ಸುದೀಪ್​​ ಫ್ಯಾನ್ಸ್​ಗೆ ಗುಡ್​​ ನ್ಯೂಸ್​​; ನಾಳೆ ವಿಕ್ರಾಂತ್​ ರೋಣ ರಿಲೀಸ್​ ಡೇಟ್​​ ಅನೌನ್ಸ್​


ಸೌಥ್ ಸಿನಿಮಾ ಲೋಕದಿಂದ ಆಲ್ ಮೋಸ್ಟ್ ಆಲ್ ಎಲ್ಲಾ ಪ್ಯಾನ್ ಇಂಡಿಯಾ ಸಿನಿಮಾಗಳ ರಿಲೀಸ್ ಡೇಟ್ ಕನ್ಫರ್ಮ್ ಆಗಿದೆ.. ಆದ್ರೆ ಬಾದ್​​ಶಾ ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾದ ರಿಲೀಸ್ ಡೇಟ್ ಇನ್ನೂ ಕೂಡ ಕನ್ಫರ್ಮ್ ಆಗಿಲ್ಲ.. ಇನ್ನು ಯಾಕೆ ರಿಲೀಸ್ ಡೇಟ್ ಅನ್ನ ವಿಕ್ರಾಂತ್ ರೋಣ ತಂಡ ಅನೌನ್ಸ್ ಮಾಡಿಲ್ಲ.. ? ಯಾವಾಗ ಕಿಚ್ಚನ ವಿ.ಆರ್ ಸಿನಿಮಾ ತೆರೆಕಾಣಲಿದೆ?

ಕಿಚ್ಚ ಸುದೀಪ್ ಅವರ ಹತ್ತು ಸಿನಿಮಾಗಳು ಒಟ್ಟಿಗೆ ರಿಲೀಸ್ ಆದ್ರೆ ಎಷ್ಟು ಕುತೂಹಲವಿರುತ್ತೋ ಅಷ್ಟು ಕುತೂಹಲ ವಿಕ್ರಾಂತ್ ರೋಣ ಸಿನಿಮಾದ ಮೇಲಿದೆ.. ಸೌಥ್ ಸಿನಿಮಾ ಲೋಕದಿಂದ ಅದ್ರಲೂ ಕನ್ನಡದಿಂದ ವಿಶ್ವಮಟ್ಟದಲ್ಲಿ ಸ್ಪರ್ಧೆ ಮಾಡಲು ಹೊರಟಿರುವ ಸಿನಿಮಾ ವಿಕ್ರಾಂತ್ ರೋಣ. ಈಗಾಗಲೇ ಪ್ಯಾನ್ ಇಂಡಿಯಾ ಲೆವಲ್​​​ನಲ್ಲಿ ತೆರೆಗೆ ಬರೋ ಸಿನಿಮಾಗಳು ತಾವು ಬರೋ ದಿನಾಂಕಕ್ಕೆ ಕರ್ಚಿಫ್ ಹಾಕಿ ಈಗಾಗಲೇ ರಿಸರ್ವ್ ಮಾಡಿಕೊಂಡಿವೆ. ಆದ್ರೆ ವಿಕ್ರಾಂತ್ ರೋಣ ಮಾತ್ರ ತಾವು ಬರೋ ದಿನಾಂಕವನ್ನ ಹೇಳಿಲ್ಲ.

ಈ ವರ್ಷದ ಆಗಸ್ಟ್ ತಿಂಗಳಲ್ಲೇ ವಿಕ್ರಾಂತ್ ರೋಣ ಬರಬೇಕಿತ್ತು.. ಆಲ್ ಮೋಸ್ಟ್ ಆಲ್ ವಿಕ್ರಾಂತ್ ರೋಣ ಚಿತ್ರದ ಕೆಲಸ ಕಾರ್ಯಗಳು ಮುಕ್ತಾಯವಾಗಿವೆ.. ಇನ್ನೊಂದು 10 ಪರ್ಸೆಂಟ್ ಸಿಜಿ ವರ್ಕ್ ಪರ್ಫೆಕ್ಟ್ ಆಗಿ ಅದಕ್ಕೆ ತಕ್ಕನಾದ ಮ್ಯೂಸಿಕ್​ ಅನ್ನ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮಾಡಿಬಿಟ್ರೆ ಮುಗಿತು. ಹಿಂಗಿದ್ರು ವಿಕ್ರಾಂತ್ ರೋಣ ಸಿನಿಮಾ ತಂಡ ತಾವು ಬರೋ ದಿನಾಂಕವನ್ನ ನಿಗದಿ ಮಾಡಿರಲಿಲ್ಲ. ಆದ್ರೆ ನಾಳೆ ವಿಕ್ರಾಂತ್ ರೋಣ ಸಿನಿಮಾದ ರಿಲೀಸ್ ಡೇಟ್ ಅಧಿಕೃತವಾಗಲಿದೆ.

ಯಾವ ದಿನಕ್ಕೆ ಕಿಚ್ಚನ ವಿಕ್ರಾಂತ್ ರೋಣ ಸ್ಕೆಚ್?
ಮುಂದಿನ ವರ್ಷದ ಯಾವ ತಿಂಗಳು VR ರಿಲೀಸ್?

ಅನುಪ್ ಭಂಡಾರಿ ನಿರ್ದೇಶನದ ಜಾಕ್ ಮಂಜು ನಿರ್ಮಾಣದ ಬಹುನಿರೀಕ್ಷಿತ ಬಿಗ್ ಬಜೇಟ್ ಸಿನಿಮಾ ವಿಕ್ರಾಂತ್ ರೋಣ.. 3D ಟೆಕ್ನಾಲಜಿಯಲ್ಲಿ ವಿಕ್ರಾಂತ್ ರೋಣ ಸಿನಿಮಾ ಮೂಡಿಬರುತ್ತಿದೆ.ಕಿಚ್ಚ ಸುದೀಪ್ ಜೊತೆಗೆ ನಿರೂಪ್ ಭಂಡಾರಿ , ನೀತಾ ಅಶೋಕ್ ಹಾಗೂ ಜಾಕ್​ಲ್ವೀನ್ ಫರ್ನಾಂಡಿಸ್ ಕಾಣಿಸಿಕೊಂಡಿದ್ದಾರೆ.

ಪೋಸ್ಟರ್ , ಮೇಕಿಂಗ್ , ಟೀಸರ್ ಇತ್ಯಾದಿಗಳಿಂದ ಗಗನ ಮಟ್ಟದಲ್ಲಿ ನಿರೀಕ್ಷೆಯನ್ನ ಸೃಷ್ಟಿಸಿರುವ ವಿಕ್ರಾಂತ್ ರೋಣ ಫಿಲ್ಮ್ ಟೀಮ್ ಮುಂದಿನ ವರ್ಷ ರಿಲೀಸ್ ಪ್ಲಾನ್ ಮಾಡಿಕೊಂಡಿದೆ. ಮುಂದಿನ ವರ್ಷ ಅಂದ್ರೆ ಯಾವ ತಿಂಗಳಲ್ಲಿ ವಿಕ್ರಾಂತ್ ರೋಣ ಸಿನಿಮಾ ರಿಲೀಸು ? ಅನ್ನೊ ಪ್ರಶ್ನೆಗೆ ನಮ್ಮಲ್ಲಿದೆ ಉತ್ತರ. ಈಗಾಗಲೇ ದೊಡ್ಡ ದೊಡ್ಡ ಸಿನಿಮಾಗಳು ಮುಂದಿನ ವರ್ಷ ರಿಲೀಸ್ ಡೇಟ್ ಅನ್ನ ಕನ್ಫರ್ಮ್ ಮಾಡಿರೋ ಕಾರಣ ಯಾರಿಗೂ ತೊಂದರೆಯಾಗದಂತೆ ದೊಡ್ಡ ಮಟ್ಟದಲ್ಲಿ ಸಿನಿಮಾ ರಿಲೀಸ್ ಮಾಡಬೇಕು ಅನ್ನೋ ಪ್ಲಾನ್​ನಲ್ಲಿ ಚಿತ್ರತಂಡವಿದೆ. ಮುಂದಿನ ವರ್ಷದ 2022ರ ಫೆಬ್ರವರಿ ತಿಂಗಳು ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗೋ ಸಾಧ್ಯತೆ ಇದೆ. ಈ ಬಗ್ಗೆ ನಾಳೆ ಬೆಳಗ್ಗೆ 11.05ನಿಮಿಷಕ್ಕೆ ಅಧಿಕೃತ ಮಾಹಿತಿ ಹೊರಬೀಳಲಿದೆ..

News First Live Kannada


Leave a Reply

Your email address will not be published. Required fields are marked *