ಸುಪ್ರೀಂ ವರದಿ ಕೇಳಿದ ಬೆನ್ನಲ್ಲೇ ಇಬ್ಬರನ್ನು ಅರೆಸ್ಟ್ ಮಾಡಿದ UP ಸರ್ಕಾರ

ದೇಶಾದ್ಯಂತ ಭಾರೀ ಸುದ್ದಿಯಾಗಿರುವ ಲಖೀಂಪುರ ಹಿಂಸಾಚಾರ ಪ್ರಕರಣ ಈಗ ಸುಪ್ರೀಂ ಅಂಗಳ ತಲುಪಿದೆ.. ಉತ್ತರ ಪ್ರದೇಶ ಸರ್ಕಾರ ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡಿದೆ.. ಇನ್ನೂ ಘಟನೆಯ ಸಂಪೂರ್ಣ ವರದಿ ನೀಡುವಂತೆ ಯುಪಿ ಸರ್ಕಾರಕ್ಕೆ ಸೂಚನೆ ನೀಡಿದೆ.

ಉತ್ತರ ಪ್ರದೇಶದ ಲಖೀಂಪುರದಲ್ಲಿ ನಡೆದ ರೈತರ ದಾರುಣ ಸಾವಿನ ಪ್ರಕರಣದ ಬಗ್ಗೆ ದೇಶದ್ಯಾಂತ ಭಾರೀ ಚರ್ಚೆಗೆ ವೇದಿಕೆ ಮಾಡಿಕೊಟ್ಟಿದೆ.. ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರಗಳು ಅನ್ನದಾತರ ದಾರುಣ ಹತ್ಯೆ ಮಾಡಲಾಗುತ್ತಿದೆ ಎಂಬ ಆರೋಪಗಳು ಸಹ ಕೇಳಿ ಬರುತ್ತಿವೆ.. ಇನ್ನೂ ಈ ಲಖೀಂಪುರ ಹಿಂಸಾಚಾರದ ಪ್ರಕರಣದಲ್ಲಿ ಯುಪಿ ಸರ್ಕಾರ ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.. ಸರ್ಕಾರದ ಮೇಲೆ ಮಾಡಿದ ಗಂಭೀರ ಆರೋಪವನ್ನು ಈಗ ಸುಪ್ರೀಂ ಕೋರ್ಟ್​ ಗಂಭೀರವಾಗಿ ತೆಗೆದುಕೊಂಡಿದೆ.. ಸ್ವಯಂ ಪ್ರೇರಿತವಾಗಿ ಈ ಹಿಂಸಾಚಾರದ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಸುಪ್ರೀಂ ನಾಳೆಯೊಳಗೆ ಘಟನೆಯ ಸಂಪೂರ್ಣ ವರದಿಯನ್ನು ನೀಡುವಂತೆ ಯುಪಿ ಸರ್ಕಾರಕ್ಕೆ ಖಡಕ್​ ಸೂಚನೆ ನೀಡಿದೆ.

ಈ ಬೆನ್ನಲ್ಲೇ ಲಖೀಂಪುರ ಹಿಂಸಾಚಾರ ಪ್ರಕರಣದಲ್ಲಿ ಇದೀಗ ಇಬ್ಬರು ಆರೋಪಿಗಳನ್ನು ಯುಪಿ ಪೊಲೀಸರು ಬಂಧಿಸಿದ್ದಾರೆ.. ಲವಕುಶ್ ರಾಣಾ ಮತ್ತು ಆಶಿಶ್ ಪಾಂಡೆ ಎಂಬ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.. ಬಂಧಿತ ಆರೋಪಿಗಳು ಆಶಿಶ್​ ಮಿಶ್ರಾ ​ಆಪ್ತ ಸಹಾಯಕರು ಎನ್ನಲಾಗಿದೆ.. ಆದ್ರೆ ಈ ಘಟನೆಯ ರೂವಾರಿ  ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಮಾತ್ರ ನಾಪತ್ತೆಯಾಗಿದ್ದಾರೆ.. ಸುಪ್ರೀಂಕೋರ್ಟ್​ ವರದಿ ಕೇಳಿದ ಕೆಲವೇ ಗಂಟೆಯೊಳಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ನು ಘಟನೆಯಲ್ಲಿ ಕೇಂದ್ರ ರಾಜ್ಯ ಖಾತೆ ಸಚಿವ ಅಜಯ್​ ಮಿಶ್ರಾ ಮಗ ಆಶಿಶ್​ ಮಿಶ್ರಾ ಮಾಡಿರುವ ತಪ್ಪಿಗೆ ನೈತಿಕ ಹೊಣೆ ಹೊರಬೇಕು.. ಜೊತೆಗೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತೆ ಒತ್ತಾಯಿಸಿದ್ದಾರೆ.. ದಾರುಣ ಹತ್ಯೆ ಮಾಡಿರುವ ಆಶಿಶ್​ ಮಿಶ್ರಾ ಅವರನ್ನು ಕೂಡಲೇ ಬಂಧಿಸಬೇಕು.. ಹತ್ಯೆ ಮಾಡಿದವರಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಮೊನ್ನೆಯಷ್ಟೇ ಲಖೀಂಪುರದ ರೈತರ ಹೋರಾಟದ ವೇಳೆ ದಾರುಣವಾಗಿ ಕಾರು ಹರಿಸಿಕೊಂಡು ಹೋಗಿರುವ ವಿಡಿಯೋವೊಂದು ವೈರಲ್​ ಆಗಿತ್ತು.. ಜೊತೆಗೆ ಅದನ್ನು ಪ್ರಿಯಾಂಕಾ ಗಾಂಧಿ ಕೂಡ ಬಿಡುಗಡೆ ಮಾಡಿದ್ರು..ಈಗ ಅದಕ್ಕೆ ಸಂಬಂಧಪಟ್ಟ ಇನ್ನೊಂದು ವಿಡಿಯೋವನ್ನು ಕಾಂಗ್ರೆಸ್​ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ.. ಇನ್ನೂ ಈ ವಿಡಿಯೋವನ್ನು ವರುಣ್​ ಗಾಂಧಿ ಕೂಡ ಹಂಚಿಕೊಂಡಿದ್ದು.. ಈ ವಿಡಿಯೋದಲ್ಲಿ ಎಲ್ಲವೂ ಸ್ಪಷ್ಟವಾಗಿ ಕಾಣುತ್ತಿದೆ.. ಆದರೆ ರೈತರನ್ನು ಹತ್ಯೆ ಮಾಡುವ ಮೂಲಕ ರೈತರ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ…ಇದೀಗ ಮುಗ್ಧ ರೈತರ ರಕ್ತ ಹೊರ ಚೆಲ್ಲಿದೆ.. ಅದಕ್ಕೆ ತಕ್ಕ ತಕ್ಕ ಉತ್ತರ ಕೊಡಬೇಕು..ಪ್ರತಿಯೊಬ್ಬ ರೈತರ ಮನಸಲ್ಲಿ ಪ್ರತೀಕಾರದ ಕಿಡಿ ಹುಟ್ಟುವ ಮೊದಲೇ ಅವರಿಗೆ ನ್ಯಾಯ ಒದಗಿಸಬೇಕು ಎಂದು ಹೇಳಿದ್ದಾರೆ. ಆದ್ರೆ ವರುಣ್‌ ಗಾಂಧಿಯ ಈ ಪೋಸ್ಟ್‌ ಬಿಜೆಪಿಗರನ್ನೇ ಕೆರಳಿಸಿದೆ. ವರುಣ್‌ ಮತ್ತು ಮನೇಕಾ ಗಾಂಧಿಯನ್ನ ಬಿಜೆಪಿ ಹೈಕಮಾಂಡ್‌ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಿಂದ ಕೈ ಬಿಟ್ಟಿದೆ.

ಒಟ್ಟಾರೆ ದೇಶದ್ಯಾಂತ ಭಾರೀ ಸಂಚಲನ ಸೃಷ್ಟಿಸಿರುವ ಲಖೀಂಪುರ ಹಿಂಸಾಚಾರ ಪ್ರಕರಣ ಕ್ಷಣ ಕ್ಷಣಕ್ಕೂ ರೋಮಾಂಚಕ ತಿರುವು ಪಡೆದುಕೊಳ್ತಿದೆ.. ಈ ಘಟನೆಯಿಂದ ಅನ್ನದಾತರಲ್ಲಿ ಹುದುಗಿ ಹೋಗಿದ್ದ ಹೋರಾಟ ಕಿಡಿ ಮತ್ತೆ ಧಗಧಗಿಸತೊಡಗಿದೆ…ಅನ್ನದಾತನ ಈ ಹೋರಾಟದ ಕಿಚ್ಚಿಗೆ ಇದೀಗ ಸರ್ಕಾರವೇ ತುಪ್ಪ ಸುರಿದು ಅಗ್ನಿಸ್ಪರ್ಶ ಮಾಡಿದ್ದು.. ಮುಂದೆ ಯಾವ ರೀತಿಯಲ್ಲಿ ಈ ಕಿಚ್ಚನ್ನು ನಂದಿಸುತ್ತೆ ಎಂಬುದನ್ನು ಕಾದುನೋಡಬೇಕಿದೆ.

News First Live Kannada

Leave a comment

Your email address will not be published. Required fields are marked *