ನಟ ಕಿಚ್ಚ ಸುದೀಪ್‌ ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದು, ವೈದ್ಯರ ಸಲಹೆಯಂತೆ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಹೀಗಾಗಿ ಈ ವಾರಾಂತ್ಯದ ಕಿರುತೆರೆ ಕಾರ್ಯಕ್ರಮದಲ್ಲೂ ಸುದೀಪ್‌ ಕಾಣಿಸಿಕೊಂಡಿಲ್ಲ.

ಮತ್ತೂಂದೆಡೆ ಅನಾರೋಗ್ಯದಿಂದ ಬೇಗ ಗುಣಮುಖರಾಗಲಿ ಎಂದು ಸುದೀಪ್‌ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಇನ್ನು ಕನ್ನಡಿಗ ಅಭಿಮಾನಿಗಳು ಮಾತ್ರವಲ್ಲದೆ, ಬೇರೆ ದೇಶಗಳಲ್ಲಿರುವ ಸುದೀಪ್‌ ಅಭಿಮಾನಿಗಳು ಕೂಡ ಕಿಚ್ಚನ ಆರೋಗ್ಯ ಸುಧಾರಿಸಲಿ ಎಂದು ಹಾರೈಸುತ್ತಿದ್ದಾರೆ.

ಇದನ್ನೂ ಓದಿ:ಶಿವರಾಜ್ ಕುಮಾರ್ ಚಿತ್ರ ದಲ್ಲಿ ಗಾಯಕಿ ಮಂಗ್ಲಿ ನಟನೆ

ಇದೇ ವೇಳೆ, ಜಪಾನ್‌ ನಲ್ಲಿರುವ ಸುದೀಪ್‌ ಅವರ ಮಹಿಳಾ ಅಭಿಮಾನಿಯೊಬ್ಬರು, ಸುದೀಪ್‌ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ, ವಿಡಿಯೋ ವೊಂದನ್ನು ಮಾಡಿ, ಬೇಗ ಗುಣಮುಖರಾಗುವಂತೆ ಹಾರೈಸಿದ್ದಾರೆ.

“ನಮಸ್ಕಾರ ಸುದೀಪ್‌ ಸರ್‌, ಈಗ ಹೇಗಿದ್ದೀರಾ? ನೀವು ಬೇಗ ಗುಣಮುಖರಾಗಲಿ ಎಂದು ನಾನು ಪ್ರಾರ್ಥಿಸುತ್ತಿದ್ದೇನೆ. ದಯವಿಟ್ಟು ಹುಷಾರಾಗಿ. ಜಪಾನ್‌ನಿಂದ ಈ ಪ್ರೀತಿಯ ಸಂದೇಶ ನಿಮಗಾಗಿ’ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಸದ್ಯ ಜಪಾನ್‌ ಮಹಿಳಾ ಅಭಿಮಾನಿಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಜೋರಾಗಿ ಹರಿದಾಡುತ್ತಿದೆ.

ಸಿನೆಮಾ – Udayavani – ಉದಯವಾಣಿ
Read More

Leave a comment