ಸುಮಲತಾ ವಿರುದ್ಧ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ

ಮಂಡ್ಯ: ಜೆಡಿಎಸ್ ಕಾರ್ಯಕರ್ತರು ಹಾಗೂ ಕುಮಾರಸ್ವಾಮಿ ಅಭಿಮಾನಿಗಳು ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಾತಾಡುವ ಸ್ವಾತಂತ್ರ್ಯ ಕೆಲವರಿಗೆ ಮಾತ್ರ ಇದೆಯಾ?: ರಾಕ್‍ಲೈನ್ ವೆಂಕಟೇಶ್

ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಿದ ಜೆಡಿಎಸ್ ಕಾರ್ಯಕರ್ತರು ಸುಮಲತಾ ಅಂಬರೀಶ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸುಮಲತಾ ಅವರು ಕೆಆರ್‍ಎಸ್ ಬಿರುಕು ಬಿಟ್ಟಿದೆ ಎಂದು ಸುಳ್ಳು ಹೇಳಿದ್ದಾರೆ. ಈ ರೀತಿಯ ಸುಳ್ಳು ಹೇಳಿಕೆ ನೀಡುವ ಮೂಲಕ ಜಿಲ್ಲೆಯ ಜನರಿಗೆ ಆತಂಕ ಉಂಟು ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಸಿಹಿಯಾದ ಅಂಜೂರ ಹಲ್ವಾ ನೀವು ಮಾಡಿ

ಈ ರೀತಿಯ ಸುಳ್ಳನ್ನು ಅವರು ಪ್ರಚಾರಕ್ಕಾಗಿ ಹೇಳಿದ್ದಾರೆ. ಅಂಬರೀಶ್ ಅಣ್ಣನ ಬಗ್ಗೆ ನಮಗೆಲ್ಲರಿಗೂ ಗೌರವ ಇದೆ. ಅವರ ಹೆಸರಿಟ್ಟುಕೊಂಡು ನೀವು ಗೆದ್ದಿದ್ದೀರಾ, ಅದನ್ನು ಉಳಿಸಿಕೊಳ್ಳಿ. ಕುಮಾರಸ್ವಾಮಿ ವಿರುದ್ಧ ಸುಮ್ಮನೆ ಇಲ್ಲಸಲ್ಲದನ್ನು ಹೇಳಬಾರದು, ಗೌರದಿಂದ ಇರುವುದನ್ನು ಕಲಿಯಬೇಕೆಂದು ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

The post ಸುಮಲತಾ ವಿರುದ್ಧ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ appeared first on Public TV.

Source: publictv.in

Source link