ಸುದೀಪ್ ಬೈದರೂ ಬದಲಾಗಿಲ್ಲ ಸೋನು ಶ್ರೀನಿವಾಸ್ ಗೌಡ ನಡವಳಿಕೆ; ಮತ್ತೆ ‘ಥೂ’ ಎಂದು ಬೈದ ವೈರಲ್ ಹುಡುಗಿ | Sonu Srinivas Gowda used word Thoo even after kichcha sudeep warning


‘ರಾಕೇಶ್ ನಿಮಗೆ ಒಳ್ಳೆಯದಾಗಲಿ ಎಂದು ಆ ರೀತಿ ಮಾಡಿದರು. ರಾಕೇಶ್ ರೀತಿಯ ಗೆಳೆಯ ಯಾರಿಗೂ ಸಿಗಲ್ಲ. ಹಾಗಿದ್ದರೂ ಕೂಡ ಅವರಿಗೆ ಥೂ ಎಂಬ ಬೈಗುಳ’ ಎಂದು ಸೋನುಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು. ಆದರೂ ಸೋನು ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಂಡಿಲ್ಲ.

ಸುದೀಪ್ ಬೈದರೂ ಬದಲಾಗಿಲ್ಲ ಸೋನು ಶ್ರೀನಿವಾಸ್ ಗೌಡ ನಡವಳಿಕೆ; ಮತ್ತೆ ‘ಥೂ’ ಎಂದು ಬೈದ ವೈರಲ್ ಹುಡುಗಿ

ಸೋನು-ಸುದೀಪ್

ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರು ಬಿಗ್ ಬಾಸ್​ನಲ್ಲಿ ಹೈಲೈಟ್ ಆಗುತ್ತಿದ್ದಾರೆ. ಇದರ ಜತೆಗೆ ಅವರು ಕೆಲ ನೆಗೆಟಿವ್ ವಿಚಾರಕ್ಕೂ ಟ್ರೋಲ್ ಆಗುತ್ತಿದ್ದಾರೆ. ವಾರಾಂತ್ಯದ ವೇಳೆ ಸುದೀಪ್ ಅವರಿಂದ ಅನೇಕ ಬಾರಿ ಸೋನು ಶ್ರೀನಿವಾಸ್​ ಗೌಡ ಬೈಸಿಕೊಂಡಿದ್ದಾರೆ. ಆದರೂ ಅವರು ತಮ್ಮ ಹಳೆಯ ವರ್ತನೆಯನ್ನು ಮುಂದುವರಿಸಿದ್ದಾರೆ. ಥೂ.. ಎಂದು ಬೈದುಕೊಂಡು ಓಡಾಡುತ್ತಿದ್ದಾರೆ. ಈ ಬಗ್ಗೆ ರಾಕೇಶ್ (Rakesh Adiga) ಅವರು ಸೋನುಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸೋನು ಶ್ರೀನಿವಾಸ್ ಗೌಡ ಅವರಿಗೆ ಕಳಪೆ ಪಟ್ಟ ನೀಡಿದ್ದರು ರಾಕೇಶ್. ಸೋನುಗೆ ಒಳ್ಳೆಯದಾಗಲಿ ಅನ್ನೋದು ರಾಕೇಶ್ ಉದ್ದೇಶ ಆಗಿತ್ತು. ಆದರೆ, ಇದನ್ನು ಅವರು ಬೇರೆ ರೀತಿಯಲ್ಲಿ ಅರ್ಥೈಸಿಕೊಂಡರು. ‘ನಮ್ಮ ಜತೆಯೇ ಇದ್ದುಕೊಂಡು ನಮಗೆ ಮೋಸ ಮಾಡುತ್ತಾರೆ. ಇಷ್ಟೆಲ್ಲ ಕ್ಲೋಸ್ ಇದ್ದವರೇ ಕಳಪೆ ಪಟ್ಟ ನೀಡುತ್ತಾರೆ ಥೂ’ ಎಂದು ಜೈಲಿನಲ್ಲಿ ಕುಳಿತುಕೊಂಡು ಸೋನು ಶ್ರೀನಿವಾಸ್ ಗೌಡ ಬೈದಿದ್ದರು. ಇದನ್ನು ಸುದೀಪ್ ವೀಕೆಂಡ್​ನಲ್ಲಿ ಚರ್ಚೆ ಮಾಡಿದ್ದರು.

‘ರಾಕೇಶ್ ನಿಮಗೆ ಒಳ್ಳೆಯದಾಗಲಿ ಎಂದು ಆ ರೀತಿ ಮಾಡಿದರು. ರಾಕೇಶ್ ರೀತಿಯ ಗೆಳೆಯ ಯಾರಿಗೂ ಸಿಗಲ್ಲ. ಹಾಗಿದ್ದರೂ ಕೂಡ ಅವರಿಗೆ ಥೂ ಎಂಬ ಬೈಗುಳ’ ಎಂದು ಸೋನುಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು. ಆದರೂ ಸೋನು ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಂಡಿಲ್ಲ. ಮತ್ತದೇ ಚಾಳಿ ಮುಂದುವರಿಸಿದ್ದಾರೆ.

TV9 Kannada


Leave a Reply

Your email address will not be published.