ಸುದೀಪ್​ ಹುಟ್ಟುಹಬ್ಬಕ್ಕೆ ಸರ್ಪ್ರೈಸ್​ ನೀಡಿದ ಬಿಗ್​ ಬಾಸ್​ ಒಟಿಟಿ ಸ್ಪರ್ಧಿಗಳು; ಪ್ರೀತಿಗೆ ಕರಗಿದ ಕಿಚ್ಚ | Bigg Boss OTT Kannada contestants wish Kichcha Sudeep happy birthday


Kichcha Sudeep Birthday: ಕಿಚ್ಚ ಸುದೀಪ್​ ಅವರ ಪಾಲಿಗೆ ‘ಬಿಗ್​ ಬಾಸ್​’ ವೇದಿಕೆ ತುಂಬ ಸ್ಪೆಷಲ್​. ಆ ವಿಶೇಷ ವೇದಿಕೆಯಲ್ಲಿ ಅವರಿಗೆ ಬರ್ತ್​ಡೇ ಶುಭಾಶಯ ತಿಳಿಸಲಾಗಿದೆ.

ಸುದೀಪ್​ ಹುಟ್ಟುಹಬ್ಬಕ್ಕೆ ಸರ್ಪ್ರೈಸ್​ ನೀಡಿದ ಬಿಗ್​ ಬಾಸ್​ ಒಟಿಟಿ ಸ್ಪರ್ಧಿಗಳು; ಪ್ರೀತಿಗೆ ಕರಗಿದ ಕಿಚ್ಚ

ಬಿಗ್ ಬಾಸ್ ಕನ್ನಡ ಒಟಿಟಿ

ನಟ ಕಿಚ್ಚ ಸುದೀಪ್​ (Kichcha Sudeep) ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಆ ದೊಡ್ಡ ಅಭಿಮಾನಿ ಬಳಗಕ್ಕೆ ಸೆಪ್ಟೆಂಬರ್​ 2ರ ದಿನಾಂಕ ಎಂದರೆ ಹಬ್ಬಕ್ಕೆ ಸಮ. ಯಾಕೆಂದರೆ ಅಂದು ಸುದೀಪ್​ ಜನ್ಮದಿನ (Kichcha Sudeep Birthday). ಹೌದು, ಈ ದಿನವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದ್ದಾರೆ. ಬಿಗ್​ ಬಾಸ್​ ಮನೆಯಲ್ಲೂ ಈ ಸಡಗರದ ವಾತಾವರಣ ನಿರ್ಮಾಣ ಆಗಿದೆ. ಬರ್ತ್​ಡೇ ಮರುದಿನವೇ ಸುದೀಪ್​ ಅವರು ‘ಬಿಗ್​ ಬಾಸ್​ ಕನ್ನಡ ಒಟಿಟಿ’ (Bigg Boss OTT Kannada) ವೀಕೆಂಡ್​ ಎಪಿಸೋಡ್​ ನಡೆಸಿಕೊಟ್ಟಿದ್ದಾರೆ. ಈ ವೇಳೆ ಎಲ್ಲ ಸ್ಪರ್ಧಿಗಳು ಸುದೀಪ್​ಗೆ ಸ್ಪೆಷಲ್​ ಆಗಿ ವಿಶ್​ ಮಾಡಿದ್ದಾರೆ. ಸ್ಪರ್ಧಿಗಳು ನೀಡಿದ ಈ ಸರ್ಪ್ರೈಸ್​ ನೋಡಿ ಕಿಚ್ಚನಿಗೆ ಖುಷಿ ಆಗಿದೆ. ಈ ಸಂಭ್ರಮದ ಮೂಲಕವೇ ವೀಕೆಂಡ್​ ಸಂಚಿಕೆ ಆರಂಭ ಆಗಿದೆ.

ಕನ್ನಡ ಬಿಗ್​ ಬಾಸ್​ ಮೊದಲ ಸೀಸನ್​ನಿಂದಲೂ ಸುದೀಪ್​ ಅವರೇ ನಿರೂಪಣೆ ಮಾಡುತ್ತ ಬಂದಿದ್ದಾರೆ. ಈ ಶೋನಲ್ಲಿ ವಿವಾದಾತ್ಮಕ ಸ್ಪರ್ಧಿಗಳು ಕೂಡ ಭಾಗವಹಿಸುತ್ತಾರೆ. ಎಂಥದ್ದೇ ಪರಿಸ್ಥಿತಿ ಬಂದರೂ ಸುದೀಪ್​ ಅವರು ಚೆನ್ನಾಗಿ ನಿಭಾಯಿಸುತ್ತಾರೆ. ಆ ಕಾರಣಕ್ಕೆ ಅವರನ್ನು ಪ್ರೇಕ್ಷಕರು ಇಷ್ಟಪಡುತ್ತಾರೆ. ಇನ್ನು, ಬಿಗ್​ ಬಾಸ್​ ಶೋ ಬಗ್ಗೆ ಸುದೀಪ್​ ಅವರಿಗೆ ವಿಶೇಷ ಪ್ರೀತಿ ಇದೆ. ತುಂಬ ಕಾಳಜಿಯಿಂದ ಅವರು ಈ ಶೋ ನಡೆಸಿಕೊಡುತ್ತಾರೆ.

ಬಿಗ್​ ಬಾಸ್​ ಆಟ ಮುಗಿದ ಬಳಿಕವೂ ಸ್ಪರ್ಧಿಗಳ ಜೊತೆ ಸುದೀಪ್​ ಸ್ನೇಹ ಮುಂದುವರಿಯುತ್ತದೆ. ಮಾಜಿ ಸ್ಪರ್ಧಿಗಳ ಸಿನಿಮಾ ಕರಿಯರ್​ಗೆ ಅವರು ಸದಾ ಬೆಂಬಲ ನೀಡುತ್ತಾರೆ. ಈ ಎಲ್ಲ ಕಾರಣಗಳಿಂದಾಗಿ ಸುದೀಪ್ ಅವರಿಗೆ ಬಿಗ್​ ಬಾಸ್​ ಶೋ ತುಂಬ ಸ್ಪೆಷಲ್​. ಅಂಥ ವೇದಿಕೆಯಿಂದ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹರಿದುಬಂದಿದೆ. ಎಲ್ಲರೂ ಎದ್ದು ನಿಂತು ಕಿಚ್ಚನಿಗೆ ವಿಶ್​ ಮಾಡಿದ್ದಾರೆ. ಎಲ್ಲರ ಪ್ರೀತಿಗೆ ಸುದೀಪ್​ ತಲೆ ಬಾಗಿದ್ದಾರೆ.

ಇಷ್ಟು ವರ್ಷಗಳ ಕಾಲ ಟಿವಿಯಲ್ಲಿ ‘ಬಿಗ್​ ಬಾಸ್​ ಕನ್ನಡ’ ಶೋ ನಡೆದುಕೊಂಡು ಬಂದಿತ್ತು. ಒಟ್ಟು 8 ಸೀಸನ್​ಗಳನ್ನು ಯಶಸ್ವಿಯಾಗಿ ಪೂರೈಸಲಾಗಿದೆ. 9ನೇ ಸೀಸನ್​ ಆರಂಭಕ್ಕೂ ಮುನ್ನ ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಮೊದಲ ಸೀಸನ್​ ಶುರುವಾಗಿದೆ. ಇದು ಕನ್ನಡದ ಪ್ರೇಕ್ಷಕರಿಗೆ ಹೊಸದು. ವೂಟ್​ ಸೆಲೆಕ್ಟ್​ ಮೂಲಕ ಈ ಶೋ ಪ್ರಸಾರ ಆಗುತ್ತಿದ್ದು, ಅಂತಿಮ ಘಟ್ಟ ತಲುಪುತ್ತಿದೆ. ಆರು ವಾರದ ಈ ಶೋನಲ್ಲಿ ಭಾಗವಹಿಸಿದ ಕೆಲವರಿಗೆ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ಕ್ಕೆ ಎಂಟ್ರಿ ಸಿಗಲಿದೆ.

TV9 Kannada


Leave a Reply

Your email address will not be published.