ಸುಮಲತಾ ಬಿಜೆಪಿ ಸೇರಿ ಮಗ ಅಭಿಷೇಕ್ ಗೆ ಮದ್ದೂರು ಕ್ಷೇತ್ರದಿಂದ ಟಿಕೆಟ್​ ಗಿಟ್ಟಿಸಲು ಪ್ರಯತ್ನಿಸುತ್ತಿದ್ದಾರೆಯೇ? | Sumalatha Ambareesh wishes to join BJP and get ticket for her son Abhishek from Maddur constituency ARB


Mandya: ಮಂಡ್ಯದ ಸಂಸತ್ ಸದಸ್ಯೆ ಸುಮಲತಾ ಅಂಬರೀಶ್ (Sumalatha Ambareesh) ಸಹ ಬೇರೆ ರಾಜಕಾರಣಿಗಳ ಹಾಗೆ ಯೋಚಿಸುತ್ತಿದ್ದಾರೆ. ಅವರ ಮಗ ಅಭಿಷೇಕ್ ರನ್ನು (Abhishek) ರಾಜಕೀಯ ಕ್ಷೇತ್ರದಲ್ಲಿ ಲಾಂಚ್ ಮಾಡಲು ಸುಮಲತಾ ಸಕಲ ತಯಾರಿಗಳನ್ನು ಮಾಡಿಕೊಂಡಿದ್ದಾರೆ ಅನಿಸುತ್ತಿದೆ. ಇಲ್ಲಿರುವ ಫೊಟೋಗಳನ್ನು ಗಮನಿಸಿ ಮಾರಾಯ್ರೇ. ಸುಮಲತಾ, ಅಭಿಷೇಕ್ ರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದಾರೆ. ಇದು ಮಂಗಳವಾರದಂದು ಮಂಡ್ಯದಲ್ಲಿ ನಡೆದಿರುವ ಘಟನೆ. ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ಬೊಮ್ಮಾಯಿ ಅವರನ್ನು ತಾಯಿ ಮತ್ತು ಮಗ ಭೇಟಿಯಾಗಿದ್ದಾರೆ. ಫೋಟೋಗಳಲ್ಲಿ ಶಾಸಕ ಸಿಪಿ ಯೋಗೀಶ್ವರ, ಚಿತ್ರ ನಿರ್ಮಾಪಕ ಮತ್ತು ಅಂಬರೀಶ್ ಕುಟುಂಬದ ಆಪ್ತ ರಾಕ್ ಲೈನ್ ವೆಂಕಟೇಶ್ ಮತ್ತು ಸುಮಲತಾ ಬೆಂಬಲಿಗರು ಇದ್ದಾರೆ. ಅಸಲಿಗೆ ವಿಷಯವೇನೆಂದರೆ, ಸುಮಲತಾ ಮಗನಿಗೆ ರಾಜಕೀಯಕ್ಕೆ ತರುವುದರ ಜೊತೆಗೆ ತಾವೂ ಸಹ ಬಿಜೆಪಿ ಸೇರುವ ನಿರ್ಧಾರ ಮಾಡಿಕೊಂಡಿದ್ದಾರೆ.

2023 ರ ವಿಧಾನಸಭಾ ಚುನಾವಣೆಯಲ್ಲಿ ಅಭಿಷೇಕ್ ಗೆ ಮದ್ದೂರು ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಸುಮಲತಾ ಮುಖ್ಯಮಂತ್ರಿಗಳನ್ನು ಕೋರಿದ್ದಾರೆ ಎಂಬ ಸುದ್ದಿಯಿದೆ. ನಮಗೆ ಲಭ್ಯವಿರುವ ಮಾಹಿತಿ ಪ್ರಕಾರ, ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಎಸ್ ಎಮ್ ಕೃಷ್ಣ ಅವರ ಸಹೋದರನ ಮಗ ಗುರುಚರಣ್ ಅವರು ಇದೇ ಕ್ಷೇತ್ರದಿಂದ ಕಣಕ್ಕಳಿಸಲು ಕಾಂಗ್ರೆಸ್ ನಿರ್ಧರಿಸಿದೆ.

ಅಭಿಷೇಕ್ ಸಿನಿಮಾ ಕ್ಷೇತ್ರದಲ್ಲಿ ನಿರೀಕ್ಷಿಸಿದಷ್ಟು ಯಶಕಾಣದ ಕಾರಣ ಸುಮಲತಾ ಮಗನನ್ನು ರಾಜಕೀಯಕ್ಕೆ ತರುವ ನಿರ್ಧಾರ ಮಾಡಿರಬಹುದು. ಮತ್ತೊಂದು ಸಂಗತಿಯೇನೆಂದರೆ ಮುಂದಿನ ತಿಂಗಳು ಸುಮಲತಾ ಅವರು ತನ್ನ ಬೆಂಬಲಿಗರೊಂದಿಗೆ ಬಿಜೆಪಿ ಸೇರಲಿದ್ದಾರಂತೆ. ಬಿಜೆಪಿ ನಾಯಕರನ್ನು ಅವರು ಈಗಾಗಲೇ ಹಲವಾರು ಬಾರಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಅಭಿಷೇಕ್ ಗೆ ಬಿಜೆಪಿ ಟಿಕೆಟ್ ನೀಡುವುದೇ ಅನ್ನೋದು ಕಾದು ನೋಡುವ ಅಂಶವಾಗಿದೆ.

TV9 Kannada


Leave a Reply

Your email address will not be published. Required fields are marked *