆ ಎಂಬ ಶಾಸಕ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕಟೀಲ್, ಅವರ ಹೇಳಿಕೆಗಳಿಗೆ ನಾನು ಹೆಚ್ಚು ಗೌರವಗಳನ್ನ ಕೊಡೋದಿಲ್ಲ ಎಂದು ಹೇಳಿದ್ದಾರೆ.

ಮೇಕೆದಾಟು ವಿಚಾರಕ್ಕೆ ಈಗಾಗಲೇ ಸರ್ಕಾರದ ಮುಖ್ಯಮಂತ್ರಿಗಳು ಅದರ ವಿಚಾರದಲ್ಲಿ ಏನು ಬೇಕೋ ಅದನ್ನ ಮಾಡಿದ್ದಾರೆ. ಕರ್ನಾಟಕ ಸರ್ಕಾರ ಆ ವಿಚಾರದಲ್ಲಿ ಸ್ಪಷ್ಟವಾದ ಧೋರಣೆ ತೋರಿದೆ ಎಂದು ಹೇಳಿದರು.

The post ಸಿ.ಪಿ.ವೈ ಯಾವ ಭಾವನೆಯಲ್ಲಿ ಮಾತಾಡಿದ್ದಾರೆ ಗೊತ್ತಿಲ್ಲ, ಅದರ ವಿವರಣೆ ಕೇಳ್ತೇನೆ: ಕಟೀಲ್ appeared first on Public TV.

Source: publictv.in

Source link