ನವದೆಹಲಿ: ಜೂನ್ ತಿಂಗಳಲ್ಲಿ 9-10 ಕೋಟಿ ಕೋವಿಶೀಲ್ಡ್ ಲಸಿಕೆಗಳನ್ನ ತಯಾರಿಸಿ ಪೂರೈಸಲಾಗುವುದು ಎಂದು ಸೀರಮ್ ಇನ್​​ಸ್ಟಿಟ್ಯೂಟ್ ಆಫ್ ಇಂಡಿಯಾ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದೆ.  ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದ ಸೀರಮ್ ಇನ್​ಸ್ಟಿಟ್ಯೂಟ್ ಈ ಮಾಹಿತಿ ನೀಡಿದೆ.

ಮೇ ತಿಂಗಳಿನಲ್ಲಿ ತಯಾರಿಕೆಯ ಪ್ರಮಾಣ 6.5 ಕೋಟಿ ಇತ್ತು. ಈ ಪ್ರಮಾಣವನ್ನ ಜೂನ್ ತಿಂಗಳಿನಲ್ಲಿ 9-10 ಕೋಟಿಗೆ ಹೆಚ್ಚಿಸಲಾಗುವುದು. ಕಂಪನಿಯ ಉದ್ಯೋಗಿಗಳು ಹಗಲಿರುಳು ವ್ಯಾಕ್ಸಿನ್ ತಯಾರಿಕೆಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪತ್ರದ ಮೂಲಕ ಸೀರಮ್ ಇನ್​ಸ್ಟಿಟ್ಯೂಟ್ ತಿಳಿಸಿದೆ.

ಅಲ್ಲದೇ ಸೀರಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ದೇಶದ ಜನರ ರಕ್ಷಣೆಯ ಬಗ್ಗೆ ಪ್ರಾಮಾಣಿಕ ಕಾಳಜಿಯನ್ನು ಹೊಂದಿದೆ. ಸಿಇಓ ಆದಾರ್ ಪೂನಾವಾಲಾ ಅವರ ನೇತೃತ್ವದಲ್ಲಿ ನಮ್ಮ ಟೀಂ ಹೆಗಲಿಗೆ ಹೆಗಲು ಕೊಟ್ಟು ಕೊರೊನಾ ವಿರುದ್ಧ ಹೋರಾಡುತ್ತಿದೆ ಎಂದು ಹೇಳಿದೆ.

The post ಸೀರಮ್ ಸಂಸ್ಥೆಯಿಂದ ಹೊರ ಬಿತ್ತು ಸಮಾಧಾನಕರ ಸುದ್ದಿ.. ಕೇಂದ್ರಕ್ಕೆ ಪೂನಾವಾಲಾ ಪತ್ರ appeared first on News First Kannada.

Source: newsfirstlive.com

Source link