ನವ ದೆಹಲಿ : ಸಾಮಾಜಿಕ ಜಾಲತಾಣಗಳ ಬಗ್ಗೆ ಸಾಮಾಜಿಕ ವಲಯದಲ್ಲಿ ಹಲವು ಆಯಾಮಗಳಲ್ಲಿ ಚರ್ಚೆಯಾಗುತ್ತಿದೆ. ಗೌಪ್ಯತೆಯ ವಿಚಾರಕ್ಕೆ ಸಂಬಂಧ ಪಟ್ಟಂತೆ ಹಾಗೂ ಸುಳ್ಳು ಸುದ್ದಿ ಹರಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಸಾಮಾಜಿಕ ಜಾಲತಾಣಗಳು ಸುಪ್ರೀಂ ಕೋರ್ಟ್ ಅಂಗಳದ ತನಕವೂ ಕೂಡ ತಲುಪಿವೆ.

ಇಂತಹ ಸಂದರ್ಭದಲ್ಲಿ, ಸಾಮಾಜಿಕ ಜಾಲತಾಣಗಳ  ಸಾಲಿಗೆ ಮತ್ತೊಂದು ಚಾಟ್ ಪ್ಲ್ಯಾಟ್ ಫಾರ್ಮ್ ಸೇರ್ಪಡೆಗೊಳ್ಳುತ್ತಿದೆ. ಮತ್ತು ಇದು ಫೇಸ್ ಬುಕ್ ಹಾಗೂ ಟ್ವೀಟರ್ ಗೆ ಟಕ್ಕರ್ ಹೊಡೆಯುತ್ತಿದೆ ಎಂಬ ವಿಚಾರವೂ ಕೂಡ ಹರಿದಾಡುತ್ತಿದೆ.

ಓದಿ : ಲಾಲ್ ಸಿಂಗ್ ಗೆ ಟಾಟಾ ಹೇಳಿದ ಸೇತುಪತಿ : ಅಮೀರ್ ಚಿತ್ರದಿಂದ ಹೊರ ಬಂದಿದ್ಯಾಕೆ ವಿಜಯ್ ?

ಹೌದು, ಸಿಲಿಕಾನ್ ವ್ಯಾಲಿ ಉದ್ಯಮಿ ಪಾಲ್ ಡೆವಿಸನ್ ಹಾಗೂ ಗೂಗಲ್ ಸಂಸ್ಥೆಯ ಮಾಜಿ ಉದ್ಯೋಗಿ ರೋಹನ್ ಸೇತ್ ಜೊತೆ ಸೇರಿ ಅಭಿವೃದ್ಧಿ ಪಡಿಸಿದ ಆಡಿಯೋ ಚಾಟ್ ಅಪ್ಲಿಕೇಶನ್ “ಕ್ಲಬ್ ಹೌಸ್ ಆ್ಯಪ್” ಈಗ ಭಾರಿ ಸುದ್ದಿ ಮಾಡುತ್ತಿದೆ.

2020 ರ ಏಪ್ರಿಲ್ ನಲ್ಲಿಯೇ ಬಿಡುಗಡೆಗೊಂಡ ಈ ಅಪ್ಲಿಕೇಶನ್ ಆಗ ಅಷ್ಟೊಂದು ಬೆಳಕಿಗೆ ಬಂದಿರಲಿಲ್ಲ. ಟೆಸ್ಲಾ ಮಾಲಿಕ, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೊನ್ ಮಸ್ಕ್ ಇತ್ತೀಚೆಗೆ ಬಳಸುವುದಕ್ಕೆ ಪ್ರಾರಂಭಿಸಿದ ನಂತರ ಇದು ಈಗ ಜನರ ಚಿತ್ತವನ್ನು ಸೆಳೆಯುತ್ತಿದೆ. ಗಣನೀಯ ಪ್ರಮಾಣದಲ್ಲಿ ಈ ಆ್ಯಪ್ ಪ್ಲೇ ಸ್ಟೋರ್ ನಲ್ಲಿ ಡೌನ್ಲೋಡ್ ಆಗುತ್ತಿದೆ.

ಓದಿ : ಸರ್ಕಾರದ ಮುಂದೆ ಲವ್ ಜಿಹಾದ್ ನಿಷೇಧದ ಗುರಿ: ನಳಿನ್ ಕುಮಾರ್ ಕಟೀಲ್

ಏನಿದು ಕ್ಲಬ್ ಹೌಸ್ (Clubhouse app) ..?

ಇದೋಂದು ಸಾಮಾಜಿಕ ಜಾಲತಾಣ. ಆದರೇ, ಇದು ಇತರೆ ಸಾಮಾಜಿಕ ಜಾಲತಾಣಗಳಿಗಿಂತ ಭಿನ್ನವಾಗಿದೆ. ಕೇವಲ ವಾಯ್ಸ್ ಮೂಲಕ ಚಾಟ್ ಮಾಡುವ ಆ್ಯಪ್ ಇದಾಗಿದ್ದು, ವೀಡಿಯೊ, ಟೆಕ್ಸ್ಟ ಗಳ ಪೋಸ್ಟ್ ಈ ಆ್ಯಪ್ ನಲ್ಲಿ ಮಾಡಲು ಸಾಧ್ಯವಿಲ್ಲ.

ಈ ಆ್ಯಪ್ ನ್ನು ಡೌನ್ ಲೋಡ್ ಮಾಡಿದ ಕೂಡಲೇ ಇದನ್ನು ಬಳಸಲು ಸಾಧ್ಯವಾಗುವುದಿಲ್ಲ. ಇನ್ವೈಟ್ ಮಾಡುವುದರಿಂದ ಇನ್ನೊಬ್ಬರೊಂದಿಗೆ ಮಾತ್ರ ಈ ಆ್ಯಪ್ ನಲ್ಲಿ ವಾಯ್ಸ್ ಚಾಟ್ ಮಾಡಬಹುದಾಗಿದೆ. ಸಕ್ರಿಯ ಬಳಕೆದಾರರು ಮಾತ್ರ ಇನ್ನೊಬ್ಬರಿಗೆ ಆ್ಯಪ್ ನ್ನು ಬಳಸುವಂತೆ ಇನ್ವೈಟ್ ಮಾಡಬಹುದಾಗಿದೆ.

ಇನ್ನು, ಈ ಅಪ್ಲಿಕೇಶನ್ ನಲ್ಲಿ ಚಾಟ್ ಮಾಡುವುದಕ್ಕೆ ಅಥವಾ ಇನ್ನೊಬ್ಬರ ಅಭಿಪ್ರಾಯ ಸಂಗ್ರಹಿಸುವುದಕ್ಕೆ ರೂಮ್ ಕ್ರಿಯೆಟ್ ಮಾಡಿಕೊಳ್ಳಬಹುದಾಗಿದೆ.

ಸದ್ಯ, ಈ ಅಪ್ಲಿಕೇಶನ್ iPhone  ಬಳಕೆದಾರರಿಗೆ ಮಾತ್ರ ಲಭ್ಯವಿದ್ದು, ಸದ್ಯದಲ್ಲೇ ಎಲ್ಲರಿಗೂ ಲಭ್ಯವಾಗಲಿದೆ ಎಂದು ಕ್ಲಬ್ ಹೌಸ್ ನ ಸಿಇಒ ತಿಳಿಸಿದ್ದಾರೆ.

ಓದಿ : ದೇಣಿಗೆ ಸಂಗ್ರಹ ವಿಷಯದಲ್ಲಿ ಯಾರಿಗೂ ಬಲವಂತ ಮಾಡುತ್ತಿಲ್ಲ: ಸಿಎಂ ಬಿಎಸ್ ವೈ

 

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More