ತುಮಕೂರು: ಪೌರ್ಣಮಿಯ ಹಿನ್ನೆಲೆ ತೋಟಕ್ಕೆ ಮೊಸರನ್ನ ಎಡೆ ಇಡಲೆಂದು ತೆರಳಿದ್ದ ತಾಯಿ ಇಬ್ಬರು ಮಕ್ಕಳು ಬಾವಿಗೆ ಬಿದ್ದು ಸಾವನ್ನಪ್ಪಿದ ದುರ್ಘಟನೆ ಜಿಲ್ಲೆಯ ತುಮಕೂರು ತಾಲೂಕಿನ ತುಳಸಿಪುರ ಗ್ರಾಮದ ಸಮೀಪದ ತಿರುಮಲಪಾಳ್ಯದಲ್ಲಿ ನಡೆದಿದೆ. ಹೇಮಲತಾ (34), ಮಾನಸ (6), ಪೂರ್ವಿಕ (3) ಸಾವನ್ನಪ್ಪಿರುವ ದುರ್ದೈವಿಗಳು.

ತೋಟಕ್ಕೆ ಮೊಸರನ್ನ ಎಡೆ ಇಡಲು ಹೋಗಿದ್ದ ವೇಳೆ ಮಕ್ಕಳು ಬಾವಿಯ ದಡದಲ್ಲಿದ್ದ ಸೀಬೆಹಣ್ಣಿನ ಮರದಲ್ಲಿ ಹಣ್ಣು ಕೀಳಲು ಹೋಗಿ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾರೆ. ಈ ವೇಳೆ ಮಕ್ಕಳನ್ನು ರಕ್ಷಿಸಲು ತಾಯಿ ಹೇಮಲತಾ ಕೂಡ ಬಾವಿಗೆ ಹಾರಿದ್ದಾರೆ. ದುರದೃಷ್ಟವಶಾತ್ ಬಾವಿಯಿಂದ ಹೊರಬರಲಾಗದೇ ತಾಯಿ ಹಾಗೂ ಮಕ್ಕಳು ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಎಸ್​.ಪಿ. ರಾಹುಲ್ ಕುಮಾರ್ ಶಹಪೂರವಾಡ್, ಸರ್ಕಲ್ ಇನ್​ಸ್ಪೆಕ್ಟರ್ ರಾಮಕೃಷ್ಣಯ್ಯ, ಕೋರಾ ಪಿಎಸ್​ಐ ಹರೀಶ್ ಕುಮಾರ್ ಭೇಟಿ ನೀಡಿದ್ದಾರೆ. ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

The post ಸೀಬೆಹಣ್ಣಿನ ಆಸೆಯಿಂದಾಗಿ ಬಾವಿಗೆ ಬಿದ್ದು ದಾರುಣ ಸಾವನ್ನಪ್ಪಿದ್ರು ತಾಯಿ, ಕಂದಮ್ಮಗಳು appeared first on News First Kannada.

Source: newsfirstlive.com

Source link