ಬೆಂಗಳೂರು: ಸುಖಾಸುಮ್ಮನೆ ಓಡಾಡಿದ್ರೆ ಮುಲಾಜಿಲ್ಲದೇ ಅರೆಸ್ಟ್ ಮಾಡ್ತೀವಿ ಅಂತಾ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮತ್ತೊಮ್ಮೆ ವಾರ್ನ್ ಮಾಡಿದ್ದಾರೆ.

ಕೊರೊನಾ ಲಾಕ್ಡೌನ್ ಇದ್ದರೂ ನಿಯಮವನ್ನ ಪಾಲಿಸದೇ ಜನರು ನಗರದಲ್ಲಿ  ಸುಖಾಸುಮ್ಮನೇ ಓಡಾಡುತ್ತಿದ್ದಾರೆ. ಹೀಗಾಗಿ ಸ್ವತಃ ಕಮಿಷನರ್ ಅವರೇ ಇಂದು ಫೀಲ್ಡಿಗೆ ಇಳಿದಿದ್ದರು. ನಂತರ ಟ್ವೀಟ್ ಮಾಡಿ ಎಚ್ಚರಿಕೆಯನ್ನ ನೀಡಿರುವ ಕಮಿಷನರ್ ಎಲ್ಲಾ ಕಡೆ ನಾಕಾಬಂದಿಗಳನ್ನ ಹಾಕಲಾಗುತ್ತದೆ. ಇವತ್ತಿನಿಂದ ಲಾಕ್​ಡೌನ್ ಇರೋವರೆಗೂ ಫುಲ್ ಸ್ಟ್ರಿಟ್ ಆಗಿರುತ್ತದೆ.

ಸಾರ್ವಜನಿಕರು ಲಾಕ್​ಡೌನ್​ಗೆ ಸಹಕಾರ ಕೊಡಬೇಕು. ಲಾಕ್​ಡೌನ್ ನಿಯಮಗಳ ಜಾರಿಗೆ ಪೊಲೀಸರೊಂದಿಗೆ ಜನರು ಸಹಕರಿಸಬೇಕು. ಒಗ್ಗಟ್ಟಿನಿಂದ ಕೋವಿಡ್-19 ಪರಿಸ್ಥಿತಿಯನ್ನ ಗೆಲ್ಲೋಣ‌. ನಿಯಮ ಉಲ್ಲಂಘಿಸಿದ್ರೆ ವಾಹನಗಳ ಜಪ್ತಿ ಮಾಡಿ ಪ್ರಕರಣ ದಾಖಲಿಸುತ್ತೇವೆ‌. ಕಾನೂನಾತ್ಮಕವಾಗಿ ಕ್ರಮಕೈಗೊಳ್ಳಲು ಪೊಲೀಸ್ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.

ಇದನ್ನೂ ಓದಿ: ಮನೆಯಿಂದ ಹೊರ ಬಂದರೆ ಲಾಕ್​​- ಸ್ವತಃ ಫೀಲ್ಡಿಗಿಳಿದ ಕಮಿಷನರ್​​ ಕಮಲ್​ ಪಂಥ್

The post ಸುಖಾಸುಮ್ಮನೆ ಓಡಾಡಿದ್ರೆ ಮುಲಾಜಿಲ್ಲದೇ ಅರೆಸ್ಟ್ ಮಾಡ್ತೀವಿ- ಕಮಲ್ ಪಂತ್ ಎಚ್ಚರಿಕೆ appeared first on News First Kannada.

Source: newsfirstlive.com

Source link