ಸುಖಾ ಸುಮ್ಮನೆ ಶಾಸಕರ ಹೆಸ್ರಲ್ಲಿ ಓಡಾಡ್ತಿದ್ದ ಕಾರು ಪೊಲೀಸ್ರ ವಶಕ್ಕೆ

ಸುಖಾ ಸುಮ್ಮನೆ ಶಾಸಕರ ಹೆಸ್ರಲ್ಲಿ ಓಡಾಡ್ತಿದ್ದ ಕಾರು ಪೊಲೀಸ್ರ ವಶಕ್ಕೆ

ಬೆಂಗಳೂರು: ರಾಜ್ಯದಲ್ಲಿ ಲಾಕ್​ಡೌನ್ ಜಾರಿಯಲ್ಲಿದೆ. ಅನಗತ್ಯವಾಗಿ ಮನೆಯಿಂದ ಹೊರ ಬರಬಾರದು. ಬಂದ್ರೂ ಅದು 6 ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಹೊರಬರಬೇಕು ಅಂತ ಸರ್ಕಾರ ಕಟ್ಟು ನಿಟ್ಟಿನ ರೂಲ್ಸ್ ಅ​ನ್ನ ಜಾರಿಗೆ ತಂದಿದೆ. ಆದ್ರೆ, ಕೆಲವರು, ಶಾಸಕರ ಹೆಸರಲ್ಲಿ‌ ಸುಖಾಸುಮ್ಮನೆ ಓಡಾಟ ನಡೆಸ್ತಿದ್ದಾರೆ.

ಶಾಸಕರ ಪಾಸ್ ಪಡೆದು ಸುಖಾ ಸುಮ್ಮನೆ ಓಡಾಟ ನಡೆಸುತ್ತಿದ್ದ ಇನ್ನೊವಾ ಕಾರನ್ನ ವಶಕ್ಕೆ ಪಡೆದ ಹೈಗ್ರೌಂಡ್ಸ್ ಪೊಲೀಸರು, ಪಾಸ್​ನಲ್ಲಿರುವ ಕಾರ್​ ನಂಬರ್​ಗೂ ಓಡಾಟ ನಡೆಸುತ್ತಿರುವ ಕಾರ್ ನಂಬರ್ ಗೂ ಹೋಲಿಕೆಯೇ ಇಲ್ಲ ಅನ್ನೋದನ್ನ ಪತ್ತೆ ಹಚ್ಚಿದ್ದಾರೆ. ಸದ್ಯ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ರು ವಿಚಾರಣೆ ನಡೆಸುತ್ತಿದ್ದಾರೆ.

The post ಸುಖಾ ಸುಮ್ಮನೆ ಶಾಸಕರ ಹೆಸ್ರಲ್ಲಿ ಓಡಾಡ್ತಿದ್ದ ಕಾರು ಪೊಲೀಸ್ರ ವಶಕ್ಕೆ appeared first on News First Kannada.

Source: newsfirstlive.com

Source link