ಇದು ನಿಜಕ್ಕೂ ನೀವು ಅಚ್ಚರಿ ಪಡುವ ರೋಚಕ ಸ್ಟೋರಿ. ಬರೀ ಸ್ಟೋರಿ ಮಾತ್ರವಲ್ಲ, ರೋಚಕವಾದ ಲವ್ ಸ್ಟೋರಿ. ಪ್ರೀತಿಯಲ್ಲಿ ಮುಳುಗಿರೋರಿಗೆ ಜಗತ್ತೆ ಕಾಣೋದಿಲ್ವಂತೆ. ಆದ್ರೆ ಈ ಸ್ಟೋರಿಯಲ್ಲಿರೋ ಪ್ರೇಮಿಗಳ ಪ್ರೀತಿ ಬರೋಬ್ಬರಿ 11 ವರ್ಷಗಳ ಕಾಲ ಇಡೀ ಜಗತ್ತಿಗೇ ಕಂಡಿರಲಿಲ್ಲ. ಅಷ್ಟೇ ಯಾಕೆ, ಪ್ರೇಮಿಗಳ ಮನೆಯವರಿಗೂ ಬಿಲ್‌ಕುಲ್ ಗೊತ್ತಿರಲಿಲ್ಲ.

ಪ್ರೀತಿಗೆ ಬೆಟ್ಟವನ್ನ ತಡಿಯೋ ಶಕ್ತಿ ಇದೆ. ಸಾಗರ ಸುನಾಮಿಯನ್ನ ಮೀರಿಸೋ ಭಕ್ತಿ ಇದೆ. ಕಾಲ ಕಾಲಕ್ಕೂ ಪ್ರೀತಿ ಗೆಲ್ತಾನೆ ಇರುತ್ತೆ. ಜನಮನದ ಬಾಳಲ್ಲಿ ಬಾಳ್ತಾನೆ ಇರುತ್ತೆ.  ನವ ಯುವಕರಿಂದ ಹಿಡಿದು, ವಯೋವೃದ್ಧರ ತನಕವೂ ಪ್ರೀತಿ ಮಾಯೆಯಾಗಿ ಕಾಡುತ್ತೆ. ಕೆಲವರು ಹೇಳಿಕೊಳ್ಳಲ್ಲ, ಕೆಲವರು ತೋರಿಸಿಕೊಳ್ಳಲ್ಲ ಅಷ್ಟೇ. ಹೀಗಿದ್ದರೂ ಸಹ, ಅಲ್ಲಲ್ಲಿ ಆಗಾಗ ಇಡೀ ಜಗತ್ತೇ ಮೆಚ್ಚುವ ಪ್ರೇಮ ಪ್ರಕರಣಗಳು ನಮ್ಮ ನಿಮ್ಮ ನಡುವೆ ಉದ್ಭವವಾಗುತ್ತೆ. ಜೀವನ ಉತ್ಸಾಹವನ್ನ ಪ್ರೀತಿಯ ಚಿಲುಮೆಯನ್ನ ನೀಡುತ್ತಲೇ ಇರುತ್ತವೆ. ಅಂದ್ಹಾಗೆ, ಪಕ್ಕದ ರಾಜ್ಯ ಕೇರಳದಲ್ಲಿ ಇಂಥದ್ದೇ ಒಂದು ಅದ್ಭುತ ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ. ಇದೊಂಥರ ಹಿಂದೆ ನಡೆದಿರುವ, ಮುಂದೆ ನಡೆಯುವ ಪ್ರೇಮ ಪ್ರಕರಣಗಳಿಗಿಂತ ವಿಭಿನ್ನ. ಕೇಳೋಕೂ ಚೆನ್ನ, ನೋಡೋದಕ್ಕೂ ಚಿನ್ನ.

ಅದೇನೋ ಗೊತ್ತಿಲ್ಲಪ್ಪ, ಕೇರಳದಲ್ಲಿ ನಡೆಯುವ ಕೆಲವು ಘಟನೆಗಳೇ ಇಂಟರೆಸ್ಟಿಂಗ್ ಆಗಿರುತ್ತೆ ಅನಿಸುತ್ತೆ. ಹೀಗಾಗಿಯೇ ಟ್ವಿಸ್ಟ್ ಆಂಡ್ ಟರ್ನ್, ಕ್ರಿಸ್ಪಿ ಕ್ರೈಂ, ಜ್ಯೂಸಿ ಎಲಿಮೆಂಟ್​ಗಳನ್ನ ಬೆರೆಸಿಕೊಂಡ ಖಡಕ್ ಸಿನಿಮಾ ಕಥೆಗಳು ಕೂಡ ಕೇರಳದಿಂದಲೇ ಬರ್ತ ಇರುತ್ತೆ. ಇದೇ ಕಾರಣಕ್ಕಿರಬೇಕು, ಮಲಯಾಳಂ ಸಿನಿ ರಂಗದಲ್ಲಿ ಭಾಷೆಗೂ ಮೀರಿದ ರಸರಂಜನೆಯ ಕೂತುಹಲದ ಕಥೆಗಳ ಸಿನಿಮಾಗಳು ಬರುತ್ತವೆ. ಇತ್ತೀಚಿನ ವರ್ಷಗಳಲ್ಲಿ ಮಾಲಿವುಡ್​ ಸಿನಿಮಾಗಳು ಇಡೀ ಇಂಡಿಯಾವೇ ಮೆಚ್ಚುವಂತಹ ಹಾಗು ಕಥೆ ತುಂಬಿದ ಮನರಂಜನೆಯನ್ನ ನೀಡುತ್ತಿವೆ. ಈ ಪ್ರೇಮ ಕಥೆ ಕೂಡ ಯಾವ ಸಿನಿಮಾ ಕಥೆಗೂ ಕಡಿಮೆ ಇಲ್ಲ. ಪಕ್ಕಾ ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಲವ್ ಸ್ಟೋರಿ ಸಿನಿಮಾ ಆಗೋ ಹಾಗಿದೆ ಈ ಪ್ರೇಮ ಪ್ರಕರಣ.

ಪ್ರೀತಿಸೋ ಪ್ರೇಮಿಗಳಿಗೆ ಜಗತ್ತೆ ಕಾಣೋದಿಲ್ವಂತೆ. ಆದ್ರೆ ಈ ಸ್ಟೋರಿಯ ಪ್ರೇಮಿಗಳ ಪ್ರೀತಿ ಇಡೀ ಜಗತ್ತಿಗೆ 11 ವರ್ಷಗಳಿಂದ ಕಂಡೇ ಇರಲಿಲ್ಲ. ಹೊರ ಜಗತ್ತಿನ ವಿಷಯವಿರಲಿ, ಈ ಪ್ರೇಮಿಗಳ ಮನೆಯವರಿಗೆನೇ ಗೊತ್ತಿರಲಿಲ್ಲ. ಬರೋಬ್ಬರಿ 11 ವರ್ಷ ಮನೆಯವರ ಜೊತೆಗಿದ್ದೇ, ಗುಟ್ಟಾದ ಸಂಸಾರ ಮಾಡಿದ್ದರು ಈ ಪ್ರೇಮಿಗಳು.

11 ವರ್ಷದಿಂದ ಗುಟ್ಟಾಗಿಯೇ ಇತ್ತು ಆ ಪ್ರೇಮ ಸಂಸಾರ
ಇಬ್ಬರು ಒಟ್ಟಿಗಿದ್ದರೂ ಜಗತ್ತಿಗೆ ಗೊತ್ತೇ ಇರಲಿಲ್ಲ ವಿಚಾರ!

ಪ್ರೇಮ ಎಷ್ಟು ಕುರುಡೋ, ಪ್ರೇಮಿಗಳೂ ಅಷ್ಟೇ ಕುರುಡು ಅನ್ನೋ ಮಾತುಗಳನ್ನ ಕೇಳಿರುತ್ತಿರಿ. ಪ್ರೀತಿ ಅನ್ನೋ ರೈಲ್ವೇ ಕಂಬಿ ಮೇಲೆ ಪ್ರೇಮಿಗಳ ರೈಲು ಸದಾ ಚುಕು ಬುಕು ಅಂತ ಓಡ್ತಾನೆ ಇರುತ್ತೆ. ಕೆಲವರ ಪ್ರೇಮ ಪ್ರಕರಣ ಜಗತ್ತಿಗೆ ಗೊತ್ತಾಗುತ್ತೆ, ಇನ್ನು ಕೆಲವರ ಪ್ರೇಮ ಪ್ರಕರಣ ಲೋಕದ ಕಣ್ಣಿಗೆ ಕಾಣೋದೇ ಇಲ್ಲ. ಈ ಹಿಂದೆ ಆಕೆ 11 ವರ್ಷದ ಆಪ್ರಾಪ್ತ ಬಾಲಕಿ. ಚಾಲಾಕಿ ಪ್ರೇಮಿಯ ಬಲೆಗೆ ಬಿದ್ದು, ತನ್ನ ಪೋಷಕರ ಮನೆಯಿಂದ ಕೇವಲ 500 ಮೀಟರ್ ದೂರದಲ್ಲೇ ಇದ್ದ ಪ್ರಿಯತಮನ ಮನೆಗೆ ಓಡಿಹೋಗಿದ್ದಳು. ಅಲ್ಲಿ ಪ್ರಿಯತಮನ ಮನೆಯವರಿಗೆ ಗೊತ್ತಿಲ್ಲದೆ ಬರೊಬ್ಬರಿ 11 ವರ್ಷಗಳು ಇದ್ದಳು ಅಂದ್ರೆ ನಿಜಕ್ಕೂ ಅಚ್ಚರಿ ಅನ್ಸುತೆ ಅಲ್ವಾ.!?

ಕೇರಳದ ಪಾಲಕ್ಕಾಡ್ ಜಿಲ್ಲೆಯ ಅಯಲೂರು ಗ್ರಾಮದಲ್ಲಿ ಈ ವಿಶೇಷವಾದ ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ. 11 ವರ್ಷದ ಹಿಂದೆ ಸಜಿತಾ ಅನ್ನೋ ಹುಡ್ಗಿ ನಿಗೂಢವಾಗಿ ನಾಪತ್ತೆ ಆಗುತ್ತಾಳೆ. ಎಲ್ಲಿ ಹುಡಿಕಿದ್ರೂ, ಪೊಲೀಸರು ತಡಕಾಡಿದ್ರೂ ಆಕೆಯ ಪತ್ತೆಯೇ ಸಿಗೋದಿಲ್ಲ. ಸಜಿತಾ ನಿಗೂಢವಾಗಿ ಸಾವನಪ್ಪಿರಬೇಕು ಎಂದುಕೊಂಡು ಮನೆಯವರು ಸುಮನ್ನಾಗಿರುತ್ತಾರೆ. ಆದ್ರೆ ಆಕೆ ಕೇವಲ 500 ಮೀಟರ್ ದೂರದ ಮನೆಯಲ್ಲೇ ವಾಸವಾಗಿರುತ್ತಾಳೆ ಅಂತ ಯಾರೂ ಸಹ ಊಹಿಸಿರಲಿಲ್ಲ. ಅದೂ ಸಹ ಆ ಮನೆಯವರಿಗೇ ಗೊತ್ತಿಲ್ಲದ ಹಾಗೆ! ಇದಕ್ಕೆ ಕಾರಣ ಸಜಿತಾಳ ಪ್ರೇಮಿ ರೆಹಮಾನ್.

ನಿಗೂಢವಾಗಿ ತನ್ನ ಪ್ರೇಮಿಯನ್ನ ಇಟ್ಟಿರುತ್ತಾನೆ ರೆಹಮಾನ್!
ಆಕೆ ಮನೆಯಲ್ಲೇ ಇದ್ದರು ಮನೆಯವರಿಗೆ 11 ವರ್ಷ ಗೊತ್ತಿರಲಿಲ್ಲ!

ಇದು ನಿಜಕ್ಕೂ ದೃಶ್ಯಂ ಸಿನಿಮಾವನ್ನೂ ಮೀರಿಸುವ ರೋಚಕ ಸ್ಟೋರಿ. 11 ವರ್ಷದ ಹಿಂದೆ ಸಜಿತಾ ಗುಟ್ಟಾಗಿ ಪ್ರಿಯತಮ ರೆಹಮಾನ್ ಮನೆ ಸೇರಿರುತ್ತಾಳೆ. ರೆಹಮಾನ್ ಅವರ ತಂದೆ ತಾಯಿ ಮತ್ತು ಸಹೋದರಿಗೂ ಈ ವಿಚಾರ ಗೊತ್ತೇ ಇರಲಿಲ್ಲ. ಅಷ್ಟು ಸೀಕ್ರೆಟ್​ ಆಗಿ ಪ್ರಿಯತಮೆ ಸಜಿತಾಳನ್ನ  ರೆಹಮಾನ್ ಬಚ್ಚಿಟ್ಟಿರುತ್ತಾನೆ.

ಅದ್ಹೇಗೆ ಪ್ರೇಮಿಗಳಿಬ್ಬರು11 ವರ್ಷ ಗುಟ್ಟಾಗಿದ್ದರು?
ಸಜಿತಾಳನ್ನ ರೆಹಮಾನ್​​ ರಹಸ್ಯವಾಗಿ ಇಟ್ಟಿದ್ದೇಕೆ..?
ಸೀಕ್ರೆಟ್ ಲವ್ ಸ್ಟೋರಿ ಹೊರಬಂದಿದ್ದು ಹೇಗೆ..?

ಪ್ರೀತಿ ಮಾಡಬಾರದು , ಮಾಡಿದರೆ ಜಗಕೆ ಹೆದರಬಾರದು ಅಂತ ಹೇಳ್ತಾರೆ. ಆದ್ರೆ ಈ ವಾಕ್ಯ ರೆಹಮಾನ್ ಮತ್ತು ಸಜಿತಾಳರಿಗೆ ಅಪ್ಲೈ ಆಗೋದು ಕಷ್ಟವಿತ್ತು. ಕಾರಣ ಜಾತಿ..! ಇಬ್ಬರದೂ ಬೇರೆ ಬೇರೆ ಜಾತಿ ಧರ್ಮ.. ಈ ಕಾರಣಕ್ಕೆ ನಮ್ಮ ಪ್ರೀತಿಯನ್ನ ಮನೆ ಮಂದಿ ಒಪ್ಪೋಲ್ಲ ಅಂತ ಇಬ್ಬರು ಗುಟ್ಟಾಗಿ ಮದುವೆಯಾಗಿರುತ್ತಾರೆ. ಪ್ರಿಯತಮ ರೆಹಮಾನ್ ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್. ತನ್ನ ಮನೆಯಲ್ಲಿ ಒಂದು ಪುಟ್ಟ ಕೊಣೆಯನ್ನ ಮಾಡಿಕೊಂಡು ಆ ಕೋಣೆಯಲ್ಲಿ ಪ್ರಿಯತಮೆ ಸಜಿತಾಳನ್ನ ಇರಿಸಿ ಆ ಕೋಣೆಗೆ ಯಾರೂ ಬರದಂತೆ ಹಾಗು ಮುಟ್ಟದಂತೆ ಬಾಗಿಲಿಗೆ ಕರೆಂಟ್ ವೈರುಗಳನ್ನ ಅಳವಡಿಸಿರುತ್ತಾನೆ.

ಸಜಿತಾಗೆ 11 ವರ್ಷ ಹೊರ ಜಗತ್ತಿನ ಅರಿವೇ ಇರಲಿಲ್ಲ. ಪ್ರೇಮ ಜಗತ್ತಿನಲ್ಲೇ ಪುಟ್ಟ ಕೋಣೆಯನ್ನೇ ದೊಡ್ಡ ಊರನ್ನಾಗಿಸಿಕೊಂಡು ಪ್ರೇಮಿಗಾಗಿ ಇರುತ್ತಾಳೆ. ಎಂದಿಗೂ ಸಜಿತಾ ಮೊಬೈಲ್ ಬಳಸಿಲ್ಲ.. ತಮ್ಮ ಮನೆ ಟಿವಿಗೆ ಇಯರ್ ಫೋನ್ ಅಳವಡಿಸಿಕೊಂಡು ಟಿವಿಯನ್ನ ಕೇಳುತ್ತಲೇ ನೋಡಿದಂಗೆ ಫೀಲ್ ಆಗಿ 11 ವರ್ಷ ಜೀವನ ಮಾಡಿದ್ದಾಳೆ. ಪ್ರೀಯತಮ ರೆಹಮಾನ್ ಮನೆಯಲ್ಲಿ ಎಲ್ಲರೂ ಕೆಲಸಕ್ಕೆ ಹೋದಾಗ ರಹಸ್ಯ ಕೋಣೆಯಿಂದ ಹೊರಬಂದು ಡೌಟ್ ಬರದಂತೆ ಓಡಾಡಿಕೊಂಡು ಇದ್ದಳು. ರಾತ್ರಿ ವೇಳೆ ಮಾತ್ರ ಶೌಚಾಲಯಕ್ಕೆ ಹೋಗಿ ಬರುತ್ತಿದ್ದಳು. ಇದೇ ರೀತಿ ಬರೋಬ್ಬರಿ ಹನ್ನೊಂದು ವರ್ಷ ಸದ್ದಿಲ್ಲದೆ ನಡೆದಿದೆ. ಹಾಗಾದ್ರೆ ಸಜಿತಾ ಊಟ ಹೇಗೆ ಮಾಡ್ತಿದ್ದಳು ಅನ್ನೋದು ಇನ್ನೂ ಇಂಟ್ರಸ್ಟಿಂಗ್.

ಪ್ರೇಮಿಗೆ ಪ್ರೇಮಿಯಿಂದ ಸಿಕ್ತಿತ್ತು ಪ್ರತಿದಿನ ಊಟ
ತನ್ನ ಹುಡುಗಿಗೆ ಪ್ರತಿ ದಿನ ಊಟ ಮಾಡಿಸುತ್ತಿದ್ದ ರೆಹಮಾನ್.. ಅದು ಹೇಗೆ ಅನ್ನೋದು ವೆರಿ ಇಂಟ್ರಸ್ಟಿಂಗ್. ಮನೆ ಮಂದಿ ಜೊತೆ ರೆಹಮಾನ್ ಊಟ ಮಾಡುತ್ತಿರಲಿಲ್ಲ. ತನ್ನ ತಟ್ಟೆಗೆ ಇಬ್ಬರು ಊಟ ಮಾಡುವಷ್ಟು ಊಟವನ್ನ ಹಾಕಿಕೊಂಡು ತನ್ನ ರಹಸ್ಯ ಪ್ರೀತಿ ಕೋಣೆ ಸೇರುತ್ತಿದ್ದ. ಈ ಬಗ್ಗೆ ಮನೆಯಲ್ಲಿ ಪ್ರಶ್ನೆ ಮಾಡಿದಾಗ ಮನೆ ಮಂದಿ ಮೇಲೆ ಜಗಳವಾಡುತ್ತಿದ್ದ, ಸಿಟ್ಟು ಸೆಡವು ಮಾಡುತ್ತಿದ್ದ. ಹೀಗಾಗಿ ಮಗನನ್ನ ತಂದೆ ತಾಯಿ ಯಾರೂ ಸಹ ಯಾಕಪ್ಪ ಇಷ್ಟು ಊಟ ಹಾಕಿಕೊಳ್ತಿದ್ದಿಯಾ ಅಂತ ಕೇಳೋದನ್ನೇ ನಿಲ್ಲಿಸಿ ಬಿಟ್ಟಿದರಂತೆ.

ಎಲ್ಲಾ ಫೆಸಿಲಿಟಿ ಇದ್ದೂ ಮನೆ ಮಂದಿಯೆಲ್ಲ ಒಪ್ಪಿ ಅಪ್ಪಿ ಮದುವೆ ಮಾಡಿದ ಜೋಡಿಯೇ ಆರು ತಿಂಗಳಿಗೋ ಒಂದು ವರ್ಷಕ್ಕೋ ದೂರಾದೂರ ಆಗೋ ಪ್ರಕರಣವನ್ನ ನಾವು ನೀವು ನೋಡಿರುತ್ತೇವೆ. ಆದ್ರೆ ಈ ಇಬ್ಬರು ಇಷ್ಟೆಲ್ಲಾ ಕಷ್ಟವಿದ್ದರೂ ಬರೋಬ್ಬರಿ 11 ವರ್ಷ ಗುಟ್ಟಾಗಿದ್ದರು ಅಂದ್ರೆ ನಿಜಕ್ಕೂ ಇವರ ಪ್ರೀತಿ ಎಷ್ಟರ ಮಟ್ಟಕ್ಕೆ ಗಟ್​ಮುಟ್ಟಾಗಿತ್ತು ಅನ್ನೋದನ್ನ ನೀವೇ ಯೋಚಿಸಿ. ಹಾಗಾದ್ರೆ ಈ ಗುಟ್ಟಾದ ರೋಚಕ ಪ್ರೇಮ ಪ್ರಕರಣ ಹೊರ ಜಗತ್ತಿಗೆ ಬಂದಿದ್ದು ಹೇಗೆ.. ಅನ್ನೋದೇ ಇಂಟರೆಸ್ಟಿಂಗ್

11 ವರ್ಷದ ನಂತರ ಹೊರ ಬಂದ ರಹಸ್ಯ ಪ್ರೇಮ
ಕೊನೆಗೂ ಸುಖಾಂತ್ಯ ಕಂಡ ಕುತೂಹಲಕಾರಿ ಪ್ರೇಮ ಕಥೆ

ಅದ್ಯಾವ ಗಂಡ ಹೆಂಡತಿಯರೇ ಆಗಿರಲಿ, ಜಗಳ ಇದ್ದೇ ಇರುತ್ತೆ. ವಿರಸ ಅನ್ನೋ ಕಹಿ ಈ ಗುಟ್ಟಾದ ಸಿಹಿ ಪ್ರೇಮಿಗಳಲ್ಲೂ 11 ವರ್ಷದ ನಂತರ ಆಯ್ತು. ಪ್ರೇಮಿ ಸಜಿತಾ ಪ್ರಿಯತಮ ರೆಹಮಾನ್ ಜೊತೆ ಜಗಳವಾಡಿಕೊಂಡು ಗುಟ್ಟಾಗಿಯೇ ಊರು ಬಿಟ್ಟಳು. ಇನ್ನು ತನ್ನ ಪ್ರಿಯತಮೆ ಇಲ್ಲದೆ ಕಂಗಾಲಾಗಿದ್ದ ರೆಹಮಾನ್ ಮನೆಯವರ ಜೊತೆ ಜಗಳವಾಡಿಕೊಂಡು ಮನೆಯಿಂದ ಹೊರಟು ಹೋಗಿದ್ದ. ಹೀಗೆ ಪಕ್ಕದ ಊರಿನಲ್ಲಿ ರೆಹಮಾನ್ ತಲೆ ಮರಿಸಿಕೊಂಡು ಓಡಾಡುತ್ತಿದ್ದಾಗ ರೆಹಮಾನ್ ಸೋದರನಿಗೆ ಸಿಕ್ಕಿ ಬಿದ್ದ. ಯಾಕೆ ಇಲ್ಲಿ ಓಡಾಡಿಕೊಂಡು ಇದ್ದಿಯಾ ಅಂತ ಪ್ರಶ್ನಿಸಲು ಹೋದಾಗ ರೆಹಮಾನ್ ಪರಾರಿಯಾಗಲು ಪ್ರಯತ್ನ ಪಟ್ಟ. ಆದ್ರೆ ರೆಹಮಾನ್ ಸಹೋದರ ರೆಹಮಾನ್​​ನ್ನ ಹಿಡಿದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾನೆ. ಆಗ ಪೊಲೀಸರು ವಿಚಾರಿಸಿದಾಗ ತನ್ನ 11 ವರ್ಷದ ರಹಸ್ಯ ಪ್ರೇಮ ಕಥೆಯನ್ನ ಹೇಳಿದ್ದಾನೆ ರೆಹಮಾನ್. ಕೊನೆಗೆ ರೆಹಮಾನ್ ಪ್ರೀಯತಮೆ ಸಜಿತಾಳನ್ನ ಠಾಣೆಗೆ ಕರಿಸಿ ವಿಚಾರಿಸಿದಾಗ ಅಸಲಿ ಸತ್ಯ ಹೊರಬಂದಿದೆ. 11 ವರ್ಷದ ಹಿಂದೆ ಆಪ್ರಾಪ್ತೆ ಸಜಿತಾ ಈಗ ಮದುವೆಯಾಗಲು ಅರ್ಹ ಎಂದು ತಿಳಿದು ಪೊಲೀಸರು ಇಬ್ಬರನ್ನೂ ಕಳುಹಿಸಿಕೊಟ್ಟಿದ್ದಾರೆ. ಈಗ ಈ ಗುಟ್ಟಾದ ಹನ್ನೊಂದು ವರ್ಷದ ರಹಸ್ಯ ಪ್ರೇಮ ಪ್ರಕರಣ ಇಡೀ ದೇಶಾದ್ಯಂತ ಸುದ್ದಿಯಾಗಿದೆ. ನವ ಯುವ ಪ್ರೇಮಿಗಳಿಗೆ ಅಚ್ಚರಿಯ ಸ್ಫೂರ್ತಿ ಕಥೆಯಾಗುತ್ತಿದೆ.

The post ಸೀಕ್ರೆಟ್ ಲವ್​​ಸ್ಟೋರಿ, ಗುಟ್ಟಾಗಿ ಸಂಸಾರ.. ಹುಡ್ಗಿ 11 ವರ್ಷ ಮನೆಯಲ್ಲಿದ್ರೂ ಕುಟುಂಬದವ್ರಿಗೆ ಗೊತ್ತೇ ಇರಲಿಲ್ಲ! appeared first on News First Kannada.

Source: newsfirstlive.com

Source link