ಬೆಂಗಳೂರು: ಇಷ್ಟು  ದಿನ ಕೊರೊನಾ ನಿಯಂತ್ರಿಸಲು ಜನರನ್ನ ಮನೆಯಿಂದ ಹೊರಬಾರದಂತೆ ನೋಡಿಕೊಳ್ತಿದ್ದ ಪೊಲೀಸ್ರಿಗೆ ಈಗ ಹೊಸ ತಲೆನೋವು ಶುರುವಾಗಿದೆ. ಅದೇನಂದ್ರೆ, ಲಾಕ್​​ ಡೌನ್​ ಸಮಯದಲ್ಲಿ ಅನಗತ್ಯವಾಗಿ ಹೊರಗಡೆ ಓಡಾಡಿದವರ ಗಾಡಿಗಳನ್ನ ಸೀಜ್​ ಮಾಡಿದ್ದ ಆರಕ್ಷಕರು ಈಗ ಆ ವಾಹನಗಳನ್ನ ನಿಲ್ಲಿಸೋಕೆ ಜಾಗವಿಲ್ಲದೆ ಪರದಾಡುವಂತಾಗಿದೆ.

ಬೆಂಗಳೂರಲ್ಲಿ ಇಲ್ಲಿವರೆಗೂ ಪೊಲೀಸ್ರು ಸೀಜ್​ ಮಾಡಿರೋದು ಬರೋಬ್ಬರಿ ಎರಡೂವರೆ ಸಾವಿರ ವಾಹನಗಳು. ಇದೀಗ ಈ ಎಲ್ಲಾ ವಾಹನಗಳನ್ನ ನಿಲ್ಲಿಸೋದಕ್ಕೆ ಪೊಲೀಸ್​ ಠಾಣೆಯ ಮುಂದೆ ಜಾಗವಿಲ್ಲ. ಇದು ಪೊಲೀಸ್​ ಸಿಬ್ಬಂದಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಾಗಾಗಿ ಅಕ್ಕಪಕ್ಕದ ಗ್ರೌಂಡ್​ಗಳಲ್ಲಿ ವಾಹನಗಳನ್ನ ನಿಲ್ಲಿಸಲು ಮುಂದಾಗಿದ್ದಾರೆ.

ಕೆಲವೊಂದು ಸೀಜ್ ಮಾಡಿರೋ ವಾಹನಗಳ ಮಾಲೀಕರಿಗೆ ಕರೆ ಮಾಡಿ, ಠಾಣೆಗೆ ಬರುವಂತೆ  ಸೂಚಿಸಿದ್ರೂ, ಅನೇಕರು ಬರ್ತಿಲ್ಲ. ಹೀಗಾಗಿ, ಸೀಜ್ ಆಗಿರೋ ವಾಹನಗಳಿಂದ ಪೊಲೀಸ್ರಿಗೆ ಸಮಸ್ಯೆ ಎದುರಾಗಿದೆ ಕಾರಣ. ಜಪ್ತಿ ಮಾಡಲಾದ ವಾಹನಗಳನ್ನ ಠಾಣೆಯ ಒಳಗಡೆ ತಂದು ನಿಲ್ಲಿಸಬಾರದು ಅನ್ನೋ ಕಾರಣಕ್ಕೆ, ಕೆಲವೊಂದು ಠಾಣೆಗಳ ಮುಂಭಾಗದಲ್ಲೇ ಬ್ಯಾರಿಕೇಡ್​​​ಗಳನ್ನ ಹಾಕಿದ್ದಾರೆ.  ಸದ್ಯಕ್ಕೆ ಸೀಜ್ ಆಗಿರೋ ಆಟೋ, ಬೈಕ್​ಗಳೆಲ್ಲವನ್ನೂ ಠಾಣೆಯ ಮುಂಭಾಗವೇ ಪಾರ್ಕಿಂಗ್​ ಮಾಡಲದೆ.

ಈಗಾಗ್ಲೇ ಆಡುಗೋಡಿ, ಉಪ್ಪಾರಪೇಟೆ ಸೇರಿದಂತೆ ಹಲವು ಠಾಣೆಗಳ ಮುಂದೆ ಪಾರ್ಕಿಂಗ್​ ಫುಲ್ ಆಗಿದ್ದು, ವಾಹನಗಳನ್ನ ಎಲ್ಲಿಗೆ ಶಿಫ್ಟ್​ ಮಾಡ್ಬೇಕು ಅನ್ನೋ ತಲೆನೋವು ಶುರುವಾಗಿದೆ. ಮೊದಲೇ, ಲಾಕ್ ಡೌನ್ ಮುಗಿವರೆಗೂ ಗಾಡಿ ಕೊಡಲ್ಲ ಅಂತಿದ್ದಾರೆ ಅಧಿಕಾರಿಗಳು. ಹಾಗಿದ್ರೆ ಅಲ್ಲಿವರೆಗೂ ಸೀಜ್ ಆದ ಗಾಡಿಗಳನ್ನ ಏನ್ ಮಾಡೋದು..? ಅನ್ನೋ ಚಿಂತೆ. ಹೀಗಾಗಿ, ಗ್ರೌಂಡ್​ಗಳ ಮೊರೆ ಹೋಗುತ್ತಿದ್ದಾರೆ ಪೊಲೀಸ್ರು.

The post ಸೀಜ್​ ಮಾಡಿರೋ ಗಾಡಿಗಳ ಪಾರ್ಕಿಂಗ್​ಗೆ ಜಾಗವಿಲ್ಲದೆ ಬೆಂಗಳೂರು ಪೊಲೀಸರ ಒದ್ದಾಟ appeared first on News First Kannada.

Source: newsfirstlive.com

Source link