ಬೆಳಗಾವಿ: ಸಿ.ಡಿ ಬಯಲು ಪ್ರಕರಣದ ಬಳಿಕ ಸಚಿವ ಸ್ಥಾನ ಕಳೆದುಕೊಂಡಿರೋ ಶಾಸಕ ರಮೇಶ್ ಜಾರಕಿಹೊಳಿ ಮತ್ತೆ ಸಚಿವ ಸ್ಥಾನಕ್ಕೇರಲು ಕಸರತ್ತು ನಡೆಸುತ್ತಿದ್ದಾರೆ. ಹೀಗಾಗಿ ಇಂದು ಸುತ್ತೂರು ಮಠಕ್ಕೆ ರಮೇಶ್ ಜಾರಕಿಹೊಳಿ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.

ಈಗಾಗಲೇ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಜೊತೆ ಮಾತುಕತೆ ನಡೆಸಿ ತಮ್ಮ ಸಚಿವ ಸ್ಥಾನದ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗ್ತಿದೆ. ಈ ನಿಟ್ಟಿನಲ್ಲಿ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಬೆಳಗಾವಿಯಿಂದ ವಿಶೇಷ ವಿಮಾನದ ಮೂಲಕ ಸುತ್ತೂರು ಮಠಕ್ಕೆ ಆಗಮಿಸಲಿದ್ದಾರೆ. ರಮೇಶ್ ಜಾರಕಿಹೋಳಿಗೆ ಸಹೋದರ ಲಖನ್ ಜಾರಕಿಹೊಳಿ, ಅಳಿಯ ಅಂಬಿರಾವ್ ಪಾಟೀಲ್ ಸಾಥ್ ನೀಡಲಿದ್ದಾರೆ.

The post ಸುತ್ತೂರು ಮಠಕ್ಕೆ ಇಂದು ರಮೇಶ್ ಜಾರಕಿಹೊಳಿ ಭೇಟಿ.. ಸಚಿವ ಸ್ಥಾನಕ್ಕೇರಲು ಕಸರತ್ತು? appeared first on News First Kannada.

Source: newsfirstlive.com

Source link