ಸುಮಲತಾರನ್ನ ಭೇಟಿಯಾಗಿ ಬೆಂಬಲ ಕೋರಿದ ಬಿಜೆಪಿ ಅಭ್ಯರ್ಥಿ

ಮಂಡ್ಯ: ಡಿಸೆಂಬರ್ 10 ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಮಂಡ್ಯದಿಂದ ಸ್ಪರ್ಧೆ ಮಾಡಿರುವ ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು ಅವರು ಇಂದು ಮಂಡ್ಯ ಸಂಸದೆ ಸುಮಲತಾ ಅವರನ್ನು ಭೇಟಿ ಮಾಡಿ ಬೆಂಬಲ ಕೋರಿ ಮನವಿ ಮಾಡಿದ್ದಾರೆ.

ಸಂಸದೆ ಸುಮಲತಾ ಅಂಬರೀಶ್ ನಿವಾಸಕ್ಕೆ ಭೇಟಿ ನೀಡಿದ್ದ ಬೂಕಹಳ್ಳಿ ಮಂಜು ಅವರಿಗೆ ಸಚಿವ ಕೆ.ಸಿ.ನಾರಾಯಣ್ ಗೌಡ ಹಾಗೂ ಬಿಜೆಪಿ ಮುಖಂಡರು ಸಾಥ್ ನೀಡಿದ್ದರು. ಈ ವೇಳೆ ಪರಿಷತ್​​ ಚುನಾವಣೆಯಲ್ಲಿ ಬೆಂಬಲಿಸುವಂತೆ ಸಂಸದೆಗೆ ಮನವಿ ಮಾಡಿದರು. ಈ ವೇಳೆ ಸುಮಲತಾ ಅವರು ಬೂಕಹಳ್ಳಿ ಮಂಜು ಅವರಿಗೆ ಶುಭ ಹಾರೈಸಿದರು.

ಮಂಡ್ಯದಲ್ಲಿ ಸುಮಲತಾ ಅವರು ಕಾಂಗ್ರೆಸ್​​ಗೆ ಅಥವಾ ಬಿಜೆಪಿಗೆ ಬೆಂಬಲ ನೀಡುತ್ತಾರಾ ಎಂಬ ಕುತೂಹಲಕ್ಕೆ ತೆರೆ ಎಳೆದಿದ್ದ ಸಂಸದೆ, ನನಗೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಹಾಗೂ ಕಾಂಗ್ರೆಸ್​ ಪಕ್ಷದ ಕಾರ್ಯಕರ್ತರು ಬೆಂಬಲ ನೀಡಿದ್ದಾರೆ. ಆದ್ದರಿಂದ ನಾನು ಇವರಿಗೆ ಬೆಂಬಲ ನೀಡುತ್ತೀನಿ ಅಂತ ಹೇಳಿದ್ರೆ, ಕೆಲವರಿಗೆ ನೋವಾಗುತ್ತದೆ. ಆದ್ದರಿಂದ ನಾನು ಈ ಬಗ್ಗೆ ತಟಸ್ಥವಾಗಿರುತ್ತೇನೆ. ಆದರೆ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಯಾರು ಸೂಕ್ತ ಎನಿಸುತ್ತಾರೆ ಅಂತ ಅಭ್ಯರ್ಥಿಗೆ ಬೆಂಬಲ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದ್ದರು.

News First Live Kannada

Leave a comment

Your email address will not be published. Required fields are marked *