ಬೆಂಗಳೂರು: ಲಾಕ್​ಡೌನ್ ವೇಳೆ ಸೀಜ್ ಆದ ವಾಹನಗಳ ರಿಲೀಸ್ ಪ್ರಕ್ರಿಯೆ ಇಂದಿನಿಂದ ಶುರು ಆಗಿದೆ. ಆದ್ರೆ ಸೀಜ್ ಆಗಿದ್ದ ವಾಹನಗಳನ್ನ ಮಾಲೀಕರು ವಾಪಸ್​ ಪಡೆಯಬೇಕಂದ್ರೆ  ಈ ಕಂಡೀಷನ್ಸ್​ ಪೂರೈಸಬೇಕು
ಏನದು ಕಂಡೀಷನ್ಸ್​ ?
  • ಹಳೆ ಕೇಸ್ ಕ್ಲೀಯರ್ ಮಾಡಿ, ಆ ಕೇಸ್ ಫೈನ್ ಜೊತೆ ಲಾಕ್​ಡೌನ್ ನಿಯಮ ಉಲ್ಲಂಘನೆಗೆ 500 ರೂಪಾಯಿ ಕಟ್ಟಿದ್ರೆ ಮಾತ್ರ ವಾನಗಳನ್ನ ಹಿಂದಿರುಗಿಸಲಾಗುತ್ತದೆ.
  • ₹100 ಬಾಂಡ್ ಪೇಪರ್, ಆಧಾರ್ ಕಾರ್ಡ್, ಡಿಎಲ್ & ಆರ್​​ಸಿ ದಾಖಲೆ ಝೆರಾಕ್ಸ್ ಹಾಗೂ ಒಂದು ಫೋಟೋವನ್ನ ಸಲ್ಲಿಸೋದು ಕಡ್ಡಾಯ.
  • ಹಲವೆಡೆ ಪ್ರೈವೆಟ್ ಪಾರ್ಕಿಂಗ್ ಚಾರ್ಜ್ ಕೂಡ ಅಪ್ಲೈ ಆಗಿದ್ದು, ಸವಾರರು ಅದನ್ನ ಕಟ್ಟಬೇಕು.

ಫೈನ್ ಕಟ್ಟಿ ಎನ್​ಒಸಿ ತಂದ ಬಳಿಕ ವಾಹನಗಳನ್ನ ವಾಪಸ್​ ಕೊಡಲಾಗುತ್ತದೆ. ಲಾಕ್ ಡೌನ್ ಟೈಂನಲ್ಲಿ ಒಟ್ಟು 36 ಸಾವಿರಕ್ಕೂ ಅಧಿಕ ವಾಹನಗಳು ಸೀಜ್ ಆಗಿದ್ದವು.  ನಿನ್ನೆ ಹೈ ಕೋರ್ಟ್ ಆದೇಶದ ಬೆನ್ನಲೆ ವಾಹನಗಳನ್ನ ಬಿಡಿಸಿಕೊಳ್ಳಲು ಸವಾರರು ಬರುತ್ತಿದ್ದಾರೆ. ನಗರದ ಎಲ್ಲಾ ಠಾಣಾ ವ್ಯಾಪ್ತಿಗಳಲ್ಲಿ ವಾಹನಗಳ ಬಿಡುಗಡೆ ಪ್ರಕ್ರಿಯೆ ನಡೆಯುತ್ತಿದೆ.

The post ಸೀಜ್​ ಆಗಿದ್ದ ವಾಹನಗಳು ಇಂದಿನಿಂದ ಮಾಲೀಕರಿಗೆ ವಾಪಸ್.. ಆದ್ರೆ 3 ಕಂಡೀಷನ್ಸ್​ appeared first on News First Kannada.

Source: newsfirstlive.com

Source link