ಕಿರುತೆರೆಯಲ್ಲಿ ಹೀಗೆ ಬಂದು ಹಾಗೇ ಹೋಗೊ ಧಾರಾವಾಹಿಗಳು ಹೆಚ್ಚಾಗುತ್ತಿವೆ. ಇದಕ್ಕೆ ಸಾಕಷ್ಟು ಕಾರಣಗಳಿದ್ರು ಕೂಡ ಮುಖ್ಯವಾಗಿ ನಿಲ್ಲೋದು ಪ್ರೇಕ್ಷಕರ ಆಶೀರ್ವಾದ. ವೀಕ್ಷಕರು ಸೀರಿಯಲ್ನ್ನ ಒಪ್ಪಿ ಅಪ್ಪಿದ್ದಾರೆ ಎನ್ನುವುದನ್ನ ತಿಳಿಯುವುದಕ್ಕೆ ಟಿಆರ್ಪಿ ಅನ್ನೋ ಮಾರ್ಕ್ಸ್ ಗ್ರೇಡ್ ಇದ್ದು, ಅಲ್ಟಿಮೇಟ್ಲಿ ಇದೇ ಫೈನಲ್…
ಹೌದು, ಟಿಆರ್ಪಿ ಲೆಕ್ಕಾಚರದ ಬಗ್ಗೆ ನಾವು ಈಗಾಗಲೇ ನಿಮಗೆ ಮಾಹಿತಿ ನೀಡ್ತಾನೆ ಬಂದಿದೀವಿ. ಈಗ ಆ ಲೆಕ್ಕಾಚಾರದಲ್ಲಿ ಮತ್ತೊಂದು ಸೀರಿಯಲ್ ಸೋತಿದ್ದು, ಈಗ ತಾನೇ ಕಿರುತೆರೆಯಲ್ಲಿ ಕಣ್ಬಿಡುತ್ತಿದ್ದ ಕಾದಂಬರಿ ಧಾರಾವಾಹಿ ವೈಂಡಪ್ ಆಗ್ತಿದೆ.
ಹಳೆ ಟೈಟಲ್ ಹಾಗೂ ಹೊಸ ಕತೆಯ ಮೂಲಕ ಬಂದಿತ್ತು ಕಾದಂಬರಿ.. ಈ ಧಾರಾವಾಹಿಯಲ್ಲಿ ನಾಯಕ ನಟಿಯ ಪಾತ್ರಕ್ಕೆ ಪವಿತ್ರ ನಾಯ್ಕ್ ಹಾಗೂ ನಾಯಕನ ಪಾತ್ರಕ್ಕೆ ಬ್ರಹ್ಮ ಗಂಟು ಖ್ಯಾತಿಯ ರಕ್ಷಿತ್ ಬಣ್ಣ ಹಚ್ಚಿದ್ದಾರೆ..
ಕಾದಂಬರಿಯ ತಂದೆ ಮಗಳು ಚಿಕ್ಕವಳಿದ್ದಾಗ ನಾನೂ ಹೊರದೇಶಕ್ಕೆ ಹೋಗಿ ದುಡ್ಡು ತರ್ತೀನಿ ಅಂತಾ ಮನೆ ಬಿಟ್ಟು ಹೋಗ್ತಾರೆ ಆದ್ರೇ ವರ್ಷಗಳು ಕಳೆದ್ರು ತಂದೆ ಬರೋದೆ ಇಲ್ಲಾ. ಇನ್ನು ಕಾದಂಬರಿಗೆ ಒಬ್ಬ ಅಣ್ಣಯಿರ್ತಾನೆ ಅವನು ಯಾವುದಕ್ಕು ತಲೆ ಕೆಡಿಸಿಕೊಳ್ಳದ ವ್ಯಕ್ತಿ.. ಹಾಗಾಗಿ ಮನೆಯ ಜವಬ್ದಾರಿ ಎಲ್ಲವು ಇವಳ ಮೇಲೆ ಇರುತ್ತದೆ..
ಇನ್ನೂ ನಾಯಕಿಗೆ ಮದುವೆಯಾಗಬೇಕೆಂಬ ಆಸೆ. ಆದ್ರೆ, ಅವಳ ಮದುವೆಯಾದ್ರೆ ಮನೆಯ ಜವಾಬ್ದಾರಿ ಯಾರು ನೋಡಿಕೊಳ್ತಾರೆ ಎಂಬುವುದು ಮನೆಯವರ ಚಿಂತೆ.. ಇದು ಈ ಧಾರವಾಹಿಯ ಮುಖ್ಯಾ ಎಳೆಯಾಗಿದೆ..
ಕನ್ನಡದ ಹಿರಿಯ ನಟ ನಟಿಯರಾದ, ನಾಗೆಂದ್ರ ಶಾ, ಮಾಲತಿ ಸರ್ದೇಶ್ಪಾಂಡೆ, ಸುರೇಶ್ ರೈ ಹೀಗೇ ಸಾಕಷ್ಟು ಕಲಾವಿದರು ವಿಭಿನ್ನ ರೋಲ್ನಲ್ಲಿ ಕಾಣಿಸಿಕೊಂಡಿರುವ ಕಾದಂಬರಿ ಸೀರಿಯಲ್ ವೈಂಡಪ್ ಆಗ್ತಾಯಿದೆ.