ದಾವಣಗೆರೆ: ಚಾಮರಾಜನಗರ ಆಸ್ಪತ್ರೆಯಲ್ಲಿ ಆದ ದುರಂತ, ಹಾಗೂ ಬಿಬಿಎಂಪಿಯಿಂದ ಆಗಿರೋ ಬೆಡ್ ದಾಂಧಲೆ ಬಗ್ಗೆ ಶಾಸಕ ರೇಣುಕಾಚಾರ್ಯ ಹೊನ್ನಾಳಿ ಪಟ್ಟಣದಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಆರೋಗ್ಯ ಸಚಿವ ಕೆ. ಸುಧಾಕರ್ ರಾಜೀನಾಮೆಗೆ ಶಾಸಕ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

‘ಕೆಲ ಸಚಿವರು ತಮ್ಮ ಸ್ವಂತ ಕೆಲಸದಲ್ಲಿ, ಐಷಾರಾಮಿ ಜೀವನದಲ್ಲಿ ಬ್ಯುಸಿ ಇರ್ತಾರೆ, ಆದರೆ ಜನರನ್ನ ರಕ್ಷಣೆ ಮಾಡುವ ಕೆಲಸ ಆಗ್ತಾಯಿಲ್ಲ. ಕೆಲಸ ಮಾಡೋಕೆ ಆಗದೆ ಇದ್ದರೆ ಗೌರವಯುತವಾಗಿ ಮನೆಗೆ ಹೋಗಿ. ಈ ರೀತಿ ಕೆಲಸ ಮಾಡೋದಕ್ಕಾ ಇವರು ಎರಡು ಹುದ್ದೇ ಪಡೆದಿದ್ದು. ಅಲ್ಲಿ, ಪ್ರಧಾನಿ ಮೋದಿ, ಬಿಎಸ್ ಯಡಿಯೂರಪ್ಪರವರು ಹಗಲಿರುಳು ಅನ್ನೋದನ್ನ ನೋಡದೇ, ಕೆಲಸ ಮಾಡುತಿದ್ದಾರೆ. ಇವರಿಗೇನಾಗಿದೆ? ರಾಜೀ‌ನಾಮೆ ಕೊಟ್ಟು ಮನೆಗೆ ಹೋಗ್ಲಿ’ ಅಂತ ಶಾಸಕ ರೇಣುಕಾಚಾರ್ಯ

The post ಸುಧಾಕರ್​ಗೆ ಕೆಲಸ ಮಾಡೋದಕ್ಕೆ ಆಗಲ್ಲ ಅಂದ್ರೆ​ ರಾಜೀನಾಮೆ ಕೊಡ್ಲಿ : ಶಾಸಕ ರೇಣುಕಾಚಾರ್ಯ appeared first on News First Kannada.

Source: newsfirstlive.com

Source link