ಸುಮಲತಾ ಬಗ್ಗೆ ಮಾತು –“ಮಹಿಳೆಯರನ್ನು ಗೌರವಿಸೋದು ಕಲೀರಿ” ಎಂದು ಎಚ್ಡಿಕೆಗೆ ಹೇಳಿದ್ಯಾರು?

ಸುಮಲತಾ ಬಗ್ಗೆ ಮಾತು –“ಮಹಿಳೆಯರನ್ನು ಗೌರವಿಸೋದು ಕಲೀರಿ” ಎಂದು ಎಚ್ಡಿಕೆಗೆ ಹೇಳಿದ್ಯಾರು?

ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್​​ ವಿರುದ್ಧ ನಾಲಿಗೆ ಹರಿಬಿಟ್ಟ ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿಗೆ ಮಾಜಿ ಸಚಿವ ಚೆಲುವರಾಯಸ್ವಾಮಿ ಕಿವಿಮಾತು ಹೇಳಿದ್ದಾರೆ. ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಚೆಲುವರಾಯಸ್ವಾಮಿ, ಮಹಿಳೆಯರನ್ನು ಗೌರವಿಸೋದು ನಮ್ಮ ಜವಾಬ್ದಾರಿ. ನಾವಂತೂ ಎಚ್​​.ಡಿ ಕುಮಾರಸ್ವಾಮಿಯವರಿಗೆ ಕುಮಾರಣ್ಣ ಎಂದೇ ಸಂಭೋದಿಸುತ್ತೇವೆ. ಹೀಗಾಗಿ, ನಮ್ಮಂತೆಯೇ ಕುಮಾರಣ್ಣ ಕೂಡ ಮಹಿಳೆಯರಿಗೆ ಗೌರವ ನೀಡೋದು ಕಲೀಬೇಕು ಎಂದರು.

ಮಹಿಳೆಯರ ವಿಚಾರದಲ್ಲಿ ನಾವು ತುಂಬಾ ಸೂಷ್ಮದಿಂದ ಇರಬೇಕು. ಕುಮಾರಣ್ಣ ಹೇಳಿಕೆಯನ್ನು ನಾನು ಸಂಪೂರ್ಣ ಖಂಡಿಸುತ್ತೇನೆ. ಸುಮಲತಾ ಅವರು ಕೆಆರ್​​ಎಸ್​ ಡ್ಯಾಮೇಜ್​ ಆಗಿದೆ ಎಂದಿದ್ದಕ್ಕೆ ಇವರ ಪ್ರತಿಕ್ರಿಯೆ ಸರಿ ಇರಲಿಲ್ಲ. ಕೆಆರ್​ಎಸ್​ ಡ್ಯಾಮ್​​​ ಬಳಿಯೇ ಮಲಗಿ ಬರಲು ಎಂದಿದ್ದಾರೆ. ಇದು ಅತ್ಯಂತ ತುಚ್ಛವಾದ ಹೇಳಿಕೆ ಎಂದು ಕಿಡಿಕಾರಿದರು.

ಹೀಗೆ ಮುಂದುವರಿದ ಚೆಲುವರಾಯಸ್ವಾಮಿ, ಮಾಜಿ ಪ್ರಧಾನಿ ಮಗ ಹೀಗೆ ಮಾತಾಡೋದು ಸರಿಯಲ್ಲ. ಸಂಸದೆಯ ಬಗ್ಗೆ ಇಷ್ಟು ಲಘುವಾಗಿ ಮಾತಾಡಬಾರದು. ಇವರು ಬೆಳಗಾವಿಯ ರೈತ ಮಹಿಳೆಯ ಬಗ್ಗೆಯೂ ಹೀಗೆ ಮಾತನಾಡಿದ್ರು. ಕೆಆರ್​ಎಸ್​ ಬಿರುಕು ಆಗಿದ್ಯಾ? ಇಲ್ವಾ ಅನ್ನೋಕೆ ಟೆಕ್ನಿಕಲ್​​ ಟೀಮ್​ ಇದೆ. ಇದರ ಬಗ್ಗೆ ಸುಮಲತಾ ಮತ್ತು ಕುಮಾರಸ್ವಾಮಿ ಅವರಿಗೆ ಗೊಂದಲವಿದ್ದಲ್ಲಿ ಟೆಕ್ನಿಕಲ್​ ಟೀಮ್​​ನಿಂದ ಸ್ಪಷ್ಟನೆ ಪಡೆಯಲಿ ಎಂದರು.

ಸುಮಲತಾ ಅಂಬರೀಶ್ ಅವರ ಹೇಳಿಕೆ ಹಿಂದಿನ ಕಾಳಜಿ ನಾವು ಅರ್ಥ ಮಾಡಿಕೊಳ್ಳಬೇಕು. ಕೆಆರ್​ಎಸ್​ ಡ್ಯಾಮ್ ಕಾವಲಿಗಾಗಿ ಜಿಯಾಲಜಿಸ್ಟರನ್ನು ಆಯೋಜಿಸಿದ್ದರು. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್​ ಕೇಸ್​ ಮಾಡಲ್ಲ, ಕ್ರಮ ತೆಗೆದುಕೊಳ್ಳಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು ಚೆಲುವರಾಯಸ್ವಾಮಿ.

The post ಸುಮಲತಾ ಬಗ್ಗೆ ಮಾತು –“ಮಹಿಳೆಯರನ್ನು ಗೌರವಿಸೋದು ಕಲೀರಿ” ಎಂದು ಎಚ್ಡಿಕೆಗೆ ಹೇಳಿದ್ಯಾರು? appeared first on News First Kannada.

Source: newsfirstlive.com

Source link