ಮೈಸೂರು: ಇಲ್ಲಿನ ಸುತ್ತೂರು ಶಾಖಾ ಮಠಕ್ಕೆ ಶಾಸಕ ಅರವಿಂದ್ ಬೆಲ್ಲದ್ ಭೇಟಿ ನೀಡಿ ಡಾ.ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ಆಶೀರ್ವಾದ ಪಡೆದು ಕೊಂಡರು.

ಸುತ್ತೂರು ಮಠಕ್ಕೆ ಅರವಿಂದ್ ಬೆಲ್ಲದ್ ಭೇಟಿ ಸಾಕಷ್ಟು ಕುತೂಹಲ ಸೃಷ್ಟಿಸಿದೆ. ಯಾಕಂದ್ರೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕೂಗು ಇನ್ನೂ ತಣ್ಣಗೆ ಆಗಿಲ್ಲ. ಸಿಎಂ ಬದಲಾವಣೆ ಚರ್ಚೆ ಬೆನ್ನಲ್ಲೇ ಸುತ್ತೂರು ಮಠಕ್ಕೆ ಬಿಜೆಪಿ ನಾಯಕರ ಭೇಟಿ ಮುಂದುವರಿದೆ.

ಇದು ಕೇವಲ ಔಪಚಾರಿಕ ಭೇಟಿಯಾಗಿದೆ. ಯಾವುದೇ ರಾಜಕೀಯ ಚರ್ಚೆ ಇಲ್ಲ. ಶ್ರೀಗಳ ಆಶೀರ್ವಾದ ಪಡೆದಿದ್ದೇನೆ. ಮಠದ ಆವರಣದಲ್ಲಿ ರಾಜಕಾರಣ ಮಾತನಾಡುವುದಿಲ್ಲ.

ಅರವಿಂದ್ ಬೆಲ್ಲದ್

ಇತ್ತೀಚೆಗೆ ಸಚಿವ ಸಿಪಿ ಯೋಗೇಶ್ವರ್​ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದುಕೊಂಡಿದ್ದರು. ಅದಕ್ಕೂ ಮೊದಲು ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿಟಿ ರವಿ ಕೂಡ ಶ್ರೀಗಳನ್ನ ಭೇಟಿಯಾಗಿದ್ದರು.

 

The post ಸುತ್ತೂರು ಮಠಕ್ಕೆ ಮುಂದುವರಿದ ಬಿಜೆಪಿ ನಾಯಕರ ಭೇಟಿ.. ಈಗ ಅರವಿಂದ್ ಬೆಲ್ಲದ್ ಸರದಿ.. appeared first on News First Kannada.

Source: newsfirstlive.com

Source link