ಕನ್ನಡ ಎನೆ ಕುಣಿದಾಡುವುದೆನ್ನೆದೆ.. ಕನ್ನಡ ಎನೆ ಕಿವಿ ನಿಮಿರುವುದು.. ಇದು ಕುವೆಂಪು ಕನ್ನಡ ಭಾಷೆಯನ್ನ ವರ್ಣಿಸಿದ ರೀತಿ. ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.ಕ್ರಿ.ಶ 450 ನೇ ಇಸವಿಯಲ್ಲೇ ಕನ್ನಡದ ಮೊದಲ ಶಾಸನ ಹಲ್ಮಿಡಿ ಶಾಸನ ಪತ್ತೆಯಾಗಿತ್ತು. ಇಂಥ ಅಗಾಧ ಇತಿಹಾಸ ಹೊಂದಿರುವ ಮತ್ತು ವ್ಯಾಕರಣ ಬದ್ಧವಾದ ಕನ್ನಡ ಭಾಷೆಯನ್ನು ಗೂಗಲ್ ಅತಿ ಕುರೂಪಿ ಭಾಷೆಯೆಂದು ತೋರಿಸುತ್ತಿದೆ.

ಹೌದು ನೀವು ಗೂಗಲ್​ನಲ್ಲಿ UGLIEST LANGUAGE IN INDIA  (ಭಾರತದ ಅತ್ಯಂತ ಕುರೂಪಿ ಭಾಷೆ) ಯಾವುದೆಂದು ಹುಡುಕಿದ್ರೆ ಅದು ಕನ್ನಡ ಎಂದು ತೋರಿಸುತ್ತಿದೆ. ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ಅತ್ಯಂತ ಕುರೂಪಿ ಭಾಷೆಯನ್ನಾಗಿ ಕನ್ನಡವನ್ನ ತೋರಿಸುತ್ತಿರುವುದಕ್ಕೆ ಗೂಗಲ್ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಹಾಗಾದ್ರೆ ಇದನ್ನ ಸರಿಪಡಿಸೋದು ಹೇಗೆ..?

ಗೂಗಲ್​ನಲ್ಲಿ ಕನ್ನಡ ಭಾಷೆಯ ಬಗ್ಗೆ ಹೀಗೆ ತೋರಿಸುತ್ತಿರುವುದಕ್ಕೆ ಏನೇ ಕಾರಣಗಳಿರಬಹುದು. ಆದ್ರೆ ಒಂದು ಭಾಷೆಯನ್ನ ಕುರೂಪಿ ಭಾಷೆಯೆಂಬಂತೆ ತೋರಿಸುತ್ತಿರುವ ಗೂಗಲ್ ಇದನ್ನ ಸರಿಪಡಿಸಿಕೊಳ್ಳಲೇಬೇಕಿದೆ. ಹಾಗೆ ಸರಿಪಡಿಸಿಕೊಳ್ಳಬೇಕಂದ್ರೆ ಗೂಗಲ್​ನಲ್ಲಿ ಈ ವಿಚಾರವನ್ನ ರಿಪೋರ್ಟ್ ಮಾಡಬೇಕು.

ಗೂಗಲ್​ನಲ್ಲಿ ಬರುವ ರಿಸಲ್ಟ್​ನ ಕೆಳಭಾಗದಲ್ಲಿ ಫೀಡ್​ಬ್ಯಾಕ್​ ಆಯ್ಕೆ ಇದೆ. ಅದನ್ನ ಕ್ಲಿಕ್ ಮಾಡಿ ಅದರಲ್ಲಿ ಮೂರನೇ ಆಯ್ಕೆಯನ್ನ ಸೆಲೆಕ್ಟ್ ಮಾಡಬೇಕು. ಸೆಲೆಕ್ಟ್ ಮಾಡಿದ ನಂತರ ಕೆಳಗೆ ನಿಮ್ಮ ಅಭಿಪ್ರಾಯವನ್ನ ದಾಖಲಿಸಿ ಸೆಂಡ್​ ಮಾಡಿದ್ರೆ ಮುಗಿಯಿತು. ಬೇಕಿದ್ದರೆ ಫೀಡ್​ಬ್ಯಾಕ್ ಕೂಡ ಟೈಪ್​ ಮಾಡಬಹುದು.ಸಾವಿರಾರು ಸಂಖ್ಯೆಯಲ್ಲಿ ರಿಪೋರ್ಟ್ ಮಾಡಿದ್ರೆ ಗೂಗಲ್ ತನ್ನ ತಪ್ಪನ್ನ ಸರಿಪಡಿಸಿಕೊಳ್ಳಲಿದೆ.

 

The post ಸುಂದರ ಕನ್ನಡವನ್ನು ಅತಿ ಕೊಳಕು ಭಾಷೆ ಅಂತಿದೆ ಗೂಗಲ್; ಇದನ್ನ ಸರಿಪಡಿಸೋದು ಹೇಗೆ ಗೊತ್ತಾ?! appeared first on News First Kannada.

Source: newsfirstlive.com

Source link