‘ಸುಮಲತಾ ಬೆಂಬಲ ಬಿಜೆಪಿ ಪಡೆಯಲಿ, ಆದರೆ..’- ಮಾಜಿ ಸಚಿವ ಚಲುವರಾಯಸ್ವಾಮಿ ಹೀಗ್ಯಾಕಂದ್ರು?

ಮಂಡ್ಯ: ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್​ ಬೆಂಬಲ ಬಿಜೆಪಿಯೇ ಪಡೆದುಕೊಳ್ಳಲಿ ಎಂದು ಕಾಂಗ್ರೆಸ್​​ ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಕೆಎಂ ದೊಡ್ಡಿಯಲ್ಲಿ ಮಾತಾಡಿದ ಚಲುವರಾಯಸ್ವಾಮಿ, ಸುಮಲತಾ ಬೆಂಬಲ ಬಿಜೆಪಿಯೇ ಪಡೆಯಲಿ. ಆದರೆ, ಸುಮಲತಾ ನಮಗೆ ಪರೋಕ್ಷವಾಗಿ ಬೆಂಬಲ ನೀಡಲಿದ್ದಾರೆ ಎಂಬುದು ನನ್ನ ಅಭಿಪ್ರಾಯ ಎಂದರು.

ಸುಮಲತಾ ಬೆಂಬಲ ಬಿಜೆಪಿ ಪಡೆದುಕೊಂಡರೆ, ಕಾಂಗ್ರೆಸ್​​ಗೆ ಏನು ತೊಂದರೆ ಇಲ್ಲ. ನಾವು ಚುನಾವಣೆ ಗೆಲ್ಲುವ ಹಾದಿಯಲ್ಲಿ ಕೆಲಸ ಮಾಡ್ತಿದ್ದೇವೆ. ಸಂಸದೆ ಸುಮಲತಾ ಪರೋಕ್ಷವಾಗಿ ಕಾಂಗ್ರೆಸ್ ಬೆಂಬಲಿಸುತ್ತಾರೆ. ಕಳೆದ ಲೋಕಸಭಾ ಚುನಾವಣೆ ನಾವು ದೂರ ಉಳಿದಿದ್ದೋ, ಆದರೆ ಕಾರ್ಯಕರ್ತರು ಪಕ್ಷಾತೀತವಾಗಿ ದುಡಿದಿದ್ದಾರೆ. ಸುಮಲತಾಗೆ ದುಡಿದ ನಮ್ಮ ಅಭ್ಯರ್ಥಿಯು ಅವರ ಬೆಂಬಲ ಕೇಳಿದ್ದಾರೆ ಎಂದು ಹೇಳಿದರು.

ಸಾಮಾಜಿಕ ಬದಲಾವಣೆ ಬಯಸುವ ಎಲ್ಲರೂ ಕಾಂಗ್ರೆಸ್ ಬೆಂಬಲಿಸುತ್ತಾರೆ. ಎಲ್ಲರು ಬೆಂಬಲ ಕೇಳಬಹುದು. ಬೆಂಬಲ ಯಾರಿಗೆ ಎಂಬುದು ಸಮಲತಾರ ತೀರ್ಮಾನ. ಬಿಜೆಪಿಯವರು ಬೆಂಬಲ ಕೇಳಿದ್ರೆ, ಅವರೇ ಕರೆದುಕೊಳ್ಳಲಿ. ನಮಗೆ ಏನು ತೊಂದರೆಯಾಗಲ್ಲ ಎಂದು ತಿಳಿಸಿದರು.

News First Live Kannada

Leave a comment

Your email address will not be published. Required fields are marked *