ಬಿಗ್​​ಬಾಸ್​​ ಸ್ಪರ್ಧಿ, ನಟಿ ಸೋನು ಪಾಟೀಲ್​ ತಮಗೆ ಕಿಚ್ಚ ಸುದೀಪ್ ಅವರು ಮಾಡಿದ ಸಹಾಯವನ್ನ ನೆನೆದಿದ್ದಾರೆ.

ವಿಡಿಯೋ ಮೂಲಕ ತಮ್ಮ ನೋವು ಹೇಳಿಕೊಂಡಿರೋ ನಟಿ ಸೋನು, ನಾನು ಕಷ್ಟದಲ್ಲಿದ್ದಾಗ ಕಂಡಕಂಡವ್ರ ಬಳಿ ಸಹಾಯ ಕೇಳಿದೆ. ನನ್ನ ತಾಯಿಯ ಚಿಕಿತ್ಸೆಗೆ ಹಲವರ ಬಳಿ ಸಹಾಯಕ್ಕಾಗಿ ಅಂಗಲಾಚಿದೆ. ಎಲ್ಲರೂ ಸಹಾಯ ಮಾಡುವ ಮಾತುಗಳನ್ನಾಡಿದರೇ ವಿನಃ ಯಾರೂ ಸಹಾಯ ಮಾಡಲಿಲ್ಲ ಎಂದಿದ್ದಾರೆ.

ಕೊನೆಗೆ ಸುದೀಪ್ ಸರ್ ಬಳಿ ನನ್ನ ನೋವು ಹೇಳಿಕೊಂಡೆ. ಒಂದು ಕ್ಷಣವೂ ಯೋಚಿಸದೇ ಸುದೀಪ್ ಸರ್ ನನಗೆ ಸಹಾಯ ಮಾಡಿದ್ದಾರೆ. ನನ್ನ ತಾಯಿಯ ಚಿಕಿತ್ಸೆಗೆ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಅಂತಾ ಹೇಳಿ ಸೋನು ಕಣ್ಣೀರಿಟ್ಟಿದ್ದಾರೆ.

The post ‘ಸುದೀಪ್ ಸರ್ ನನ್ನ ತಾಯಿ ಚಿಕಿತ್ಸೆಗೆ ಲಕ್ಷ ಲಕ್ಷ ಖರ್ಚು ಮಾಡಿದ್ದಾರೆ’ appeared first on News First Kannada.

Source: newsfirstlive.com

Source link